ಹಿಜಾಬ್‌ ಕಾರಣ ಪರೀಕ್ಷೆಗೆ ಗೈರು ಹಾಜರಾದರೆ ಮತ್ತೆ ಪರೀಕ್ಷೆ ಇಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

By Kannadaprabha News  |  First Published Mar 21, 2022, 10:41 AM IST

ಹಿಜಾಬ್‌ಗೆ ಪಟ್ಟು ಹಿಡಿದು ಪರೀಕ್ಷೆಗೆ ಗೈರು ಹಾಜರಾದವರಿಗೆ ಮರು ಪರೀಕ್ಷೆ ಇಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಲುವಿನಲ್ಲಿ ಯಾವುದೇ ಹಂತದಲ್ಲೂ ಬದಲಾವಣೆ ಇಲ್ಲ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. 


ಮೈಸೂರು (ಮಾ.21): ಹಿಜಾಬ್‌ಗೆ ಪಟ್ಟು ಹಿಡಿದು ಪರೀಕ್ಷೆಗೆ ಗೈರು ಹಾಜರಾದವರಿಗೆ ಮರು ಪರೀಕ್ಷೆ ಇಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಲುವಿನಲ್ಲಿ ಯಾವುದೇ ಹಂತದಲ್ಲೂ ಬದಲಾವಣೆ ಇಲ್ಲ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹೈಕೋರ್ಟ್‌ ಆದೇಶವನ್ನು ಚಾಚೂ ತಪ್ಪದೆ ಪಾಲಿಸುವುದು ಸರ್ಕಾರದ ಕರ್ತವ್ಯ. 

ಈ ಕರ್ತವ್ಯದಲ್ಲಿ ವಿಫಲರಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದರು. ಇನ್ನು ಶಾಲಾ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಸೇರಿಸುವಂತಹ ಯಾವ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲ ಎಂದ ಮೇಲೆ ಚರ್ಚೆ ಯಾಕೆ ಬೇಕು ಹೇಳಿ? ಈ ಬಗ್ಗೆ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಉಳಿದ ವಿಚಾರ ನನಗೆ ಗೊತ್ತಿಲ್ಲ ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

Tap to resize

Latest Videos

ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ಪ್ರಸ್ತಾಪವೇ ಇಲ್ಲ: ಪಠ್ಯ ಕ್ರಮದಲ್ಲಿ ಭಗವದ್ಗೀತೆ ಸೇರಿಸುವಂತಹ ಯಾವ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲ ಎಂದ ಮೇಲೆ ಚರ್ಚೆ ಯಾಕೆ ಬೇಕು ಹೇಳಿ? ಈ ಬಗ್ಗೆ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಉಳಿದ ವಿಚಾರ ನನಗೆ ಗೊತ್ತಿಲ್ಲ ಎಂದರು. ಕಾಶ್ಮೀರ ಫೈಲ್ಸ್‌ ಚಿತ್ರವನ್ನು ನಾನು ನೋಡಿದ್ದೇನೆ. ನೋಡೋದು ನಮ್ಮ ಇಷ್ಟ, ನೋಡದೆ ಇರೋದು ಕಾಂಗ್ರೆಸ್‌ ಇಷ್ಟ. 

400 ಕೋಟಿ ವೆಚ್ಚದಲ್ಲಿ ಕರ್ನಾಟಕದ ಕೆರೆಗಳ ಅಭಿವೃದ್ಧಿ: ಸಚಿವ ಮಾಧುಸ್ವಾಮಿ

ಯಾರು ಯಾರನ್ನು ಚಿತ್ರ ನೋಡಿ ಎಂದು ಬಲವಂತ ಮಾಡಲು ಆಗಲ್ಲ. ಇತಿಹಾಸದಲ್ಲಿ ಏನೂ ನಡೆದಿದ್ದೆ ಅಂತಾ ಜನರಿಗೆ ಹೇಳಬೇಕು. ಈ ಕೆಲಸವನ್ನು ಈ ಚಿತ್ರ ಮಾಡಿದೆ. ಅದರಲ್ಲಿ ತಪ್ಪೇನಿದೆ. ಒಂದು ಸಮುದಾಯದ ವಿರುದ್ಧದ ಸಿನಿಮಾ ಇದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗದರೆ ನಡೆದ ಘಟನಾವಳಿಗಳನ್ನು ಜನರಿಗೆ ತಿಳಿಸುವುದೆ ಬೇಡ್ವಾ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಗರು ಗದ್ದಲ ಶುರು ಮಾಡಿದ್ದಾರೆ: ರಾಷ್ಟ್ರಧ್ವಜ, ಹಿಜಾಬ್‌ ಮತ್ತು ಕಾಶ್ಮೀರ್‌ ಫೈಲ್ಸ್‌ ನಂತರದಲ್ಲಿ ಚುನಾವಣಾ ವರ್ಷದಲ್ಲಿ ಕೋಮುಗಲಭೆ ಹಬ್ಬಿಸುವ ಭಾಗವಾಗಿ ಇದೀಗ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕೆಂದು ಬಿಜೆಪಿಗರು ಗದ್ದಲ ಶುರು ಮಾಡಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆರೋಪಿಸಿದ್ದಾರೆ.

