ಕರ್ನಾಟಕದ ಖ್ಯಾತ ಗಣಿತ ಶಾಸ್ತ್ರಜ್ಞ ಸಿ.ಆರ್‌.ರಾವ್‌ಗೆ 100ರ ಸಂಭ್ರಮ

By Kannadaprabha NewsFirst Published Sep 11, 2020, 9:10 AM IST
Highlights

ಕರ್ನಾಟಕದ ಖ್ಯಾತ ಗಣಿತ ಮತ್ತು ಸಂಖ್ಯಾ ಶಾಸ್ತ್ರಜ್ಞ ಡಾ. ಸಿ.ಆರ್‌. ರಾವ್‌ ಅವರಿಗೆ 100 ವರ್ಷ ತುಂಬಿದೆ. ಅವರಿಗೆ ಜನ್ಮ ದಿನದ ಶುಭಾಶಯ

ನವದೆಹಲಿ (ಸೆ.11): ಕರ್ನಾಟಕದ ಖ್ಯಾತ ಗಣಿತ ಮತ್ತು ಸಂಖ್ಯಾ ಶಾಸ್ತ್ರಜ್ಞ ಡಾ. ಸಿ.ಆರ್‌. ರಾವ್‌ ಅವರಿಗೆ  100 ವರ್ಷ ತುಂಬಿತು. ಈ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವರ್ಚುವಲ್‌ ಆಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ವಿಜ್ಞಾನಿಗಳು, ಗಣಿತ ಶಾಸ್ತ್ರಜ್ಞರು ಮತ್ತು ಸಂಖ್ಯಾ ಶಾಸ್ತ್ರಜ್ಞರು ಸಿ.ಆರ್‌. ರಾವ್‌ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ರಾವ್‌ ಅವರು ಭಾರತದ ಸಂಖ್ಯಾಶಾಸ್ತ್ರ ಇಲಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸದ್ಯ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ.

ಗಣಿತ ಲೋಕದ ಪಾಲಿಗೆ ಡಾ.ರಾವ್‌ ಎಂದೇ ಖ್ಯಾತಿಗಳಿಸಿರುವ ರಾಧಾಕೃಷ್ಣರಾವ್‌ ಅವರು ಜನಿಸಿದ್ದು, 1920 ಸೆ.10ರಂದು. ಜನನವಾಗಿದ್ದು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ.

ಉದ್ಯೋಗಾಕ್ಷಿಂಗಳಿಗೆ ಗುಡ್‌ನ್ಯೂಸ್: 5846 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ...

ಗಣಿತ ಮತ್ತು ಸಂಖ್ಯಾಶಾಸ್ತ್ರಕ್ಕೆ ರಾವ್‌ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂಬ್ರಿಡ್ಜ್‌ ವಿವಿ ಡಾಕ್ಟರ್‌ ಆಫ್‌ ಸೈನ್ಸ್‌ ಪದವಿ ನೀಡಿ ಗೌರವಿಸಿದೆ.

ಅಮೆರಿಕದ ಸ್ಟಾನ್‌ಫರ್ಡ್‌ ವಿವಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿಗೂ ರಾವ್‌ ಸೇವೆ ಸಲ್ಲಿಸಿದ್ದಾರೆ. ರಾವ್‌ ಅವರು 70 ವರ್ಷಗಳ ಹಿಂದೆಯೇ ಡೇಟಾ ವಿಜ್ಞಾನದ ಕುರಿತು ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

click me!