'ಪ್ಯಾಲೆಸ್ತೇನ್ ಧ್ವಜ ಹಿಡಿದ್ರೆ ತಪ್ಪೇನಿಲ್ಲ..' ಚರ್ಚೆಗೆ ಗ್ರಾಸವಾದ ಸಚಿವ ಜಮೀರ್ ಸಮರ್ಥನೆ!

By Kannadaprabha News  |  First Published Sep 20, 2024, 7:40 AM IST

ಪ್ಯಾಲೆಸ್ಟೈನ್ ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ವಿ ಆರ್ ವಿತ್ ಪ್ಯಾಲೆಸ್ಟೈನ್ ಅಂತ ಹೇಳಿದೆ, ಕೇಂದ್ರ ಸರ್ಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದಿದ್ದಾರೆ. ಧ್ವಜ ಹಿಡಿದಿದ್ರೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದು ವಕ್ಫ್‌ ಖಾತೆ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ.


ಕಲಬುರಗಿ (ಸೆ.20): ಪ್ಯಾಲೆಸ್ಟೈನ್ ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ವಿ ಆರ್ ವಿತ್ ಪ್ಯಾಲೆಸ್ಟೈನ್ ಅಂತ ಹೇಳಿದೆ, ಕೇಂದ್ರ ಸರ್ಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದಿದ್ದಾರೆ. ಧ್ವಜ ಹಿಡಿದಿದ್ರೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದು ವಕ್ಫ್‌ ಖಾತೆ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ರಾಜ್ಯದ ಹಲವಡೆ ಕಿಡಿಗೇಡಿಗಳಿಂದ ಪ್ಯಾಲೆಸ್ಟೈನ್ ಧ್ವಜ ಹಾರಿಸುತ್ತಿರುವ ಬಗ್ಗೆ ಸಚಿವ ಜಮೀರ್‌ ಅಹ್ಮದ್‌ ಸಮರ್ಥಿಸಿಕೊಂಡ ಸಚಿವ, ಬೇರೆ ದೇಶದ ಪರ ಘೋಷಣೆ ಕೂಗಬಾರದು. ಕೂಗಿದ್ರೆ ಅಂತವರು ದೇಶದ್ರೋಹಿಗಳು ಅವರು ಯಾರೇ ಆಗಿರಲಿ ಗಲ್ಲು ಶಿಕ್ಷೆಯಾಗಬೇಕು ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ ಆಮೇಲೆ ಮುಸ್ಲಿಂ. ಯಾರೇ ಆದ್ರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

Latest Videos

ಕುಮಾರಸ್ವಾಮಿಯಂತಹ ರಾಜಕಾರಣಿಗಳಿಂದಲೇ ಗಲಭೆಗಳು ಆಗೋದು: ಸಚಿವ ಜಮೀರ್ ಅಹ್ಮದ್

click me!