ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಸಮಿತಿ ರಚಿಸಿದ ರಾಜ್ಯ ಸರ್ಕಾರ

By Ravi Janekal  |  First Published Jan 31, 2023, 10:01 AM IST

ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ಸಮಿತಿಯನ್ನು ರಚನೆ ಮಾಡಿದೆ.ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌(V Sunil Kumar) ಅವರು ಟ್ವಿಟ್‌(Tweet) ಮಾಡಿ ಮಾಹಿತಿ ನೀಡಿದ್ದಾರೆ


ಬೆಂಗಳೂರು (ಜ.31): ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ಸಮಿತಿಯನ್ನು ರಚನೆ ಮಾಡಿದೆ.
     
ಸಮಿತಿಯ ನೇತೃತ್ವವನ್ನು ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ್‌ ಆಳ್ವ(Dr. Mohan Alva) ವಹಿಸಿಕೊಂಡಿದ್ದಾರೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌(V Sunil Kumar) ಅವರು ಟ್ವಿಟ್‌(Tweet) ಮಾಡಿ ಮಾಹಿತಿ ನೀಡಿದ್ದಾರೆ

“ತುಳು ಭಾಷೆಯನ್ನು ಕರ್ನಾಟಕದ ಏರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ, ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ|| ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಲಾಗಿದೆ” ಎಂದಿದ್ದಾರೆ.

Tap to resize

Latest Videos

ಸಚಿವ ಸುನೀಲ್‌ ಕುಮಾರ್‌ ಅವರ ಟ್ವಿಟರ್ ಹಂಚಿಕೊಂಡಿರುವ ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ(Beluru sudarshan)ರವರು, 'ತುಳುನಾಡಿನಲ್ಲಿ ನನ್ನ ಬದುಕಿನ ನಾಲ್ಕು ವರ್ಷಗಳನ್ನು ಕಳೆದ ನನಗೆ ಸರ್ಕಾರ ತುಳು ಭಾಷೆಗೆ ಸ್ಥಾನಮಾನ ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಧಾರ ನನಗೆ ತುಂಬಾ ಸಂತೋಷ ಕೊಡುವ ಸುದ್ದಿ ಎಂದು ಹೇಳಿದ್ದಾರೆ.

ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ: ತುಳುನಾಡು ಸೃಷ್ಟಿಕರ್ತನಿಗೆ ಗೌರವ 

ತುಳು ಭಾಷೆಯನ್ನು ಕರ್ನಾಟಕದ ಏರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ,ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ|| ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಲಾಗಿದೆ.

— Sunil Kumar Karkala (@karkalasunil)
click me!