ಒಣಗಿದ ಎಲೆಯಂತಿರುವ ಪತಂಗ ಪ್ರತ್ಯಕ್ಷ! ಇದರ ವಿಶೇಷ ಗೊತ್ತಾ?

By Sathish Kumar KH  |  First Published Jun 26, 2023, 9:09 PM IST

ಪ್ರಕೃತಿ ಪ್ರತಿದಿನ ತನ್ನ ಒಂದೊಂದೇ ನಿಗೂಢತೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ಉಡುಪಿಯಲ್ಲಿ ಒಣಗಿದ ಎಲೆಯಂತಿರುವ ವಿಚಿತ್ರ ಪತಂಗವೊಂದು ಪತ್ತೆಯಾಗಿದೆ.


ಉಡುಪಿ (ಜೂ.26): ಪ್ರಕೃತಿ ಪ್ರತಿದಿನ ತನ್ನ ಒಂದೊಂದೇ ನಿಗೂಢತೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ನಾವು ಕಂಡಿರುವುದು ಕೇವಲ ತೃಣಮಾತ್ರ, ನಾವು ಕಾಣದೆ ಇರುವ ಪ್ರಕೃತಿಯ ವಿಸ್ಮಯ ಲೋಕ ಇನ್ನು ಇದೆ! ಮಳೆಗಾಲ ಆರಂಭವಾದರೆ ಪ್ರಕೃತಿಯ ಹೊಸ ವಿಸ್ಮಯಗಳು ತೆರೆದುಕೊಳ್ಳುತ್ತವೆ.

ಅಪರೂಪದ ಕೀಟವೊಂದು ಉಡುಪಿಯಲ್ಲಿ ಗಮನ ಸೆಳೆದಿದೆ. ಯಾರಾದರೂ ವಿಜ್ಞಾನಿಗಳು ಬಂದು ಇದು ಕೀಟ ಎಂದು ಹೇಳಬೇಕಷ್ಟೆ. ಇಲ್ಲವಾದರೆ ಇದೊಂದು ಸಾಮಾನ್ಯ ತರಗೆಲೆಯಂತೆ ಕಾಣುತ್ತದೆ. ಹಾರಿ ಹೋಗುವಾಗಲೂ ತರಗರಲೆಯೊಂದು ಹಾರಿ ಹೋದಂತೆ ಕಾಣುತ್ತದೆ. ಒಣ ಎಲೆಯಷ್ಟೇ ಹಗುರವಾಗಿ ಕಾಣುವ ಈ ವಸ್ತು, ವಸ್ತುವಲ್ಲ ಜೀವಿ ಅನ್ನೋದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಉಡುಪಿ ನಗರದ ಪರ್ಕಳ ಸಮೀಪದ  ಅಚ್ಚುತ ನಗರ ಗ್ಯಾಟ್ಸ್ ನ್  ಕಾಂಪ್ಲೆಕ್ಸ್ ನಲ್ಲಿ ಈ ವಿಚಿತ್ರ ಜೀವಿ ಕಂಡು ಬಂದಿದೆ. 

