PSI Recruitment Scam: ಕಾನೂನು ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ, ಗೃಹ ಸಚಿವ ಡಾ ಪರಮೇಶ್ವರ

Published : Jun 11, 2023, 10:16 PM IST
PSI Recruitment  Scam: ಕಾನೂನು ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ, ಗೃಹ ಸಚಿವ ಡಾ ಪರಮೇಶ್ವರ

ಸಾರಾಂಶ

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಪಿಎಸ್ ಐ ಹಗರಣ ಬಗ್ಗೆ ಕಾನೂನು ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಎಂದು ಗೃಹ ಸಚಿವ ಡಾ ಪರಮೇಶ್ವರ್ ಹೇಳಿದ್ದಾರೆ.

ತುಮಕೂರು (ಜೂ.11): ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಪಿಎಸ್ ಐ ಹಗರಣ ಬಗ್ಗೆ ಕಾನೂನು ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಎಂದು ಗೃಹ ಸಚಿವ ಡಾ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಶಕ್ತಿ ಯೋಜನೆ ಅಧಿಕೃತವಾಗಿ ಚಾಲನೆ ನೀಡಿದ ನಂತರ  ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು  ಸಾಧಕ ಬಾಧಕಗಳನ್ನು ಚರ್ಚೆ ಮಾಡಿಯೇ ಯೋಜನೆ ಜಾರಿಗೆ ಮಾಡಲಾಗಿದೆ. ಯಾವ ರೀತಿ ಖರ್ಚು‌ ಭರಿಸಬೇಕು ಎಂಬುವುದನ್ನು ಚರ್ಚಿಸಿ ಅನುಷ್ಠಾನ ಮಾಡಲು ಹೊರಟಿದ್ದಿವಿ ಎಂದರು.

ಯಾರಿಗೂ ಆತಂಕ ಅನುಮಾನ ಬೇಡ. ರಾಜ್ಯದ ಯೋಜನೆ ಕಾರ್ಯಕ್ರಮ ಗಳು ಹಾಗೇ ಮುಂದುವರೆಸುತ್ತೇವೆ. ಸರ್ಕಾರದಲ್ಲಿ ದುಂದು ವೆಚ್ಚ ಅಥವಾ ಪೋಲಾಗುತ್ತಿದ್ದ ಹಣ  ಉಳಿತಾಯ ಮಾಡಿ, ಆ ಹಣದಿಂದ ಈ ಯೋಜನೆಗೆ ಖರ್ಚು ಮಾಡಿತಿವಿ ಎಂದರು. ಜನತೆಗೆ ಯಾವುದೇ ಅನುಮಾನ ಬೇಡ. ಮಹಿಳೆಯರಿಗೆ ಸಬಲಿಕರಣ ಆಗಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ  ಮಾಡಿದಿವಿ ಎಂದರು.

100 ಕ್ಕೂ ಹೆಚ್ಚು ಮಂದಿ ಪತ್ನಿಯನ್ನು ಅರೆ ಬೆತ್ತಲೆಗೊಳಿಸಿ ದಾಳಿ ನಡೆಸಿದ್ದಾರೆ: ಭಾರತೀಯ

ಸ್ತ್ರೀ ಸಂಘ ಮಾಡಿದಿವಿ ಅದು ಇಂದು ಕೂಡ ಮುಂದುವರೆದಿದೆ‌. ಉಚಿತ ಪ್ರಯಾಣ ಮಾಡಲು ಸವಲತ್ತು ಅವಕಾಶ ಮಾಡಿಕೊಡಲಾಗಿದೆ‌. ಎಲ್ಲಾ ಕಡೆ ಇದು ಆರಂಭವಾಗಿದೆ ಎಂದರು. ವಿದ್ಯುತ್ ಬಿಲ್ ಹೆಚ್ಚು ಬಂದ ವಿಚಾರ‌, ಇದು ಕೆಲವರು ಕ್ರಿಯೆಟ್ ಮಾಡ್ತಿದ್ದಾರೆ. ವಿದ್ಯುತ್ ಬಳಸಿದ್ದರೇ ಅದಕ್ಕೆ ಹಣ ಕಟ್ಟಬೇಕು. ಸರ್ಕಾರದಿಂದ ಯಾವುದೇ ಬಿಲ್ ಹೆಚ್ಚಳ ಮಾಡಿಲ್ಲ ಎಂದರು. ಮೀಟರ್ ಜಾಸ್ತಿ ಬಂದಾಗ ಅವರು ಕಟ್ಟಲೇಬೇಕು. ನಾವು ಯಾವುದೇ ಬಿಲ್ ಹೆಚ್ಚಿಸಿಲ್ಲ. ಹಿಂದಿನ ಸರ್ಕಾರ ಮಾಡಿದ್ದು ಅಷ್ಟೇ. ಎಲ್ಲಾ ಯೋಜನೆ ಮುಂದುವರೆಯಲಿದೆ. ಯಾವುದು ಕೂಡ ನಿಲ್ಲುವುದಿಲ್ಲ ಎಂದರು.

Shakti Scheme: ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಕಿರಿಕಿರಿ ಮಾಡಿದರೆ ಕಟ್ಟುನಿಟ್ಟಿನ

ನಾವು ಸ್ಪಷ್ಟ ವಾಗಿ ಹೇಳಿದ್ದೇವೆ. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಲಕ್ಸುರಿ,ಎಸಿ,ವೋಲ್ವಾ ಬಸ್ ಗಳನ್ನು ಬಿಟ್ಟು ಉಳಿದ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು. ಕೆಲವು ರೂಟ್ ಗಳಲ್ಲಿ ಖಾಸಗಿ ಬಸ್ ಗಳಲ್ಲಿ ಓಡಾಡುತ್ತಿವೆ ಎಂದರು. ಆ ಕಡೆ ಸರ್ಕಾರಿ ಬಸ್ ಗಳಿದ್ದರೇ ಅನುಕೂಲ ಪಡೆಯಬಹುದು. ರಾಜ್ಯದವರು ಎಂದು ಗೊತ್ತಾಗಲಿ ಎಂದು ಐಡಿ ವಿತರಣೆ. ಸೇವಾ ಸಿಂಧುನಲ್ಲಿ ಅರ್ಜಿ ವಿಚಾರ. ಶುರುವಿನಲ್ಲಿ ರಶ್ ಇರುತ್ತದೆ. ಸ್ವಲ್ಪ ದಿನಗಳ ಬಳಿಕ ಸರಿಯಾಗಲಿದೆ ಎಂದರು.

ಸ್ತ್ರೀ ಸಂಘಗಳ ಸಾಲ ಮನ್ನಾ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದರು. ಪೊಲೀಸರ ವರ್ಗಾವಣೆ ವಿಚಾರ. ಅಗತ್ಯಕ್ಕೆ ಅನುಗುಣವಾಗಿ ಪೊಲೀಸರ ವರ್ಗಾವಣೆ ಆಗಲಿದೆ. ಅದೇ ದೊಡ್ಡ ಒಂದು ಉದ್ಯೋಗ ಆಗುವುದಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!