ಈ ವರ್ಷ ದೇಶದಲ್ಲೇ ಮಳೆಹಾನಿ ಕರ್ನಾಟಕದಲ್ಲೇ ಹೆಚ್ಚು..!

Published : Nov 05, 2022, 08:00 AM IST
ಈ ವರ್ಷ ದೇಶದಲ್ಲೇ ಮಳೆಹಾನಿ ಕರ್ನಾಟಕದಲ್ಲೇ ಹೆಚ್ಚು..!

ಸಾರಾಂಶ

1.8 ದಶಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಹಾನಿ, 117 ಮಂದಿ ಸಾವು, ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌ ಸಂಸ್ಥೆ ವರದಿ

ಬೆಂಗಳೂರು(ನ.05):  ಈ ವರ್ಷದ ಮಳೆಯ ಅಬ್ಬರಕ್ಕೆ ದೇಶದಲ್ಲೇ ಅತಿ ಹೆಚ್ಚು ಕೃಷಿ ಹಾನಿ ಕರ್ನಾಟಕದಲ್ಲಿ ಸಂಭವಿಸಿದೆ. ಅದರಲ್ಲೂ ದಕ್ಷಿಣ ಭಾರತದ ಇತರೆಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗಮನಿಸಿದರೆ ರಾಜ್ಯದಲ್ಲೇ ಮಳೆ ವಿಪರೀತ ಸಂಕಷ್ಟ ತಂದೊಡ್ಡಿದೆ ಎಂದು ಸೆಂಟರ್‌ ಫಾರ್‌ ಸೈನ್ಸ್‌ ಆಂಡ್‌ ಎನ್ವಿರಾನ್‌ಮೆಂಟ್‌ ಸಂಸ್ಥೆಯ ವರದಿ ತಿಳಿಸಿದೆ. 2022ರ ಸಾಲಿನಲ್ಲಿ ಮುಂಗಾರು ಪೂರ್ವ, ಮುಂಗಾರು ಮಳೆ ವಾಡಿಕೆ ಮೀರಿ ಸುರಿದಿದ್ದು ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ, ಕೃಷಿ, ಗೃಹ ಹಾನಿ ದೊಡ್ಡ ಮಟ್ಟದಲ್ಲಿ ರಾಜ್ಯದಿಂದ ವರದಿಯಾಗಿದೆ ಎಂದು ಜನವರಿಯಿಂದ ಸೆಪ್ಟೆಂಬರ್‌ವರೆಗಿನ ದೇಶದ ಹವಾಮಾನ ವಿದ್ಯಮಾನ ಮತ್ತು ಅದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿರುವ ಸಂಸ್ಥೆಯು ತನ್ನ ವರದಿಯಲ್ಲಿ ವಿವರಿಸಿದೆ.

ಜನವರಿ 1ರಿಂದ ಸೆಪ್ಟೆಂಬರ್‌ 30ರ ವರೆಗಿನ ಅವಧಿಯಲ್ಲಿ ದೇಶದಲ್ಲಿ ಹವಾಮಾನ ವೈಪರಿತ್ಯದ ಪ್ರಕರಣಗಳಲ್ಲಿ 2,755 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 69,007 ಪ್ರಾಣಿಗಳ ಜೀವಹಾನಿಯಾಗಿದೆ. 1.8 ದಶಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ತೊಂದರೆಯಾಗಿದ್ದು 4,16,667 ಮನೆಗಳು ಪೂರ್ತಿ ಅಥವಾ ಭಾಗಶಃ ಹಾನಿಗೊಳಗಾಗಿದೆ.

ಅಪಾಯ ಮಟ್ಟಮೀರಿ ಹರಿಯುತ್ತಿರುವ ವೇದಾವತಿ

ರಾಜ್ಯದಲ್ಲಿ 117 ಮಂದಿ ಹವಾಮಾನ ವೈಪರಿತ್ಯದ ಪ್ರಕರಣಗಳಿಗೆ ಬಲಿಯಾಗಿದ್ದಾರೆ. ಅಸ್ಸಾಂನಲ್ಲಿ 280, ಬಿಹಾರ 246, ಮಧ್ಯಪ್ರದೇಶ 276, ಮಹಾರಾಷ್ಟ್ರದಲ್ಲಿ 230, ಹಿಮಾಚಲ ಪ್ರದೇಶ 160, ಗುಜರಾತಲ್ಲಿ 152 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅತೀ ಹೆಚ್ಚು ಸಾವು ಸಂಭವಿಸಿದ ರಾಜ್ಯಗಳಲ್ಲಿ ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಆದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಂದಿ ಪೃಕೃತಿ ವಿಕೋಪಕ್ಕೆ ಬಲಿ ಆಗಿರುವುದು ಕರ್ನಾಟಕದಲ್ಲಿ. ದಕ್ಷಿಣ ಭಾರತದಲ್ಲಿ ರಾಜ್ಯದ ಬಳಿಕ ಅತಿ ಹೆಚ್ಚು ಸಾವು ತಮಿಳುನಾಡಿನಲ್ಲಿ (53) ಘಟಿಸಿದೆ.

