ಚಾಕು ಇರಿಯುತ್ತಿದ್ದ ಪಾಗಲ್ ಪ್ರೇಮಿಯಿಂದ ಯುವತಿ ರಕ್ಷಿಸಿದ ಮಂಗಳೂರು ನರ್ಸ್

By Suvarna News  |  First Published Dec 21, 2019, 11:23 PM IST

ಜೀವದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಕಾಪಾಡಿದವರಿಗೆ ನಮ್ಮ ನಮನ/ ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಶೌರ್ಯ ಪ್ರಶಸ್ತಿ ಸನ್ಮಾನ/  ಕರ್ನಾಟಕದ ನಿಜವಾದ ಹೀರೋಗಳು ನಿಮ್ಮ ಮುಂದೆ/ ಸಾಹಸ ಮೆರೆದವರಿಗೆಲ್ಲ ಅಭಿನಂದನೆ/ ಪಾಗಲ್ ಪ್ರೇಮಿಯಿಂದ ಚೂರಿ ಇರಿತಕ್ಕೆ ಒಳಗಾದ ಯುವತಿ ರಕ್ಷಿಸಿದ ನರ್ಸ್


ಬೆಂಗಳೂರು(ಡಿ. 21)   ಈಕೆಯ ಹೆಸರು ನಿಮ್ಮಿ ಸ್ಟೀಫನ್. ಕೇರಳದ ತ್ರಿವೆಂಡ್ರಂ ನಿವಾಸಿ.. ಮಂಗಳೂರಿನ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವತ್ತು 2019ರ ಜೂನ್ 29ರ ಸಂಜೆ  ಆಸ್ಪತ್ರೆಯ ಹಿಂದೆ ಪಾಗಲ್ ಪ್ರೇಮಿ ಯುವತಿಗೆ ಚಾಕುವಿನಿಂದ ಇರಿಯುತ್ತಿದ್ದ.

ಆ ಹುಡುಗಿಯ ಆರ್ತನಾದ ಕೇಳಿ ಕಿಟಕಿಯಿಂದ ನೋಡಿದ ನಿಮ್ಮಿ ತಕ್ಷಣ ಆ್ಯಂಬುಲೆನ್ಸ್ ಚಾಲಕನಿಗೆ ಕರೆಮಾಡಿ ಬರಹೇಳಿದರು. ಘಟನೆ ನಡೆದ ಸ್ಥಳಕ್ಕೆ ಓಡಿಹೋದರು. ಆ ಯುವಕ ಇನ್ನೂ ಇರಿಯುತ್ತಲೇ ಇದ್ದ. ಅವನ ಹತ್ತಿರ ಹೋಗುವ  ಧೈರ್ಯ ಯಾರಿಗೂ ಇರಲಿಲ್ಲ. ನಿಮ್ಮಿ ಧೈರ್ಯ ತೆಗೆದುಕೊಂಡು ಮುನ್ನುಗ್ಗಿ ಅವನನ್ನು ಹಿಮ್ಮೆಟ್ಟಿಸಿದರು. ಆಗಲೇ ಆತ 14 ಬಾರಿ ಇರಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಹುಡುಗಿಯನ್ನು ತುರ್ತುನಿಗಾ ಘಟಕಕ್ಕೆ ಸೇರಿಸಿದರು ನಿಮ್ಮಿ. ತಿಂಗಳುಗಟ್ಟಲೆ ಚಿಕಿತ್ಸೆ ಬಳಿಕೆ ಆ ಹುಡುಗಿ ಈಗ ಮತ್ತೆ ಕಾಲೇಜಿಗೆ ತೆರಳುತ್ತಿದ್ದಾಳೆ.

Tap to resize

Latest Videos

40 ಪ್ರಯಾಣಿಕರ ಜೀವ ಉಳಿಸಿದ ತುಕಾರಾಂ

 ಕ್ಷೇಮ ಆಸ್ಪತ್ರೆ ಮುಖ್ಯಸ್ಥ ವಿನಯ್ ಹೆಗ್ಡೆ ನಗದು ಪುರಸ್ಕಾರ, ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆ್ ಇಂಡಿಯಾ ಮತ್ತು ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆ್ ಕರ್ನಾಟಕ ನೀಡುವ ರಾಷ್ಟ್ರೀಯ ಮಟ್ಟದ ನೈಟಿಂಗೇಲ್ ಪ್ರಶಸ್ತಿ ನರ್ಸ್ ಅವರಿಗೆ ದೊರೆತಿದೆ.

ಆಯುಧ ಕೈಯಲ್ಲಿರುವ ಉನ್ಮತ್ತ ವ್ಯಕ್ತಿಗಳ ಎದುರಿಗೆ ಹೋಗಲು ಯಾರಾದರೂ ಹೆದರುತ್ತಾರೆ. ಅವರು ಯಾರಿಗೆ ಇರಿಯುತ್ತಾರೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಅದು ಗೊತ್ತಿದ್ದು ಬಹಳ ಜನ ಆ ಯುವಕನ ಹತ್ತಿರ ಹೋಗಲು ಹಿಂಜರಿಯುತ್ತಿದ್ದ ವೇಳೆಯಲ್ಲಿ ನಿಮ್ಮಿ ಮಾತ್ರ ಅಂಜದೆ ಆ ಯುವಕನ ಎದುರಿಗೆ ಹೋಗಿ ಅವನನ್ನು ಹಿಮ್ಮೆಟ್ಟಿಸಿ ಆ ಯುವತಿಯನ್ನು ರಕ್ಷಿಸಿದ್ದಾರೆ. ವೈದ್ಯರೊಬ್ಬರು ವಿಡಿಯೋ ಮಾಡಿದ ಕಾರಣಕ್ಕೆ ನಿಮ್ಮಿ ಸಾಹಸ ಜಗಜ್ಜಾಹೀರಾಗಿದೆ. ನಿಮ್ಮಿ ತೋರಿಸಿದ ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿ.

 
ಹೆಸರು: ನಿಮ್ಮಿ ಸ್ಟೀನ್ 

ಊರು: ಮಂಗಳೂರು

ವೃತ್ತಿ:  ನರ್ಸ್

ಸಾಧನೆ: ಪಾಗಲ್ ಪ್ರೇಮಿಯಿಂದ ಯುವತಿಯ ರಕ್ಷಣೆ

click me!