ಅನನ್ಯಾ ಭಟ್ ಕಾಲ್ಪನಿಕ ಕತೆ ಸೂತ್ರಧಾರ ಗಿರೀಶ್ ಮಟ್ಟೆಣ್ಣನವರ್, ಸುಜಾತ್ ಭಟ್ ಸ್ಪಷ್ಟನೆ

Published : Aug 22, 2025, 10:11 PM IST
Sujatha Bhat

ಸಾರಾಂಶ

ಮಗಳು ಅನನ್ಯಾ ಭಟ್ ಕಾಲ್ಪನಿಕ ಕತೆಯ ಸೂತ್ರಧಾರ ಗಿರೀಶ್ ಮಟ್ಟಣ್ಣನವರ್ ಎಂದು ಸುಜಾತ್ ಭಟ್ ಹೇಳಿದ್ದಾರೆ. ತನನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುಜಾತ್ ಭಟ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬೆಂಗಳೂರು (ಆ.22) ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ, ಆಕೆಯ ಅಸ್ತಿಕೊಡಿ ಎಂದು ದೂರು ನೀಡಿ ಕೋಲಾಹಲ ಸೃಷ್ಟಿಸಿದ್ದ ತಾಯಿ ಸುಜಾತಾ ಭಟ್ ಇದೀಗ ಅಸಲಿ ಕತೆ ಬಹಿರಂಗಡಿಸಿದ್ದಾರೆ. ಅನನ್ಯಾ ಭಟ್ ಅನ್ನೋ ಮಗಳು ಕಾಲ್ಪನಿಕ. ಈ ಕಾಲ್ಪನಿಕ ಕತೆಯ ಸೂತ್ರಧಾರ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ಹಾಗೂ ಟಿ ಜಯಂತ್ ಎಂದು ಸುಜಾತ್ ಭಟ್ ಇನ್‌ಸೈಟ್‌ರಶ್ ಅನ್ನೋ ಖಾಸಗಿ ಯೂಟ್ಯೂಬ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ. ಇದೇ ವೇಳೆ ತನ್ನನ್ನು ದುರುಪಯೋಗಪಡಿಸಿಕೊಂಡು ಪ್ರಕರಣವನ್ನು ಈ ಮಟ್ಟಕ್ಕೆ ತಂದರು ಎಂದು ಸುಜಾತ್ ಭಟ್ ಹೇಳಿದ್ದಾರೆ.

ಈ ಮಟ್ಟಕ್ಕೆಆಗುತ್ತೆ ಅನ್ನೋದು ನನಗೆ ಗೊತ್ತಿರಲಿಲ್ಲ

ನನಗೆ ಈ ವಯಸ್ಸಿನಲ್ಲಿ ಇದು ಬೇಡವಾಗಿತ್ತು. ಇವರೆಲ್ಲಾ ಕೂಪ ಮಾಡಿಕೊಂಡು ನನ್ನನ್ನು ಬಳಸಿಕೊಂಡರು. ಈ ರೀತಿ ಆಗುತ್ತೆ, ಇಷ್ಟರ ಮಟ್ಟಕ್ಕೆ ಹೋಗುತ್ತೆ ಅನ್ನೋದು ಗೊತ್ತಿರಲಿಲ್ಲ. ದಯವಿಟ್ಟು ನನ್ನನ್ನು ಇವರು ದುರುಪಯೋಗ ಪಡಿಸಿಕೊಂಡರು. ಈ ಮಟ್ಟಕ್ಕೆ ಆಗುತ್ತೇ ಅನ್ನೋ ಕಲ್ಪನೇ ನನಗೆ ಇರಲಿಲ್ಲ. ನನ್ನ ಉದ್ದೇಶ ಬೇರೆಯಾಗಿತ್ತು. ನನ್ನನ್ನೇ ತೇಜೋವಧೆ ಮಾಡುತ್ತಿದ್ದಾರೆ. ನನ್ನನ್ನೇ ತೇಜೋವಧೆ ಮಾಡುವರು ಯಾರು ಇವರು ಎಂದು ಸುಜಾತ್ ಭಟ್ ಪ್ರಶ್ನಿಸಿದ್ದರೆ. ವಯಸ್ಸಾದವರನ್ನು ತೇಜೋವಧೆ ಮಾಡುವುದು ಎಷ್ಟು ಸಮಂಜಸ ಎಂದು ಸುಜಾತ್ ಭಟ್ ಪ್ರಶ್ನಿಸಿದ್ದಾರೆ. ನಿಜವಾಗಿಯೂ ನನ್ನಲ್ಲಿ ಒತ್ತಾಯಪೂರ್ವಕವಾಗಿ ಹೇಳಿದ್ದಾರೆ. ನನಗೆ ಇಷ್ಟೆಲ್ಲಾ ಆಗುತ್ತೆ ಅನ್ನೋದು ಗೊತ್ತಿಲ್ಲ. ದಯವಿಟ್ಟು ಬಿಟ್ಟುಬಿಡಿ ಇಲ್ಲಿಗೆ ಸಾಕು ಎಂದು ಸುಜಾತ್ ಭಟ್ ಹೇಳಿದ್ದಾರೆ.

