National Youth Day 2024: ಯುವಜನತೆಯ ಪರಮಾದರ್ಶ ವಿವೇಕಾನಂದ..!

By Kannadaprabha NewsFirst Published Jan 12, 2024, 1:29 PM IST
Highlights

ನೀವು ನಿಮ್ಮನ್ನು ನಂಬದ ಹೊರತು ದೇವರನ್ನು ನಂಬಲು ಸಾಧ್ಯವಿಲ್ಲ ಎಂಬ ವಿವೇಕಾನಂದ ವಾಣಿಯಂತೆ ಯುವಕರು ತಮ್ಮೊಳಗಿನ ಆತ್ಮವಿಶ್ವಾಸವನ್ನು ಹಾಗೂ ಸಾಮರ್ಥವನ್ನು ನಂಬಿ ಸಾಗಿದರೆ ನಮಗೆ ಯಶಸ್ಸು ತಾನಾಗಿಯೇ ಒಲಿಯುತ್ತದೆ.

ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ದುರ್ಬಲಗೊಳಿಸುವ ಯಾವುದೇ ವಿಷಯವಾದರೂ ಅದು ವಿಷವಿದ್ದಂತೆ, ಅದನ್ನು ನಾವಾಗಿಯೇ ತಿರಸ್ಕರಿಸಬೇಕಿದೆ ಎಂದು ವಿವೇಕಾನಂದರು ಹೇಳುತ್ತಾರೆ. ಅದರಂತೆ ಆ ಮಹಾನ್ ದಾರ್ಶನಿಕನ ಜನ್ಮದಿನ ನಮ್ಮಲ್ಲೂ ಬದಲಾವಣೆ ಬೀಜ ಮೊಳೆಯುವಂತೆ ಮಾಡಲಿ.

ಕುಟುಂಬದಲ್ಲಿ ಜನಿಸಿದ ವಿವೇಕಾನಂದರ ಮೊದಲ ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನ ಚಿಕ್ಕಂದಿನಿಂದಲೇ ದತ್ತ, ತಾಯಿ ಭುವನೇಶ್ವರಿ ದೇವಿ. ಚಿಕ್ಕ ನರೇಂದ್ರನ ವ್ಯಕ್ತಿತ್ವ ಮತ್ತು ಚಿಂತನೆಗಳು ತಂದೆಯ ಸಂವೇದನಾಶೀಲ ಗುಣ ಹಾಗೂ ತಾಯಿಯ ಧಾರ್ಮಿಕ ನಂಬಿಕೆ, ಮನೋಭಾವದಿಂದ ಹೆಚ್ಚು ಪ್ರಭಾವಿತವಾಗಿದ್ದವು. ತನ್ನ ತಾಯಿ ಹೇಳುತ್ತಿದ್ದ ಆಧ್ಯಾತ್ಮಿಕ ಕತೆಗಳನ್ನು ಕೇಳಿಸಿಕೊಂಡು ಬೆಳೆದ ನರೇಂದ್ರ ಬದುಕಿದ್ದು 39 ವರ್ಷ ಮಾತ್ರ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ತಿಳಿಸಿ ಧ್ಯಾನದಲ್ಲೇ ದೇವರನ್ನು ಕಂಡ ಮಹಾಪುರುಷ ಸ್ವಾಮಿ ವಿವೇಕಾನಂದರು.

Latest Videos

National Youth Day 2024: ರಾಷ್ಟ್ರಕಾರ್ಯದ ಮಹಾ ಪ್ರೇರಣೆ ಸ್ವಾಮಿ ವಿವೇಕಾನಂದರು..!

ತತ್ವಶಾಸ್ತ್ರ, ಧರ್ಮ, ಸಮಾಜವಿಜ್ಞಾನ, ಇತಿಹಾಸ, ಕಲೆ ಮತ್ತು ಸಾಹಿತ್ಯ ಆತನ ನೆಚ್ಚಿನ ವಿಷಯಗಳು. ಪುರಾಣಗಳು, ವೇದಗಳು, ಉಪನಿಷತ್ತುಗಳುಮತ್ತು ಧಾರ್ಮಿಕಗ್ರಂಥಗಳನ್ನು ಹೆಚ್ಚಾಗಿ ಓದುತ್ತಿದ್ದ ನರೇಂದ್ರನಿಗೆ ಆಧ್ಯಾತ್ಮಿಕ ವಿಷಯದತ್ತ ಒಲವು ಹೆಚ್ಚಿತ್ತು.