ಆದರೆ ಅತ್ಯಧಿಕ ಕೃಷಿ ನಷ್ಟಆಗಿರುವುದು ಕರ್ನಾಟಕದಲ್ಲಿ. ಅಕಾಲಿಕ ಮಳೆ, ಭಾರಿ ಮಳೆ, ಪ್ರವಾಹ ಮುಂತಾದ ಕಾರಣಗಳಿಂದ ರಾಜ್ಯದಲ್ಲಿ 9,96,190 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿನ ಕೃಷಿಗೆ ಹಾನಿಯಾಗಿದೆ. ಎರಡನೇ ಸ್ಥಾನದಲ್ಲಿ ಅಸ್ಸಾಂ ಇದ್ದು ಅಲ್ಲಿ 2,43,929 ಲಕ್ಷ ಹೆಕ್ಟೆರ್‌ನಲ್ಲಿ ಬೆಳೆ ನಷ್ಟವರದಿಯಾಗಿದೆ. ದ. ಭಾರತದ ರಾಜ್ಯಗಳಲ್ಲಿ ಆಂಧ್ರ ಪ್ರದೇಶದಲ್ಲಿ 25,512 ಲಕ್ಷ ಹೆಕ್ಟೇರ್‌ ಕೃಷಿ ಹಾನಿಯಾಗಿದ್ದು ಎರಡನೇ ಸ್ಥಾನದಲ್ಲಿದೆ.

ಇನ್ನೂ ಅಸ್ಸಾಂ ಬಳಿಕ ರಾಜ್ಯದಲ್ಲೇ ಅತಿ ಹೆಚ್ಚು ಮನೆಗಳು ಪೂರ್ಣ ಅಥವಾ ಭಾಗಶಃ ಹಾನಿಗೆ ಒಳಗಾಗಿವೆ. ಅಸ್ಸಾಂನಲ್ಲಿ 3,06,362 ಮನೆಗಳಿಗೆ ಹಾನಿ ಆಗಿದ್ದರೆ ರಾಜ್ಯದಲ್ಲಿ 47,703 ಮನೆಗಳಿಗೆ ಹಾನಿಯಾಗಿದೆ. ರಾಜ್ಯ ಹೊರತು ಪಡಿಸಿದರೆ ತೆಲಂಗಾಣದಲ್ಲಿ 14,858 ಮನೆಗಳು ತೊಂದರೆಗೀಡಾಗಿದೆ. ಉಳಿದಂತೆ ಯಾವುದೇ ಅನ್ಯರಾಜ್ಯದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಮನೆಗಳಿಗೆ ಹಾನಿಯಾಗಿಲ್ಲ. ರಾಜ್ಯದಲ್ಲಿ 1,664 ಪ್ರಾಣಿಗಳು ಮಳೆಗೆ ಬಲಿಯಾಗಿದ್ದು ರಾಜ್ಯ ಮೂರನೇ ಸ್ಥಾನದಲ್ಲಿದೆ. ಅಸ್ಸಾಂನಲ್ಲಿ 54,948, ಮಹಾರಾಷ್ಟ್ರ 4,330 ಪ್ರಾಣಿಗಳು ಪೃಕೃತಿ ವಿಕೋಪಕ್ಕೆ ಆಹುತಿಯಾಗಿವೆ.

ತುಮಕೂರಲ್ಲಿ ನಿಲ್ಲದ ಮಳೆ: ಏಷ್ಯಾದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ಗೆ ನುಗ್ಗಿದ ನೀರು..!

ರಾಜ್ಯದಲ್ಲಿ ಈ ವರ್ಷ ವಿಪರೀತ ಮಳೆಯಾಗಿದ್ದು ವಾಡಿಕೆಗಿಂತ ಶೇ.29ರಷ್ಟುಹೆಚ್ಚಾಗಿದೆ. ಪರಿಣಾಮವಾಗಿ ಪ್ರವಾಹ, ಭೂ ಕುಸಿತ, ಸಿಡಿಲು ಬಡಿತ ಮುಂತಾದ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿದ್ದು ದೇಶದಲ್ಲೇ ಹೆಚ್ಚಿನ ಪ್ರಮಾಣದ ಸಾವುನೋವು, ನಷ್ಟಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಏನೇನು ಹಾನಿ?

ಪ್ರಾಣಹಾನಿ 117
ಕೃಷಿ ಹಾನಿ 9.96 ಲಕ್ಷ ಹೆಕ್ಟೇರ್‌
ಮನೆ ಹಾನಿ 47703
ಪ್ರಾಣಿಗಳ ಸಾವು 1664
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!