ಹೈ ಕರುನಾಡು ಬಳಿ ಭೇಟಿಯಾದ ಗಿರೀಶ್ ಮಟ್ಟಣ್ಣನವರ್

ಆಸ್ತಿಗಾಗಿ ನಾನು ಹೋರಾಡುತ್ತಿದ್ದೆ. ಹೈ ಕರುನಾಡು ಬಳಿ ಗಿರೀಶ್ ಮಟ್ಟಣ್ಣನವರ್ ಭೇಟಿಯಾಗಿದ್ದರು. ಈ ವೇಳೆ ನಾವಿದ್ದೇವೆ ಎಂದು ಎಲ್ಲರೂ ಬೆಂಬಲ ನೀಡಿದ್ದರು. ಅನನ್ಯಾ ಭಟ್ ಕತೆ ಸೃಷ್ಟಿಸಿ ಪ್ರಸ್ತುತಪಡಿಸಿದರು. ನಾನು ಇದೇ ಕತೆಯನ್ನು ಹೇಳಿದೆ. ಆದರೆ ಇಷ್ಟು ದೊಡ್ಡ ಪ್ರೋಪಗಾಂಡ ಆಗುತ್ತೆ ಅನ್ನೋ ಸಣ್ಣ ಅರಿವು ನನಗೆ ಇರಲಿಲ್ಲ. ನನ್ನ ಆಸ್ತಿಗಾಗಿ ಇತರರ ಮಾತು ಕೇಳಿ ಈ ಸ್ಥಿತಿಗೆ ಬಂದಿದ್ದೇನೆ ಎಂದು ಸುಜಾತಾ ಭಟ್ ಹೇಳಿದ್ದರೆ.

ಫೋಟೋ ನಕಲಿ ಎಂದ ಸುಜಾತಾ ಭಟ್

ಯೂಟ್ಯೂಬ್ ಸಂದರ್ಶನದಲ್ಲಿ ಸುಜಾತ್ ಭಟ್ ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಕಲಿ ಫೋಟೋವನ್ನು ಬಹಿರಂಗಪಡಿಸಿದ್ದೇನೆ ಇದು ಸ್ಪಷ್ಟಪಡಿಸಿದ್ದಾರೆ. ದುಡ್ಡಿಗಾಗಿ ಡಿಮ್ಯಾಂಡ್ ಮಾಡಿಲ್ಲ. ಯಾರು ನನಗೆ ದುಡ್ಡು ಕೊಟ್ಟಿಲ್ಲ. ನಾನು ಸ್ವಾಭಿಮಾನಿ. ದುಡಿದು ತಿನ್ನುತ್ತೇನೆ. ಯಾರ ಬಳಿ ಬೇಡಿ ಬದುಕುವುದಿಲ್ಲ. ನಾನು ಲಿವಿನ್ ರಿಲೇಶನ್‌ಶಿಪ್‌ನಲ್ಲಿರುವಾಗಲೂ ಯಾರ ಬಳಿ ಬೇಡಿಲ್ಲ. ನಾನೇ ದುಡಿದಿದ್ದೇನೆ. ಜೀವನ ಸಾಗಿಸಿದ್ದೇನೆ ಎಂದು ಸುಜಾತಾ ಭಟ್ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!