ಕೊರೋನಾ ವಾರಿರ್ಯಸ್‌ಗೆ ವೇತನ ವಿಳಂಬ: ರಾಜ್ಯಕ್ಕೆ ಸುಪ್ರೀಂ ಚಾಟಿ!

By Suvarna NewsFirst Published Jul 31, 2020, 1:04 PM IST
Highlights

ಕೊರೊನಾ ವಾರಿರ್ಯಸ್ ಗೆ ವೇತನ ವಿಳಂಬ ವಿಚಾರ| ನಿಗದಿತ ಸಮಯಕ್ಕೆ ವೇತನ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ| ನಾಲ್ಕು ರಾಜ್ಯಗಳು ವೇತನ ಪಾವತಿ ಮಾಡಿಲ್ಲ- ಕೇಂದ್ರ ಸುಪ್ರೀಂ ಗೆ ಹೇಳಿಕೆ

ನವದೆಹಲಿ(ಜು.31): ಕೊರೋನಾತಂಕ ವಿಶ್ವದ ಅನೇಕ ಬಹುತೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಭಾರತ ಹಾಗೂ ಕರ್ನಾಟಕದಲ್ಲೂ ಕೊರೋನಾ ಅಟ್ಟಹಾಸ ನಡೆಸುತ್ತಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಸಮರದಲ್ಲಿ ಕೊರೋನಾ ವಾರಿಯರ್ಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಗಲಿರುಳೆಂಬಂತೆ ಶ್ರಮಿಸುತ್ತಿದ್ದಾರೆ. ಹೀಗಿದ್ದರೂ ಈಕೊರೋನಾ ಯೋಧರಿಗೆ ನಾಲ್ಕು ರಾಜ್ಯಗಳಲ್ಲಿ ವೇತನ ಪಾವತಿಯಾಗಿಲ್ಲ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸರ್ಜಾರಗಳಿಗೆ ಛಾಟಿ ಬೀಸಿದೆ.

ಬೆಳಗಾವಿ: ಕೊರೋನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ಪಾಲಿಕೆ ಅಧಿಕಾರಿ!

ಹೌದು ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿಗದಿತ ಸಮಯಕ್ಕೆ ವೇತನ ನೀಡುವಂತೆ ನಾಲ್ಕು ರಾಜ್ಯಗಳಿಗೆ ಸೂಚನೆ ನೀಡಿದೆ. ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ತ್ರಿಪುರ ಕೊರೋನಾ ವಾರಿಯರ್ಸ್‌ಗೆ  ವೇತನ ಪಾವತಿ ಮಾಡಿಲ್ಲ ಎಂದು ಕೇಂದ್ರ ಸುಪ್ಋಈನಗೆ ಮಾಇತಿ ನೀಡಿದೆ.

ಕೇಂದ್ರದ ಮಾಹಿತಿಯನ್ನಾಧರಿಸಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಿ  ಎಂದು ಸುಪ್ರೀಂ ಆದೇಶಿಸಿದೆ. ಅಲ್ಲದೇ ಸಕಾಲಕ್ಕೆ ವೇತನ ಪಾವತಿ ಮಾಡುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ

click me!