ರಾಮಕೃಷ್ಣ ಪರಮಹಂಸ ಮತ್ತು ನರೇಂದ್ರ

ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡ ನರೇಂದ್ರನಾಥರು ರಾಮಕೃಷ್ಣ ಪರಮಹಂಸರ ಬಳಿ ಬಂದು 'ದೇವರು ದೇವರು ಎಂದು ಹೇಳುತ್ತೀರಲ್ಲಾ! ಎಲ್ಲಿದ್ದಾನೆ ದೇವರು? ನನಗೆ ಪುರಾವೆ ಬೇಕು ತೋರಿಸಿ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ರಾಮಕೃಷ್ಣರು 'ನಾನೇ ಪುರಾವೆ, ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ' ಎಂದು ಹೇಳುತ್ತಾರೆ. ಈ ಉತ್ತರದಿಂದ ಪುಳಕಿತನಾದ ನರೇಂದ್ರ ಹಾಗಾದರೆ ನನಗೂ ದೇವರನ್ನು ತೋರಿಸಿ ಎಂದು ಕೇಳಿಕೊಳ್ಳುತ್ತಾರೆ. ರಾಮಕೃಷ್ಣರು ಈ ಹುಡುಗನ ಆಂತರ್ಯ ಅರಿತು ಆಧ್ಯಾತ್ಮಿಕತೆಯ ಒಲವು, ಆಸಕ್ತಿಯನ್ನು ಮನಗಂಡು ತಮ್ಮ ಶಿಷ್ಯರನ್ನಾಗಿ ಮಾಡಿಕೊಳ್ಳುತ್ತಾರೆ. ನರೇಂದ್ರ ಲೌಕಿಕ ಸುಖಗಳನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುತ್ತಾರೆ. ರಾಮಕೃಷ್ಣ ಪರಮಹಂಸರ ಶಿಷ್ಯನಾದ ನರೇಂದ್ರ,

ಇಂದು ಸ್ವಾಮಿ ವಿವೇಕಾನಂದ ಜಯಂತಿ

ಸ್ವಾಮಿ ವಿವೇಕಾನಂದರಾಗುತ್ತಾರೆ. ನಂತರ ವಿವೇಕಾನಂದರು ಭಾರತೀಯ ವೇದಾಂತ ಮತ್ತು ಯೋಗದ ತತ್ವ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮೊದಲಿಗರಾದರು.

ಶಿಕಾಗೋ ಧರ್ಮ ಸಮ್ಮೇಳನ

ಸ್ವಾಮಿ ವಿವೇಕಾನಂದರು ಶ್ರೇಷ್ಠವಾಗ್ನಿ, ಸಂತ ಮತ್ತು ದಾರ್ಶನಿಕರಲ್ಲಿ ಒಬ್ಬರಾಗಿದ್ದರು. ಅವರ ದಿವ್ಯಜ್ಞಾನವನ್ನು ಅರಿತ ರಾಮಕೃಷ್ಣ ಪರಮಹಂಸರು 1893ರಲ್ಲಿ ಅಮೆರಿಕದ ಶಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಸೂಚಿಸುತ್ತಾರೆ. ಅಲ್ಲಿ ಹಿಂದೂ ಧರ್ಮದ ಬಗ್ಗೆ ಮಾತನಾಡಿದ ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಜನರನ್ನು ಸೆಳೆಯುತ್ತಾರೆ.

ರಾಮಕೃಷ್ಣ ಮಿಷನ್ ಸ್ಥಾಪನೆ

ಸ್ವಾಮಿ ವಿವೇಕಾನಂದರು 1897ರ ಮೇ 1ರಂದು ಕೊಲ್ಕತ್ತಾದಲ್ಲಿ ರಾಮಕೃಷ್ಣ ಮಿಷನ್ ಎಂಬ ಆಧ್ಯಾತ್ಮಕ ಸಮಾಜವನ್ನು ಸ್ಥಾಪಿಸಿದರು. ಪಡಿಸುತ್ತದೆ. ಇಲ್ಲಿ ವೇದಾಂತದ ಸಂದೇಶ ಸಾರುವ, ಭಾರತೀಯರ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳು ನಡೆದವು. ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ತತ್ವಶಾಸ್ತ್ರದ ಶಾಲೆಯಾಗಿ ರಾಮಕೃಷ್ಣ ಮಿಷನ್ ಕೆಲಸ ಮಾಡಿದೆ. ಪ್ರಮುಖ ದೇಶಗಳಲ್ಲಿ ರಾಮಕೃಷ್ಣ ಮಿಷನ್‌ ಮಿಷನರಿಗಳು ಇದ್ದು, ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ.