ನಾನು ನೋಡುತ್ತಿರುವಂತೆ ಈಗಾಗಲೇ ರಾಮಾಯಣ ಮತ್ತು ಮಹಾಭಾರತದ ಕಥೆ ಮತ್ತದರ ತಿಳುವಳಿಕೆಯು ಭಾರತದ ಗ್ರಾಮೀಣ ಜೀವನದ ತನಕವೂ ತಲುಪಿದ್ದು, ಅವು ಗಾದೆಯ ಮಾತುಗಳ ರೂಪದಲ್ಲೂ ಇವೆ. ಶಾಲೆಯ ಪಠ್ಯದಲ್ಲಿ ಈ ಹಿಂದೆ ರಾಮನ ಕಥೆ, ಭೀಮನ ಕಥೆ, ಕರ್ಣನ ಕಥೆ, ಕೃಷ್ಣನ ಕಥೆಯ ಆದಿಯಾಗಿ ಬಹುತೇಕ ಕಥನಗಳನ್ನು ಅಳವಡಿಸಲಾಗಿದ್ದು, ಅದನ್ನು ಮಕ್ಕಳು ಕೂಡಾ ಓದುತ್ತಲೇ ಬಂದಿದ್ದಾರೆ. ಈಗಲೂ ಮನೆಗಳಲ್ಲಿ ಇದರ ಕಥೆಗಳನ್ನು ಹೇಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೀಗಿರುವಾಗ ಭಗವದ್ಗೀತೆಯನ್ನೂ ವಿವಾದಿತ ವಸ್ತುವಾಗಿಸಿಕೊಂಡು ಚುನಾವಣಾ ಸಂದರ್ಭದ ಧರ್ಮಾಧಾರಿತ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ಭಗವದ್ಗೀತೆಯನ್ನು ಸರಿಯಾಗಿ ಓದಿಕೊಂಡರೆ ಅವರು ಮಾಡುತ್ತಿರುವ ಈ ಕೆಲಸ ತಪ್ಪು ಎಂದು ಅವರಿಗೇ ತಿಳಿಯುತ್ತದೆ. ಪುರಾಣದ ಕಥೆಗಳು ನೈತಿಕ ಮಾರ್ಗವನ್ನು, ಮಾನವೀಯತೆಯ ಮಾರ್ಗವನ್ನು ಬೋಧಿಸುತ್ತವೆ. ಆದರೆ, ಬಿಜೆಪಿಗರ ಕೆಟ್ಟನಡೆ ನುಡಿ ಮತ್ತು ಸಮಾಜವನ್ನು ಒಡೆಯುವ ಅವರ ರೀತಿ ನೀತಿಗಳನ್ನು ಗಮನಿಸಿದರೆ ಇವರುಗಳ್ಯಾರೂ ಈ ಪುರಾಣದ ಗ್ರಂಥಗಳನ್ನು ಓದಿಲ್ಲ ಮತ್ತು ಅದರ ತಿಳವಳಿಕೆಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಅವರು ದೂರಿದ್ದಾರೆ.

ಕೇಂದ್ರದಿಂದ ಗುಜರಾತ್‌ಗೆ ಹೆಚ್ಚು, ನಮಗೆ ಕಮ್ಮಿ ಹಣ ಏಕೆ?: ಸದನದಲ್ಲಿ ಬಿರುಸಿನ ಚರ್ಚೆ

ಹಾಗೆ ಅರ್ಥ ಮಾಡಿಕೊಂಡು ಧರ್ಮದ ಮಾರ್ಗದಲ್ಲೇ ಇವರು ಇದ್ದಿದ್ದರೆ, ಇವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರು, ಶೇ.40 ಕಮಿಷನ್‌ ಪಡೆದು ಮಾಡಿ ರಾಜ್ಯದ ಅಭಿವೃದ್ಧಿಗೆ ಕೆಲಸಗಳಿಗೆ ಕಂಟಕವಾಗುತ್ತಿರಲಿಲ್ಲ. ಭ್ರಷ್ಟತೆ, ಮಾನಸಿಕ ವಿಷ ಮತ್ತು ಮೌಢ್ಯತೆಯನ್ನೇ ಉಸಿರಾಡುತ್ತಿರುವ ಇವರಿಗೆ ಭಗವದ್ಗೀತೆ, ಕುರಾನ್‌, ಬೈಬಲ್‌ ಎಂದಿಗೂ ಅರ್ಥವಾಗದ ವಿಷಯಗಳು. ಈ ದಿನ ನಮ್ಮ ಯುವಕರು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಪುರಾಣದ ಕಥೆಗಳೊಂದಿಗೆ ಈ ದೇಶದ ಸಂವಿಧಾನವನ್ನು ತಪ್ಪದೇ ಓದಬೇಕು ಎಂದು ಅವರು ಹೇಳಿದ್ದಾರೆ.

click me!