
ಲಂಡನ್ (ಮೇ 30, 2023): ಬ್ರಿಟನ್ ಪ್ರವಾಸದಲ್ಲಿರುವ ಅದಮ್ಯ ಚೇತನ ಟ್ರಸ್ಟ್‌ನ ಸ್ಥಾಪಕಿ, ಅಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್ ಅವರು ಲ್ಯಾಂಬೆತ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಲ್ಯಾಂಬೆತ್‌ನ ಬಸವೇಶ್ವರ ಫೌಂಡೇಶನ್ ಹಾಗೂ ಬ್ರಿಟನ್‌ನ ಬಸವ ಸಮಿತಿ ಆಯೋಜನೆ ಮಾಡಿತ್ತು.
ತೇಜಸ್ವಿನಿ ಅನಂತ್‌ಕುಮಾರ್ ಅವರು ತಮ್ಮ ಪುತ್ರಿ ವಿಜೇತಾ ಅನಂತ್‌ಕುಮಾರ್ ಅವರೊಂದಿಗೆ ಲ್ಯಾಂಬೆತ್‌ಗೆ ಭೇಟಿ ನೀಡಿದ್ದು, ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದರು. ಈ ವೇಳೆ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಮುಖ್ಯಸ್ಥ ನೀರಜ್ ಪಾಟೀಲ್ ಸೇರಿದಂತೆ ಲ್ಯಾಂಬೆತ್‌ನ ಹಲವು ಕನ್ನಡಿಗರು ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ನೀರಜ್ ಪಾಟೀಲ್, 1997ರಲ್ಲಿ ಅದಮ್ಯ ಚೇತನ ಎಂಬ ಟ್ರಸ್ಟ್ ಸ್ಥಾಪನೆ ಮಾಡಿದ ತೇಜಸ್ವಿನಿ ಅವರು ಅನ್ನ, ಅಕ್ಷರ, ಆರೋಗ್ಯ ಸೇರಿದಂತೆ ಹಲವು ಉಪಕ್ರಮಗಳ ಕುರಿತಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: Uttara Kannada: ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ
ಈ ಬಸವೇಶ್ವರ ಮೂರ್ತಿಯನ್ನು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು, ಲಂಡನ್‌ನಲ್ಲಿ ಸ್ಥಾಪನೆಯಾದ ಮೊದಲ ಬಸವೇಶ್ವರ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: Raichur ಭಾವೈಕ್ಯತೆಗೆ ಸಾಕ್ಷಿಯಾದ ಬಸವ ಜಯಂತಿ, ರಂಜಾನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