
ಬೆಂಗಳೂರು (ಮೇ.1) : ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ 3ನೇ ರೈಲಿನ ಮೂರು ಬೋಗಿಗಳನ್ನು ಬುಧವಾರ ಕೋಲ್ಕತ್ತಾದ ತೀತಾಘರ್ ರೈಲ್ ಸಿಸ್ಟಂ ಬೆಂಗಳೂರಿಗೆ ರವಾನಿಸಿದ್ದು, ಉಳಿದ ಮೂರು ಬೋಗಿಗಳು ಮೇ 2ರಂದು ಕಳಿಸಲಿದೆ.
ರವಾನಿಸಲಾದ ಬೋಗಿಗಳು ಮೇ 15ರೊಳಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಅಷ್ಟು ಬೋಗಿಗಳ ಬಂದ ಬಳಿಕ ಹೆಬ್ಬಗೋಡಿ ಡಿಪೋದಲ್ಲಿ ಜೋಡಿಸಲಾಗುವುದು. ಬಳಿಕ ವಿವಿಧ ತಪಾಸಣೆಗೆ ಒಳಪಡಿಸಿ ಯಶಸ್ವಿಯಾದ ಬಳಿಕ ಮಾರ್ಗದಲ್ಲಿ ಪ್ರಯೋಗಿಕ ಸಂಚಾರ ಆಗಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಸೌಂದರ್ಯ ಗಬ್ಬೆಬ್ಬಿಸಲು ಬಿಎಂಆರ್‌ಸಿಎಲ್ ಜಾಹೀರಾತು ಒಪ್ಪಂದ
ಸದ್ಯ ಕಳೆದ ವರ್ಷ ಫೆಬ್ರವರಿಯಲ್ಲಿ ಚೀನಾದಿಂದ ಬಂದ ಚಾಲಕ ರಹಿತ ರೈಲು ಹಾಗೂ ಈ ವರ್ಷ ಕೋಲ್ಕತ್ತಾ ಕಳಿಸಿದ್ದ ರೈಲು ಸೇರಿ ಎರಡು ರೈಲುಗಳು ಹಳದಿ ಮಾರ್ಗಕ್ಕಿದೆ. ಇದೀಗ ಮೂರನೇ ರೈಲು ಸೇರ್ಪಡೆ ಬಳಿಕ ಹಳದಿ ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ (19.15 ಕಿಮೀ) ಹಳದಿ ಮಾರ್ಗವನ್ನು ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಹಳದಿ ಮಾರ್ಗವನ್ನು ಸಾಧ್ಯವಾದಷ್ಟು ಬೇಗ ಸೇವೆಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಇದು ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