ಜಪಾನ್ ರೀತಿ 14 ನಿಮಿಷದಲ್ಲೇ ವಂದೇ ಭಾರತ್ ರೈಲು ಸ್ವಚ್ಛಗೊಳಿಸಿದ ಸಿಬ್ಬಂದಿ!

By Ravi Janekal  |  First Published Oct 2, 2023, 5:08 AM IST

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ನಗರದ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 'ಮಿರಾಕಲ್' 14 ನಿಮಿಷಗಳು' ಎಂಬ ಹೆಸರಿನಡಿ ಸ್ವಚ್ಛಗೊಳಿಸುವ ವ್ಯವಸ್ಥೆ ಆರಂಭಿಸಿದೆ.


ಬೆಂಗಳೂರು (ಅ.2): ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ನಗರದ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 'ಮಿರಾಕಲ್' 14 ನಿಮಿಷಗಳು' ಎಂಬ ಹೆಸರಿನಡಿ ಸ್ವಚ್ಛಗೊಳಿಸುವ ವ್ಯವಸ್ಥೆ ಆರಂಭಿಸಿದೆ.

ಭಾನುವಾರ ಮಧ್ಯಾಹ್ನ ಯಶವಂತಪುರ ರೈಲು ನಿಲ್ದಾಣ(Yaswantapur railway station)ಕ್ಕೆ ಆಗಮಿಸಿದ ಕಾಚಿಗುಡ ಯಶವಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌(Vande bharat express) ರೈಲನ್ನು ಕೇವಲ 13 ನಿಮಿಷಗಳಲ್ಲಿ ಸ್ವಚ್ಛಗೊ ಳಿಸಿ ಪ್ರಯಾಣಿಕರಿಗೆ ರೈಲು ಹತ್ತಲು ಸಿದ್ಧಗೊಳಿಸಲಾಯಿತು. ಮೊದಲೇ ಸಿದ್ಧಗೊಂಡಿದ್ದ 25ಕ್ಕೂ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ರೈಲಿನಿಂದ ಪ್ರಯಾಣಿಕರು ಇಳಿದ ತಕ್ಷಣ ಸ್ವಚ್ಛಗೊಳಿಸಿ ಜನರಿಗೆ ಪ್ರಯಾಣಿಸಲು ಮಾಡಿಕೊಟ್ಟರು.

Tap to resize

Latest Videos

ರೈಲಲ್ಲಿ 'ನೀನ್​ ಚಂದಾನೆ' ಹಾಡಿಗೆ ಆ್ಯಂಕರ್​ ಅನುಶ್ರೀ ಸಕತ್​ ಎಂಜಾಯ್​: ಇಲ್ಲೂ ಮದ್ವೆ ವಿಷ್ಯ ಕೆದಕಿದ ಫ್ಯಾನ್ಸ್​!

ಈ ವೇಳೆ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್, ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತಾ ಪ್ರಕ್ರಿ ಯೆಗೆ ಸಮಯ ಕಡಿಮೆ ಇರುವುದರಿಂದ ಪ್ರಯಾಣಿಕರು ಹತ್ತಿ ಇಳಿಸುವುದು ತ್ವರಿತವಾಗಿ ನಡೆಯಬೇಕು. ರೈಲ್ವೆ ಸಚಿವರ ಪರಿಕಲ್ಪನೆಯಂತೆ ಜಾರಿಗೆ ಬರುತ್ತಿದೆ. ಇದು ನಿರಂತರವಾಗಿರಲಿದೆ ಎಂದರು.

click me!