ಮಕ್ಕಳಿಗೆ ಚಿನ್ನಾಟ ಹೆತ್ತವರಿಗೆ ಪ್ರಾಣ ಸಂಕಟ; ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆ!

By Ravi Janekal  |  First Published Oct 19, 2024, 9:50 PM IST

ಮನೆ ಬಳಿ ಆಟ ಆಡುತ್ತಿದ್ದ ಮೂವರು ಮಕ್ಕಳು ಏಕಾಏಕಿ ನಾಪತ್ತೆಯಾಗಿ ಪೋಷಕರಲ್ಲಿ ಆತಂಕ ಹುಟ್ಟಿಸಿದ ಘಟನೆ ನಗರದ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ನಡೆದಿದ್ದು ಅದೃಷ್ಟವಶಾತ್ ಅನತಿ ದೂರದ ಶಾಲೆಯೊಂದರ ಬಳಿ ಮಕ್ಕಳು ಪತ್ತೆಯಾಗಿದ್ದಾರೆ.


ಬೆಂಗಳೂರು (ಅ.19): ಮನೆ ಬಳಿ ಆಟ ಆಡುತ್ತಿದ್ದ ಮೂವರು ಮಕ್ಕಳು ಏಕಾಏಕಿ ನಾಪತ್ತೆಯಾಗಿ ಪೋಷಕರಲ್ಲಿ ಆತಂಕ ಹುಟ್ಟಿಸಿದ ಘಟನೆ ನಗರದ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ನಡೆದಿದ್ದು ಅದೃಷ್ಟವಶಾತ್ ಅನತಿ ದೂರದ ಶಾಲೆಯೊಂದರ ಬಳಿ ಮಕ್ಕಳು ಪತ್ತೆಯಾಗಿದ್ದಾರೆ.

ಹರ್ಷಿತ, ನಿಶ್ವಿಕ, ರಶ್ಮಿತ ಎಂಬ ಮೂವರು ಮಕ್ಕಳು ಕಾಣೆಯಾಗಿದ್ದ ಮಕ್ಕಳು. ಇಂದು ಸಂಜೆ 4.30 ರ ಸುಮಾರು ಮನೆ ಮುಂದೆ ಆಟ ಆಡಲು ಮನೆಯಿಂದ ಕೆಳಗಡೆ ಬಂದವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. 

Tap to resize

Latest Videos

ರಾಯಚೂರು: ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ-ಮಗಳು ನಾಪತ್ತೆ

ಪೋಷಕರು ಅಕ್ಕ ಪಕ್ಕ ಹುಡುಕಿದರೂ ಮೂವರು ಮಕ್ಕಳು ಎಲ್ಲೂ ಪತ್ತೆಯಾಗಿರಲಿಲ್ಲ. ಹೀಗಾಗಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪೋಷಕರು. ನಾಪತ್ತೆಯಾಗಿದ್ದ ಮಕ್ಕಳು  ಮನೆಯಿಂದ ಸ್ವಲ್ಪ ದೂರದ ಶಾಲೆಯೊಂದರ ಬಳಿ ಪತ್ತೆಯಾಗಿದ್ದಾರೆ. ದಾರಿ ತಪ್ಪಿ ಬಂದಿದ್ದೇವೆ ಎಂದ ಮಕ್ಕಳು. ಮಕ್ಕಳು ಪತ್ತೆಯಾದ ಬಳಿಕ ನಿಟ್ಟುಸಿರು ಬಿಟ್ಟ ಪೋಷಕರು. 

ಅಪರಿಚಿತ ಏರಿಯಾದಲ್ಲೂ ಮನೆಯಿಂದ ಆಚೆ ಹೋಗಿದ್ದ ಮಕ್ಕಳು. ವಾಪಸ್ ಆಗಲು ಮನೆ ದಾರಿ ಸಿಗದೆ ದಾರಿ ತಪ್ಪಿದ ಮಕ್ಕಳು. ಕೊನೆಗೆ ಮಿಸ್ಸಿಂಗ್ ಪ್ರಕರಣ ಸುಖಾಂತ್ಯ ಕಂಡಿದೆ. ಮಕ್ಕಳಿಗೆ ಚಿನ್ನಾಟ, ಹೆತ್ತವರಿಗೆ ಪ್ರಾಣ ಸಂಕಟ. 

click me!