
ಕೊಪ್ಪಳ (ನ.20) ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತು ಆಸ್ಟ್ರೇಲಿಯಾ ಗೆದ್ದಿದ್ದಕ್ಕೆ ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಭಾಗ್ಯನಗರ ಸರ್ಕಲ್‌ನಲ್ಲಿ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದ್ದು, ಈ ವ್ಯತಿರಿಕ್ತ ನಡೆಯು ಭಾರತ ತಂಡದ ಅಭಿಮಾನಿಗಳ ಕಟುಟೀಕೆಗೆ ಗುರಿಯಾಗಿದೆ.
ವಿಶ್ವಕಪ್ ನಲ್ಲಿ ಭಾರತ ಸೋಲು ದೇಶಾದ್ಯಂತ ಕ್ರೀಡಾಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ದುಃಖ ಮಡುಗಟ್ಟಿದೆ. ಸತತ ಎಲ್ಲ ಪಂದ್ಯಗಳನ್ನು ಗೆದ್ದು ಬೀಗಿದ್ದ ಭಾರತ ಫೈನಲ್ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತದೆ ಎಂದು ಭರವಸೆ ಮೂಡಿಸಿದ್ದ ಟೀಂ ಇಂಡಿಯಾ ವಿಜಯದ ಹೊಸ್ತಿಲಲ್ಲಿ ಎಡವಿರುವುದು ಭಾರತೀಯರಿಗೆ ನಂಬಲಾಗುತ್ತಿಲ್ಲ. ಭಾರತ ವಿಶ್ವಕಪ್ ಸೋತಿರುವ ಇಂಥ ಸಂದರ್ಭದಲ್ಲೂ ಕಿಡಿಗೇಡಿಗಳು ಪಟಾಕಿ ಹಚ್ಚಿರುವುದು ಆಕ್ರೋಶ ವ್ಯಕ್ತವಾಗಿದೆ.
ಅಬ್ಬಬ್ಬಾ 5 ಸಾವಿರ ಕಿಮೀ ಸೈಕಲ್ ತುಳಿದು ದಾಖಲೆ ಮಾಡಿದ 63ರ ವೃದ್ಧ!
ಪಂದ್ಯ ಸೋತಿದ್ದಕ್ಕೆ ಕೋಟ್ಯಾಂತರ ಕ್ರೀಡಾಭಿಮಾನಿಗಳು ಕಣ್ಣಿರ ಕಡಲಲ್ಲಿ ತೇಲುತ್ತಿದ್ದರೇ ಕೊಪ್ಪಳದಲ್ಲಿ ಕಿಡಿಗೇಡಿಗಳು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಕೃತಿ ಮೆರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