ಪ್ರಧಾನಿಗೆ ಚೋಳರ ಸೆಂಗೋಲ್‌, ಸಿಎಂ ಸಿದ್ದರಾಮಯ್ಯನಿಗೆ ಪೆರಿಯಾರ್‌ ಸೆಂಗೋಲ್‌

Published : Jun 17, 2023, 04:49 PM IST
ಪ್ರಧಾನಿಗೆ ಚೋಳರ ಸೆಂಗೋಲ್‌, ಸಿಎಂ ಸಿದ್ದರಾಮಯ್ಯನಿಗೆ ಪೆರಿಯಾರ್‌ ಸೆಂಗೋಲ್‌

ಸಾರಾಂಶ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮಿಳುನಾಡು ಮೂಲದ ಸಂಘನೆಯೊಂದು ಸಾಮಾಜಿಕ ನ್ಯಾಯಕ್ಕಾಗಿ ಸೆಕ್ಯೂಲರ್ ಸೆಂಗೋಲ್‌ ವಿತರಣೆ ಮಾಡಲಾಗುತ್ತಿದೆ. 

ಬೆಂಗಳೂರು (ಜೂ.17): ದೇಶದ ನೂತನ ಸಂಸತ್‌ಭವನ ಉದ್ಘಾಟನೆ ವೇಳೆ ರಾಜದಂಡವಾದ ಸೆಂಗೋಲ್‌ ಅನ್ನು ವೈದಿಕ ಧರ್ಮದ ಆಚಾರ್ಯರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲಾಗಿತ್ತು. ಈಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮಿಳುನಾಡು ಮೂಲದ ಸಂಘನೆಯೊಂದು ಸಾಮಾಜಿಕ ನ್ಯಾಯಕ್ಕಾಗಿ ಸೆಕ್ಯೂಲರ್ ಸೆಂಗೋಲ್‌ ವಿತರಣೆ ಮಾಡಲಾಗುತ್ತಿದೆ. 

ತಮಿಳುನಾಡಿನ ಮಧುರೈನ ಮಕ್ಕಳ್ ಸಮುದಾಯ ನಿಧಿ ಪೆರ್ವೈ (ಜನರ ಸಾಮಾಜಿಕ ನ್ಯಾಯ ಮಂಡಳಿ)ಯು ಶನಿವಾರ ಸಂಜೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೆರಿಯಾರ್ ಅವರ ವಿಗ್ರಹವನ್ನು ಹೊಂದಿರುವ ಸಾಮಾಜಿಕ ನ್ಯಾಯದ ಸೆಂಗೋಲ್ ಅನ್ನು ನೀಡಲಿದೆ. ಸಮುದಾಯ ನಿಧಿ ಪೆರ್ವೈ ಅಧ್ಯಕ್ಷ ಮನೋಹರನ್, ಗಣೇಶನ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿಗಳಿಗೆ ಚಿನ್ನದ ಲೇಪಿತ ಸೆಂಗೋಲನ್ನು ವಿತರಣೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳಿಗೆ ಸೆಂಗೋಲ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ನ್ಯಾಯವನ್ನು ಉಳಿಸಲು ಬಯಸುತ್ತದೆ. ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಇಂಡಿಯಾ ಟುಡೇ ವರದಿ ಮಾಡಿದೆ.

