ವರ್ಷದೊಳಗೆ ಬೆಂಗಳೂರು ರೋಡ್‌ನಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು

By Kannadaprabha News  |  First Published Jan 2, 2021, 7:23 AM IST

ಲೆಕ್ಟ್ರಿಕ್‌ ಬಸ್‌ಗೆ ಟೆಂಡರ್‌ ನಾಲ್ಕು ಕಂಪನಿಗಳು ಭಾಗಿ | ವರ್ಷದೊಳಗೆ ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸೇವೆ ಸಾಧ್ಯತೆ.


ಬೆಂಗಳೂರು(ಜ.02): ಬಿಎಂಟಿಸಿ ಗುತ್ತಿಗೆ ಆಧಾರದಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ನಾಲ್ಕು ಕಂಪನಿಗಳು ಭಾಗಿಯಾಗಿವೆ. ಕೇಂದ್ರದ ಫೇಮ್‌-2 ಯೋಜನೆ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 12 ಮೀಟರ್‌ ಉದ್ದದ 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ನಿಗಮ ತೀರ್ಮಾನಿಸಿದೆ.

ಅದರಂತೆ ಎಲೆಕ್ಟ್ರಿಕ್‌ ಬಸ್‌ ಪೂರೈಸಲು ಕರೆಯಲಾಗಿದ್ದ ಟೆಂಡರ್‌ನಲ್ಲಿ ಒಲೆಕ್ಟ್ರಾ ಗ್ರೀನ್‌ ಟೆಕ್‌, ಟಾಟಾ, ವೀರ್‌ ವಾಹನ ಹಾಗೂ ಅಶೋಕ್‌ ಲೇಲ್ಯಾಂಡ್‌ ಕಂಪನಿಗಳು ಭಾಗಿಯಾಗಿವೆ. ಟೆಂಡರ್‌ ಪ್ರಕ್ರಿಯೆ ಚುರುಕುಗೊಂಡಿದ್ದು, ಕಂಪನಿಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

Tap to resize

Latest Videos

ಬಿಜೆಪಿ ನಾಯಕನ ಮನೆ ಮುಂದೆ ಸಗಣಿ ರಾಶಿ ರಾಶಿ!

ಈ ಹಿಂದೆ ಎರಡು ಬಾರಿ ಕರೆದಿದ್ದ ಟೆಂಡರ್‌ ವಿವಿಧ ಕಾರಣಗಳಿಂದ ರದ್ದಾಗಿತ್ತು. ಪ್ರಸ್ತುತ ಮೂರನೇ ಬಾರಿ ಟೆಂಡರ್‌ ಆಹ್ವಾನಿಸಲಾಗಿತ್ತು. ನಾಲ್ಕು ಕಂಪನಿಗಳು ಬಸ್‌ ಪೂರೈಸಲು ಟೆಂಡರ್‌ನಲ್ಲಿ ಭಾಗಿಯಾಗಿವೆ. ಹೀಗಾಗಿ ಹಂತ ಹಂತವಾಗಿ ಟೆಂಡರ್‌ ಪ್ರಕ್ರಿಯೆ ನಿರ್ವಹಿಸಲಾಗುವುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದೊಳಗೆ ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸೇವೆ ಲಭ್ಯವಾಗಲಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಯೋಗಿಕ ಸಂಚಾರಕ್ಕೆ ಬಸ್‌ ನೀಡಲು ಲೇಲ್ಯಾಂಡ್‌ ಆಸಕ್ತಿ

ಟೆಂಡರ್‌ ಹೊರತುಪಡಿಸಿ ಆಸಕ್ತ ಕಂಪನಿಗಳಿಂದ ಎಲೆಕ್ಟ್ರಿಕ್‌ ಬಸ್‌ ಪ್ರಾಯೋಗಿಕ ಸಂಚಾರಕ್ಕೆ ಬಿಎಂಟಿಸಿ ಆಹ್ವಾನಿಸಿತ್ತು. ಮೊದಲಿಗೆ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿ ನೀಡಿದ್ದ ಎಲೆಕ್ಟ್ರಿಕ್‌ ಬಸ್ಸನ್ನು ನಗರದ ಆಯ್ದ ಮಾರ್ಗಗಳಲ್ಲಿ 30 ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಪ್ರಸ್ತುತ ಜೆಬಿಎಂ ಕಂಪನಿಯ ಬಸ್ಸಿನ ಪ್ರಾಯೋಗಿಕ ಸಂಚಾರ ನಡೆಯುತ್ತಿದ್ದು, ಮುಕ್ತಾಯದ ಹಂತ ತಲುಪಿದೆ. ಇದೀಗ ಅಶೋಕ ಲೇಲ್ಯಾಂಡ್‌ ಕಂಪನಿ ಪ್ರಾಯೋಗಿಕ ಸಂಚಾರಕ್ಕೆ ಬಸ್‌ ನೀಡಲು ಆಸಕ್ತಿವಹಿಸಿದ್ದು, ಬಿಎಂಟಿಸಿಯನ್ನು ಸಂಪರ್ಕಿಸಿದೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ನಗರದಲ್ಲಿ ಮೂರನೇ ಎಲೆಕ್ಟ್ರಿಕ್‌ ಬಸ್‌ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

click me!