ಐವರು ಶಂಕಿತ ಎಲ್‌ಇಟಿ ಉಗ್ರರ ಬಂಧನ ಬೆನ್ನಲ್ಲೇ ರಾಜಧಾನಿಯಲ್ಲಿ ರಹಸ್ಯವಾಗಿ ಬೇರೂರಿರುವ ‘ಉಗ್ರ ಜಾಲ’ವನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ.
ಬೆಂಗಳೂರು (ಜು.21): ಐವರು ಶಂಕಿತ ಎಲ್‌ಇಟಿ ಉಗ್ರರ ಬಂಧನ ಬೆನ್ನಲ್ಲೇ ರಾಜಧಾನಿಯಲ್ಲಿ ರಹಸ್ಯವಾಗಿ ಬೇರೂರಿರುವ ‘ಉಗ್ರ ಜಾಲ’ವನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ.
ಬೆಂಗಳೂರಿನ ವಿಧ್ವಂಸಕ ಕೃತ್ಯ ನಡೆಸಲು ಎಲ್‌ಇಟಿ ಸಂಘಟನೆ ಸಂಚು ರೂಪಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದೆ. ಬಳಿಕ ನ್ಯಾಯಾಲಯಕ್ಕೆ ಶಂಕಿತ ಭಯೋತ್ಪಾದಕರನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 7 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಶಂಕಿತ ಉಗ್ರನ ಮನೇಲಿ 4 ಸಜೀವ ಗ್ರೆನೇಡ್ ವಶಕ್ಕೆ!
ಬೆಂಗಳೂರು ನಗರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ. ಇದಕ್ಕಾಗಿ ತನಿಖಾಧಿಕಾರಿ ಸೇರಿ ಇಬ್ಬರು ಎಸಿಪಿ ಹಾಗೂ 6 ಇನ್ಸ್‌ಪೆಕ್ಟರ್‌ಗಳ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಜಂಟಿ ಆಯುಕ್ತ (ಅಪರಾಧ) ಡಾ.ಎಸ್.ಡಿ.ಶರಣಪ್ಪ(City Police Joint Commissioner (Crime) Dr. SD Sharanappa) ತಿಳಿಸಿದ್ದಾರೆ.
ಈ ವಿಶೇಷ ತಂಡವು ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಎನ್ನಲಾಗಿರುವ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಹಮದ್ ಜುನೈದ್‌ನ ಸಂಪರ್ಕ ಜಾಲ ಶೋಧನೆಗಿಳಿದಿದ್ದು, ಬಂಧಿತ ಜುನೈದ್‌ನ ಸಹಚರರಿಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡಿದವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಬಿರುಸುಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಶಂಕಿತ ಉಗ್ರರು ಸಿಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದು ಹೇಗೆ ?: ಆಶ್ರಯ ಕೊಟ್ಟವರಿಗೆ ಶುರುವಾಯ್ತಾ ಪಿಕಲಾಟ ?