ಅನ್ನಭಾಗ್ಯ ಯೋಜನೆಗೆ ಮತ್ತೆ ಹಿನ್ನಡೆ: ಅಕ್ಕಿ ಸರಬರಾಜು ಸಾಧ್ಯವಿಲ್ಲವೆಂದ ತೆಲಂಗಾಣ ಸರ್ಕಾರ

By Sathish Kumar KH  |  First Published Jun 17, 2023, 2:57 PM IST

ತೆಲಂಗಾಣದಲ್ಲಿ ಕರ್ನಾಟಕಕ್ಕೆ ಪೂರೈಕೆ ಮಾಡುವಷ್ಟು ಅಕ್ಕಿ ದಾಸ್ತಾನಿಲ್ಲ ಎಂದು ಹೇಳಿದ್ದು, ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಭಾರಿ ಹಿನ್ನಡೆಯಾಗಿದೆ.


ಬೆಂಗಳೂರು (ಜೂ.17): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡುವ ಕಾರ್ಯಕ್ಕೆ ಮತ್ತೊಮ್ಮೆ ಭಾರಿ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಕೊಡುವುದಿಲ್ಲವೆಂದು ಹೇಳದ ನಂತರ ತೆಲಂಗಾಣದಿಂದ ಅಕ್ಕಿಯನ್ನು ಕೇಳಲಾಗುತ್ತು. ಆದರೆ, ಈಗ ತೆಲಂಗಾಣದಲ್ಲಿಯೂ ಕರ್ನಾಟಕಕ್ಕೆ ಅಕ್ಕಿ ಪೂರೈಕೆ ಮಾಡುವಷ್ಟು ಅಕ್ಕಿ ದಾಸ್ತಾನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು., ಹೊರರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ, ತೆಲಂಗಾಣದಿಂದ ಅಕ್ಕಿ ಪೂರೈಕೆ ಮಾಡುವಂತೆ ನಾನೇ ಸ್ವತಃ ಅಲ್ಲಿನ ಮುಖ್ಯಮಂತ್ರಿಯೊಂದಿಗೆ ಮಾತಾಡಿದ್ದೇನೆ. ಆದರೆ, ಅಕ್ಕಿ ಸಿಗುತ್ತಿಲ್ಲವಂತೆ. ಆದ್ದರಿಂದ ಮತ್ತೊಮ್ಮೆ ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮತ್ತೊಮ್ಮೆ ಮಾತುಕರೆ ಮಾಡುವಂತೆ ಸೂಚನೆ ನೀಡಿದ್ದೇನೆ. ಒಟ್ಟಾರೆ ತೆಲಂಗಾಣದಿಂದ ಅಕ್ಕಿ ಇಲ್ಲವೆಂದು ಹೇಳಲಾಗಿದ್ದು, ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಖರೀದಿ ಮಾಡಲು ಪ್ರಯತ್ನ ಮುಂದುವರೆದಿದೆ ಎಂದು ತಿಳಿಸಿದರು. 

Latest Videos

undefined

ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ: ಸಚಿವ ಮಹದೇವಪ್ಪ ಮಾಹಿತಿ

ಛತ್ತೀಸ್‌ಘಡದಿಂದ 1.5 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಪೂರೈಕೆ:  ಇನ್ನು ಛತ್ತೀಸ್‌ಘಡದಿಂದ ಅಕ್ಕಿ ಪೂರೈಕೆ ಮಾಡುವಂತೆ ಕೇಳಿದಾಗ ಅದಕ್ಕೆ ಅಲ್ಲಿನ ಮುಖ್ಯಮಂತ್ರಿ ಅಕ್ಕಿ ಸರಬರಾಜು ಮಾಡಲು ಒಪ್ಪಿಕೊಂಡಿದ್ದರು. ಅದರಂತೆ, ಛತ್ತೀಸ್‌ಘಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋದಾಗಿ ಹೇಳಿದ್ದಾರೆ. ಆದರೆ, ಛತ್ತೀಸ್‌ಘಡದ ಅಕ್ಕಿಗೆ ಸ್ವಲ್ಪ ದರ ಜಾಸ್ತಿಯಾಗುತ್ತಿದೆ. ಜೊತೆಗೆ, ಸಾಗಣೆ ವೆಚ್ಚವೂ ಜಾಸ್ತಿ ಆಗುತ್ತಿದೆ. ಇಂದು ಸಂಜೆ ಮತ್ತೊಮ್ಮೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ಮಾಡಿದ ನಂತರ, ಛತ್ತೀಸ್‌ಘಡದಿಂದ ಅಕ್ಕಿ ಖರೀದಿ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು.

