ಕಾವೇರಿ ಆಯ್ತು ಈಗ ಮಾರ್ಕಂಡೇಯ ನದಿ ನೀರಿಗೆ ತಮಿಳುನಾಡು ಖ್ಯಾತೆ

By Kannadaprabha NewsFirst Published Jul 4, 2021, 8:39 AM IST
Highlights
  • ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ 0.5 ಟಿಎಂಸಿ ಸಾಮರ್ಥ್ಯದ ಡ್ಯಾಮ್‌ ನಿರ್ಮಾಣ
  • ಡ್ಯಾಮ್‌ ನಿರ್ಮಿಸಿರುವುದಕ್ಕೆ ತಮಿಳುನಾಡು ಆಕ್ಷೇಪ 
  •  ನದಿ ವಿವಾದ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಮಂಡಳಿ ರಚನೆ ಮಾಡಬೇಕು ಎಂದು ಆಗ್ರಹ

ಚೆನ್ನೈ (ಜು.04): ಕರ್ನಾಟದಲ್ಲಿ ದಕ್ಷಿಣ ಪಿನಾಕಿನಿ ಎಂದು ಕರೆಯಲ್ಪಡುವ ಪೊನ್ನೈಯಾರ್‌ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ 0.5 ಟಿಎಂಸಿ ಸಾಮರ್ಥ್ಯದ ಡ್ಯಾಮ್‌ ನಿರ್ಮಿಸಿರುವುದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

ಕರ್ನಾಟಕ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿರುವುದರಿಂದ ಕೃಷ್ಣಗಿರಿ ಜಿಲ್ಲೆಯ 870 ಹೆಕ್ಟೇರ್‌ ಪ್ರದೇಶದ ನಿರಾವರಿ ಪ್ರದೇಶಕ್ಕೆ ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ನದಿ ವಿವಾದ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಮಂಡಳಿ ರಚನೆ ಮಾಡಬೇಕು ಎಂದು ತಮಿಳುನಾಡು ನೀರಾವರಿ ಸಚಿವ ದುರೈ ಮುರುಗನ್‌ ಅವರು ಶನಿವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮೇಕೆ​ದಾ​ಟು, ಕಾವೇರಿ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್‌ ದೂರು

ಇದೇ ವೇಳೆ ತಮಿಳುನಾಡಿನ ರೈತರ ಹಿತದೃಷ್ಟಿಯಿಂದ ಮತ್ತು ರಾಜ್ಯದ ಹಕ್ಕನ್ನು ಎತ್ತಿಹಿಡಿಯುವ ನಿಟ್ಟಿನಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತಮಿಳುನಾಡು ಸರ್ಕಾರ ಕೈಗೊಳ್ಳಲಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸಿತ್ತು. ಯೋಜನೆಗೆ ತಡೆ ನೀಡುವಂತೆ 2018ರಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಇದರ ಹೊರತಾಗಿಯೂ ಡ್ಯಾಂ ನಿರ್ಮಾಣ ಯೋಜನೆ ಬಹುತೆಕ ಪೂರ್ಣಗೊಳ್ಳುವ ಹಂತ ತಲುಪಿದೆ ಎಂದು ಅವರು ಆರೋಪಿಸಿದ್ದಾರೆ.

ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳವ ಸಲುವಾಗಿ ತಮಿಳುನಾಡು ಸಿಎಂಗೆ ಬಿಎಸ್‌ವೈ ಪತ್ರ ..

ಏನಿದು ವಿವಾದ? ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಉಗಮವಾದ ಮಾರ್ಕಂಡೇಯ ನದಿ, ಕರ್ನಾಟಕದ ಕೋಲಾರ, ಹೊಸಕೋಟೆ, ಕಾಡುಗೋಡಿ, ಬಾಗಲೂರು, ಹೊಸೂರಿನ ಮೂಲಕ ಹರಿದು ತಮಿಳುನಾಡಿನ ಪೊನ್ನೈಯಾರ್‌ ನದಿಯನ್ನು ಸೇರುತ್ತದೆ. ಕೋಲಾರದ ಬಂಗಾರಪೇಟೆ ತಾಲೂಕಿನ ಯರಗೋಲ್‌ ಗ್ರಾಮದ ಸಮೀಪ ಡ್ಯಾಮ್‌ ನಿರ್ಮಿಲಾಗಿದೆ. 0.5 ಟಿಎಂಎಸಿ ಸಾಮರ್ಥ್ಯದ ಡ್ಯಾಂ ಇದಾಗಿದೆ. ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಡ್ಯಾಂ ನಿರ್ಮಿಸಲಾಗಿದ್ದು, ಇದರಿಂದ ತಮಿಳುನಾಡಿಗೆ ಹರಿಯುವ ನೀರಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಈಗಾಗಲೇ ಸಷ್ಟಪಡಿಸಿದೆ. ಇದರ ಹೊರತಾಗಿಯೂ ಯೋಜನೆಗೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿದೆ.

click me!