ಅನ್ನಭಾಗ್ಯ ಯೋಜನೆಗೆ ಮತ್ತೆ ಹಿನ್ನಡೆ: ಅಕ್ಕಿ ಸರಬರಾಜು ಸಾಧ್ಯವಿಲ್ಲವೆಂದ ತೆಲಂಗಾಣ ಸರ್ಕಾರ

ಇನ್ನು ಸೆಂಗೋಲ್ ಎನ್ನುವುದು ಅಧಿಕಾರ ಮತ್ತು ಶಕ್ತಿಯನ್ನು ಸೂಚಿಸುವ ರಾಜದಂಡ ಅಥವಾ ದಂಡವಾಗಿದೆ. ತಮಿಳು ಸಂಸ್ಕೃತಿಯಲ್ಲಿ, ಇದು ಸದಾಚಾರವನ್ನು ಸೂಚಿಸುತ್ತದೆ. ಮೇ ತಿಂಗಳಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದಲ್ಲಿ 'ಸೆಂಗೋಲ್' ಸ್ಥಾಪಿಸಿದ್ದರು. ತಮಿಳುನಾಡಿನ ಐತಿಹಾಸಿಕ ಸೆಂಗೋಲ್ ಅನ್ನು ಆಗಸ್ಟ್ 14, 1947 ರಂದು ಅಧಿಕಾರ ವರ್ಗಾವಣೆಗೆ ಅಧಿಕೃತವಾಗಿ ಬಳಸಲಾಯಿತು. ಲಾರ್ಡ್ ಮೌಂಟ್‌ಬ್ಯಾಟನ್ ಅವರು ಜವಾಹರಲಾಲ್ ನೆಹರು ಅವರಿಗೆ ಸ್ವಾತಂತ್ರ್ಯವನ್ನು ಸಾಧಿಸುವುದನ್ನು ಸಂಕೇತಿಸಲು ಒಂದು ಚಿಹ್ನೆಯನ್ನು ಆಯ್ಕೆ ಮಾಡಲು ಕೇಳಿಕೊಂಡಿದ್ದರು. ಈ ವೇಳೆ ಸ್ವತಂತ್ರ ಭಾರತದ ಸರ್ಕಾರಕ್ಕೆ ಸಾರ್ವಭೌಮತ್ವದ ವಸ್ತು ಸೂಚಕ ಅಗತ್ಯವಿತ್ತು. ಇಲ್ಲಿ 'ಸೆಂಗೊಲ್' ಕಲ್ಪನೆ ಬಂದಿತು. 

ಚೋಳರ ಸಂಪ್ರದಾಯದಂತೆ ಸೆಂಗೋಲ್‌ ಮೂಲಕ ಸ್ವಾತಂತ್ರ್ಯ ಹಸ್ತಾಂತರ: ಸ್ವಾತಂತ್ರ ಬಂದಾಗ ಭಾರತದ ಗವರ್ನರ್-ಜನರಲ್ ಆಗಿದ್ದ ಸಿ. ರಾಜಪೋಗಲಾಚಾರಿ ಅವರೊಂದಿಗೆ ಜವಾಹರಲಾಲ್‌ ನೆಹರು ಅವರು ಸಮಾಲೋಚಿಸಿದರು. ತಮಿಳುನಾಡಿನಲ್ಲಿ ಒಬ್ಬ ರಾಜ ಅಧಿಕಾರ ಮುಕ್ತಾಯಗೊಳಿಸಿ ತನ್ನ ಅಧಿಕಾರವನ್ನು ಹಸ್ತಾಂತರ ಮಾಡುವ ತಮಿಳುನಾಡು ರಾಜವಂಶದ ಪದ್ದತಿಯನ್ನು ಅನುಸರಿಸಲು ಶಿಫಾರಸು ಮಾಡಿದರು. ಚೋಳರ ಸೆಂಗೋಲ್ ಸಂಪ್ರದಾಯದಲ್ಲಿ ರಾಜದಂಡವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ರಾಜಾಜಿಗೆ ನೀಡಲಾಗಿತ್ತು. ಇದಾದ ನಂತರ ಸೆಂಗೋಲ್‌ ಅಭಿವೃದ್ಧಿ ಮಾಡಿ ವಿತರಣೆ ಮಾಡಲಾಗಿತ್ತು.

ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ: ಸಚಿವ ಮಹದೇವಪ್ಪ ಮಾಹಿತಿ

ತಮಿಳುನಾಡಿ ಧಾರ್ಮಿಕ ವಿಧಿ-ವಿಧಾನದಂತೆ ಸೆಂಗೋಲ್‌ ಅಳವಡಿಕೆ: ಇನ್ನು ಇತ್ತೀಚೆಗೆ ಉದ್ಘಾಟನೆಗೊಂಡ ಸಂಸತ್‌ ಭವನದಲ್ಲಿ ಸಭಾಧ್ಯಕ್ಷರ ಆಸನದ ಪಕ್ಕದಲ್ಲಿ ವಿಧ್ಯುಕ್ತವಾಗಿ ರಾಜದಂಡ (ಸೆಂಗೋಲ್‌) ಅಳವಡಿಸಲಾಗಿದೆ. ಹೊಸ ಸಂಸತ್ ಭವನದಲ್ಲಿ ಇದನ್ನು ಸ್ಥಾಪಿಸುವ ಮೊದಲು, ತಮಿಳುನಾಡಿನ ವಿವಿಧ ಮಠಗಳ ಪ್ರಧಾನ ಅರ್ಚಕರು ಮೋದಿ ಅವರಿಗೆ ಐತಿಹಾಸಿಕ 'ಸೆಂಗೋಲ್‌' ಹಸ್ತಾಂತರಿಸಿದರು. ಅಮೃತ ಕಾಲದ ರಾಷ್ಟ್ರೀಯ ಚಿಹ್ನೆಯಾಗಿ ಸೆಂಗೋಲ್ ಅನ್ನು ಅಳವಡಿಸಿಕೊಳ್ಳುವ ನಿರ್ಧಾರವನ್ನು ಪ್ರಧಾನಿ ಮೋದಿ ತೆಗೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್