Tap to resize

Latest Videos

undefined

Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ

ಪಚ್ಚೆಕುದುರೆ ಕೀಟ:  ರುಕ್ಮಾಗಟ್ಟಿ ಎಂಬವರ ಮನೆಯ ಗೋಡೆಯಲ್ಲಿ ಒಣಗಿದ ಎಲೆಯೊಂದು ಅಂಟಿಗೊಂಡಂತೆ ಕಾಣಿಸಿದೆ. ನಿಂತಲ್ಲೇ ಇರದೆ ಅದು ಹಾರಿ ಹೋಗಿದೆ. ಎಲೆ ಯಂತಹಾ ಆಕೃತಿಯು ಹಾರುವುದನ್ನು ಕಂಡು ಮನೆಯವರಿಗೆ ಅಚ್ಚರಿಯಾಗಿದೆ. ಬಳಿಕ ಇದು ಎಲೆಯಲ್ಲ ಕೀಟ ಅನ್ನೋದು ಪತ್ತೆಯಾಗಿದೆ. ನೋಡಲಿಕ್ಕೆ ಗೋಡೆಯಲ್ಲಿ ಎಲೆ ಅಂಟಿಕೊಂಡಂತೆ ಇದ್ದರೂ ಇದು ಜೀವಂತ ಪತಂಗ ಎಂದು ತಜ್ಞರು ಹೇಳಿದ್ದಾರೆ. ಪಚ್ಚೆಕುದುರೆ ಕೀಟವೇ ಒಣಗಿದಂತೆ ಕಾಣುವ ಈ ಜೀವಿ ಮಳೆಗಾಲ ಆರಂಭದಲ್ಲಿ  ಕಾಣಿಸಿಕೊಂಡಿರುವುದು ವಿಶೇಷತೆ ವಾಗಿದೆ ಎಂದು ಸ್ಥಳೀಯ ನಿವಾದಿ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ಉಡುಪಿಯಲ್ಲಿ ಮಾವಿನ ಹಣ್ಣು ರೂಪ ಮತ್ತು ಆಕಾರ ಬದಲಿಸಿಕೊಂಡ ವಿಚಿತ್ರ ವಿದ್ಯಮಾನ ನಡೆದಿದೆ. ಈ ಹಣ್ಣನ್ನ ನೋಡಿದರೆ ಮಾವಿನಹಣ್ಣು ಎಂದು ಹೇಳಲು ಸಾಧ್ಯವೇ ಇಲ್ಲ! ಆದರೆ ನೀವು ನಂಬಲೇಬೇಕು ಇದು ಮಾವಿನ ಹಣ್ಣು ಎಂದು.. ಇಡೀ ತೋಟದ ಕೆಲವು ಮರದ ಮಾವಿನ ಹಣ್ಣುಗಳು ಹೀಗೆ ರೂಪ ಬದಲಿಸಿಕೊಂಡಿವೆಯಂತೆ. ಉಡುಪಿ ಜಿಲ್ಲೆಯ ಕೋಟದಲ್ಲಿ ಪ್ರಕೃತಿ ವೈಚಿತ್ರ್ಯ ನಡೆದಿದ್ದು, ಜನರಲ್ಲಿ  ಈ ಹಣ್ಣು ಆಶ್ಚರ್ಯ ಮೂಡಿಸಿದೆ. ಸೀಮೆ ಬದನೆಕಾಯಿ ರೂಪದಲ್ಲಿರುವ ಮಾವಿನ ಹಣ್ಣುಗಳು ಎಲ್ಲರ ಗಮನ ಸೆಳೆಯುತ್ತಿದೆ. ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲಿ ಬೆಳೆದ ಮಾವಿನ ಹಣ್ಣುಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಸಾಮಾನ್ಯವಾಗಿ ಮಾವಿನ ಹಣ್ಣುಗಳು ಒಂದೆ ರೂಪದಲ್ಲಿರುತ್ತವೆ. ಆದರೆ ಈ ಮಾವಿನ ಹಣ್ಣುಗಳನ್ನು ಗುರುತಿಸುವುದೆ ಕಷ್ಟ! 

ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ತೋಟದ ಎಲ್ಲ ಮಾವು ಹೀಗಿದೆಯಂತೆ!

ವಾಸನೆಯಿಂದ ಮಾವಿನ ಹಣ್ಣು ಗುರುತು:  ಕೇವಲ ವಾಸನೆ ಆದಾರದ ಮೇಲೆ ಗುರುತಿಸಲಷ್ಟೆ ಸಾಧ್ಯವಿರುವ ಹಣ್ಣುಗಳು, ಬೇರೆ ಬೇರೆ ರೂಪದಲ್ಲಿ ಬೆಳೆದಿವೆ. ಸದ್ಯ ಕೃಷಿ ತಜ್ಞರಿಗೆ ಸವಾಲಾಗಿರುವ ಅಪರೂಪದ ಮಾವಿನ ಹಣ್ಣುಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ.ಸದ್ಯ ಕೃಷಿ ತಜ್ಞರಿಗೆ ಈ ಅಪರೂಪದ ಮಾವಿನ ಹಣ್ಣುಗಳು ಸವಾಲಾಗಿವೆ. ಈ ಬಗ್ಗೆ ಮಾಲಕ ಸುಬ್ರಾಯ ಆಚಾರ್ಯ ಪ್ರತಿಕ್ರಿಯೆ ನೀಡಿದ್ದು “ನಮ್ಮ ಮನೆಯಲ್ಲಿ ಸುಮಾರು 35 ವರ್ಷದಿಂದ ಮಾವಿನ ಹಣ್ಣು ಬಿಡುತ್ತಿದೆ. ಇದೇ ಮೊದಲ ಬಾರಿಗೆ ಸಾಮಾನ್ಯ ಮಾವಿನ ಹಣ್ಣುಗಳ ಜೊತೆ ಐದಾರು ಮಾವಿನ ಕಾಯಿ‌ ಈ ರೂಪ ತಾಳಿವೆ.

click me!