ವಿಜಯೇಂದ್ರ ಬಳಿ ಅಕ್ಕಿ ಇದೆನಾ? ಇದ್ರೆ ಅವರೇ ಕೊಡಸಲಿ: ಕಮೀಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡ್ತಿದಾರೆ ಎಂಬ ವಿಜಯೇಂದ್ರ ಆರೋಪ ಮಾಡಿದ್ದಾರೆ. ಆದರೆ, ವಿಜಯೇಂದ್ರನೇ ನಮಗೆ ಅಕ್ಕಿ ಕೊಡಿಸಲಿ. ರಾಜ್ಯದ ಜನತೆಗೆ ಪೂರೈಕೆ ಮಾಡುವಷ್ಟು ಅಕ್ಕಿ ವಿಜಯೇಂದ್ರ ಅವರ ಮಿಲ್ ನಲ್ಲಿ ಇದೆಯಾ? ಸುಮ್ನೆ ಮಾತಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು. 

ತೆಲಂಗಾಣದಲ್ಲಿ ನಮ್ಮ ಅಧಿಕಾರಿಗಳಿದ್ದಾರೆ: ಮುಖ್ಯಮಂತ್ರಿಯೊಂದಿಗೆ ಅನ್ನಭಾಗ್ಯ ಯೋಜನೆ ಬಗ್ಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಕೇಂದ್ರದಿಂದ ಅಕ್ಕಿಯನ್ನ ಕೊಡೋದ್ರಲ್ಲಿ ರಾಜಕಾರಣ ಮಾಡ್ತಿದೆ. ಕೇಂದ್ರ ಸರ್ಕಾರ ಮಲತಾಯಿ ಥೋರಣೆ ಮಾಡ್ತಿದೆ. ನಮ್ಮ ಅಧಿಕಾರಿಗಳು ತೆಲಂಗಾಣಕ್ಕೆ ತೆರಳಿದ್ದಾರೆ. ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕ ಮಾಡಿದ್ದಾರೆ. ತೆಲಂಗಾಣ ಮತ್ತು ಛತ್ತೀಸ್‌ಘಡ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ತೆಲಂಗಾಣಕ್ಕೆ ನಮ್ಮ ಅಧಿಕಾರಿಗಳು ಹೋಗಿದ್ದಾರೆ. ಇವತ್ತು ಸಂಜೆ ನಗೆ ವರದಿ ಸಿಗಲಿದೆ. ನಾವು ನಾಳೆ ಅಥವಾ ಸೋಮವಾರ ಫೈನಲ್ ಆಗಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು ಎಂದರು.

 

ಕರ್ನಾಟಕದ ಅಕ್ಕಿ ಖರೀದಿ ಒಪ್ಪಂದ ರದ್ದುಗೊಳಿಸಿದ ಕೇಂದ್ರ ಸರ್ಕಾರ: ಜುಲೈ 1ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ

ಅಕ್ಕಿ ಕೊಡೋ ದಿನಾಂಕ ಸೋಮವಾರ ಘೋಷಣೆ ಮಾಡ್ತೀವಿ: ರಾಜ್ಯದ ಜನತೆಗೆ ನಾವು ಕೊಟ್ಟ ಭರವಸೆಯಂತೆ ಅಕ್ಕಿ ಕೊಡುವುದಂತೂ ನಿಶ್ಚಿತ. ಯಾವತ್ತಿಂದ ಕೊಡೋದಕ್ಕೆ ಅನುಕೂಲ ಅಂತ ತೀರ್ಮಾನ ಮಾಡಬೇಕಾಗುತ್ತದೆ. ಅಲ್ಲಿಂದ ಸಾಗಾಣೆಗೆ ತಡವಾಗಬಹು. ಕೇಂದ್ರ ಸರ್ಕಾರದ ಅಡಿಯ ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾದಲ್ಲಿ ಅಕ್ಕಿ ದಾಸ್ತಾನು ಸಾಕಷ್ಟಿದೆ ಎಂದು ನಾವು ದಿನಾಂಕ ಘೋಷಣೆ ಮಾಡಿದ್ದೆವು. ಈಗ ನಾವು ಬೇರೆ ವ್ಯವಸ್ಥೆ ಮಾಡ್ತೀವಿ. ಪಾಸಿಟಿವ್ ರೆಸ್ಪನಾನ್ಸ್ ಸಿಕ್ಕಿದೆ. ಯಾವಾಗಿಂದ ರಾಜ್ಯದ ಜನತೆಗೆ ಅಕ್ಕಿ ಕೊಡುತ್ತೇವೆ ಎಂಬುದನ್ನು ಸೋಮವಾರದಂದು ಹೇಳುತ್ತೇವೆ ಎಂದು ತಿಳಿಸಿದರು. 

click me!