ಯುವಕರಿಗೆ ವಿವೇಕಾನಂದ ಆದರ್ಶ

ವಿವೇಕಾನಂದರಂತಹ ಮಹಾಪುರುಷರನ್ನು ಕಂಡ ಭಾರತ ದೇಶವು ಅತಿಹೆಚ್ಚು ಯುವಕರನ್ನೇ ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ದಾರಿ ತಪ್ಪುವುದು ಹೆಚ್ಚುತ್ತಿದೆ. ದೇಶದ ಏಳಿಗೆಗಾಗಿ ಶ್ರಮಿಸಬೇಕಿರುವ ಯುವಜನತೆ ಇಂದು ಆಧುನಿಕ ಜಗತ್ತಿನ ಐಷಾರಾಮಿ ಮೋಜುಗಳ ಮೋಹದ ಬಲೆಯಲ್ಲಿ ಸಿಲುಕಿದೆ. ಪಬ್, ಪಾರ್ಟಿ ಎಂದು ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿರುವ ದೊಡ್ಡ ಸಂಖ್ಯೆಯ ಯುವಕರು ನಗರಗಳಲ್ಲಿ ಕಾಣಸಿಗುತ್ತಾರೆ. ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲೇ ಬ್ಯುಸಿಯಾಗಿರುತ್ತಾರೆ. ಮೊಬೈಲ್ ಇಂದಿನ ಯುವಜನತೆಯ ಏಕಾಗ್ರತೆಯನ್ನು ಕಿತ್ತುಕೊಂಡಿದೆ. ಮಾದಕ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಎಲ್ಲ ಅಭ್ಯಾಸಗಳು ದೇಶದ ಅಮೂಲ್ಯ ಯುವಸಂಪತ್ತನ್ನು ಹಾಳುಮಾಡುತ್ತಿವೆ. ದೇಶ ನಿರ್ಮಾಣದಲ್ಲಿ ಹಾಗೂ ದೈಯಕ್ತಿಕ ಸಾಧನೆಯಲ್ಲಿ ಶ್ರೇಷ್ಠತೆಯತ್ತ ಸಾಗಬೇಕಾದ ಯುವಸಮೂಹವು ವಿವೇಕಾನಂದರ ಬದುಕಿನ ಆದರ್ಶಗಳಿಂದ ತಿಳಿದುಕೊಳ್ಳಬೇಕಾದುದು ಸಾಕಷ್ಟಿದೆ.

National Youth Day 2023: ವಿವೇಕಾನಂದರ ಈ ಜೀವನ ಪಾಠ ತಿಳ್ಕೊಂಡ್ರೆ ಲೈಫ್‌ನಲ್ಲಿ ಸಕ್ಸಸ್ ಸಿಗೋದು ಖಂಡಿತ

ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಇಂದು ಅವರ ಜೀವನದ ಬಗ್ಗೆ ಅರಿತು, ಅವರ ಹೇಳಿಕೊಟ್ಟ ಮಾರ್ಗದಲ್ಲಿ ದೇಶಪ್ರೇಮವನ್ನು ಬೆಳೆಸಿಕೊಳ್ಳೋಣ. ನಮ್ಮತನವನ್ನು ಉಳಿಸಿಕೊಂಡು ನಿರ್ದಿಷ್ಟ ಗುರಿಯತ್ತ ಸಾಗೋಣ.
ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ದುರ್ಬಲಗೊಳಿಸುವ ಯಾವುದೇ ವಿಷಯವಾದರೂ ಅದು ವಿಷವಿದ್ದಂತೆ, ಅದನ್ನು ನಾವಾಗಿಯೇ ತಿರಸ್ಕರಿಸಬೇಕಿದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಅದರಂತೆ ಆ ಮಹಾನ್ ದಾರ್ಶನಿಕನ ಜನ್ಮದಿನ ನಮ್ಮಲ್ಲೂ ಬದಲಾವಣೆ ಬೀಜ ಮೊಳೆಯುವಂತೆ ಮಾಡಲಿ, ನೀವು ನಿಮ್ಮನ್ನು ನಂಬದ ಹೊರತು ದೇವರನ್ನು ನಂಬಲು ಸಾಧ್ಯವಿಲ್ಲ ಎಂಬ ವಿವೇಕಾನಂದ ವಾಣಿಯಂತೆ ಯುವಕರು ತಮ್ಮೊಳಗಿನ ಆತ್ಮವಿಶ್ವಾಸವನ್ನು ಹಾಗೂ ಸಾಮರ್ಥವನ್ನು ನಂಬಿ ಸಾಗಿದರೆ ನಮಗೆ ಯಶಸ್ಸು ತಾನಾಗಿಯೇ ಒಲಿಯುತ್ತದೆ.

ಯವಕರ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದವರು ವಿವೇಕಾನಂದ ಅವರ ಚಿಂತನೆ, ತತ್ವಾದರ್ಶಗಳು ಯುವಜನತೆಗೆ ಮಾದರಿ. 'ಏಳಿ ಎದ್ದೇಳಿ ನಿಮ್ಮ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂದು ಸಂದೇಶ ಸಾರಿ ಯುವಕರಲ್ಲಿ ಹೊಸ ಚೈತನ್ಯ ತುಂಬಿದ ವೀರಸನ್ಯಾಸಿ. 1863 ಜನವರಿ 12ರಂದು ಕೊಲ್ಕತ್ತಾದಶ್ರೀಮಂತ: ಗೋಪಾಲ್ ಪುರುಷೋತ್ತಮ ವೈ.ಎನ್.ಹೊಸಕೋಟೆ

click me!