
ಬಳ್ಳಾರಿ (ಜ.21): ಬಳ್ಳಾರಿಯ ನಲ್ಲಚರಾವು ಪ್ರದೇಶದ ಕೆರೆ ಬಳಿಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಎತ್ತರದ 23 ಅಡಿಯ ಸ್ಯಾಂಡಲ್‌ವುಟ್ ನಟ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ಇಂದು ಅನಾವರಣ ಮಾಡಲಾಯಿತು. ರಾಜ್‌ಕುಮಾರ್ ಕುಟುಂಬ ಸದಸ್ಯರಿಂದ ಪುತ್ಥಳಿ ಅನಾವರಣ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಬಳ್ಳಾರಿ ಜಿಲ್ಲಾಡಳಿತದಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಅಶ್ವಿನಿ ಪುನಿಈತ್ ರಾಜ್ಕುಮಾರ್ , ನಟ ರಾಘವೇಂದ್ರ ರಾಜಕುಮಾರ್ ಆಘಮಿಸಿದ್ದರು. ಈ ಪುನೀತ್ ಪುತ್ಥಳಿಯನ್ನು ಕಬ್ಬಿಣ ಹಾಗೂ ಪೈಬರ್ ಮಿಶ್ರಣದಿಂದ ಒಟ್ಟು 23 ಅಡಿ ಎತ್ತರವಾಗಿ ನಿರ್ಮಿಸಲಾಗಿದೆ. ಪುತ್ಥಳಿ ಅನಾವರಣಕ್ಕೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಇನ್ನು ಇಷ್ಟಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರುತ್ತಾರೆ ಎಂದು ನಿರೀಕ್ಷಿಸಿದ ಜಿಲ್ಲಾಡಳಿತವು ಕಡಿಮೆ ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಿಕೊಂಡಿತ್ತು.
ಶಿವಮೊಗ್ಗದಲ್ಲಿ ತಯಾರಾದ 23 ಅಡಿ ಎತ್ತರದ ಅಪ್ಪು ಪ್ರತಿಮೆ ಬಳ್ಳಾರಿಯಲ್ಲಿ ಜ.21ರಂದು ಅನಾವರಣ
ಪೊಲೀಸರಿಂದ ಲಘು ಲಾಠಿ ಪ್ರಹಾರ: ಜಿಲ್ಲಾಡಳಿತದ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಅವರನ್ನು ನಿಯಂತ್ರಿಸುವಲ್ಲಿ ಪೊಲೀಸರ ಹರಸಾಹಸಪಡುತ್ತಿದ್ದ ದೃಶ್ಯಗಳು ಕಂಡುಬಂದವು. ಇದೇ ವೇಳೆ ರಾಜ್ ಕುಮಾರ್ ಕುಟುಂಬಸ್ಥರ ಭೇಟಿ ಹಾಗೂ ಪುನೀತ್ ಪುತ್ಥಳಿಯ ಬಳಿ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ನಿಯಂತ್ರಣ ಮಾಡಲಾಗದೇ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಡಾ. ರಾಜ್ ಕುಟುಂಬಸ್ಥರ ಆಗಮನದ ಹಿನ್ನಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಯಿತು. ಇನ್ನು ಬಳ್ಳಾರಿ ಉತ್ಸವದ ಹಿನ್ನಲೆಯಲ್ಲಿ ಪುನೀತ್ ಪುತ್ತಳಿ ನಿರ್ಮಾಣ ಮಾಡಿರುವ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರು ವೇದಿಕೆಯಲ್ಲಿ ಹಾಜರಿದ್ದರು.
ಶಿವಮೊಗ್ಗದಲ್ಲಿ ರೂಪ ಪಡೆದ ಅಪ್ಪು ಪುತ್ಥಳಿ: ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಪುನೀತ್ ರಾಜಕುಮಾರ್ 23 ಅಡಿ ಎತ್ತರದ ಪ್ರತಿಮೆ ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದಲ್ಲಿ ಸಿದ್ದಗೊಂಡಿದೆ. ಈ ಭವ್ಯ ಪ್ರತಿಮೆಯನ್ನು ಪ್ರಖ್ಯಾತ ಶಿಲ್ಪ ಕಲಾವಿದ ಜೀವನ್ ನೇತೃತ್ವದ ತಂಡದಿಂದ ಪುನೀತ್ ಕಲಾ ಕೃತಿ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸಚಿವ ಶ್ರೀರಾಮುಲುರಿಂದ ನಟ ಪುನೀತ್ ರಾಜಕುಮಾರ್ ಅವರ ಈ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 21ರಂದು ಬಳ್ಳಾರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು ಸಂಜೆ ಗಂಟೆಗೆ ಪುನೀತ್ ಪ್ರತಿಮೆ ಅನಾವರಣಗೊಳ್ಳಲಿದೆ. ಸುಮಾರು 3000 ಕೆಜಿ ತೂಕದ ಫೈಬರ್ ಆರ್ಟ್ ನಿಂದ ನಿರ್ಮಿಸಿದ ಅಪ್ಪುವಿನ ಕಲಾ ಕೃತಿ ನೈಜತೆಯಿಂದ ಕೂಡಿ ಆಕರ್ಷಣೀಯವಾಗಿ ಮೂಡಿ ಬಂದಿದೆ.
ಅಂಗಾಂಗ ದಾನದಲ್ಲಿ ದೇಶಕ್ಕೇ ಕರ್ನಾಟಕ ನಂ.2: ಪುನೀತ್, ಸಂಚಾರಿ ವಿಜಯ್ ಪ್ರೇರಣೆ
3 ಸಾವಿರ ಕೆ.ಜಿ. ತೂಕದ ಪ್ರತಿಮೆ: ಅಪ್ಪುವಿನ 23 ಅಡಿ ಎತ್ತರದ ವಿಗ್ರಹವನ್ನು ಸುಮಾರು 22 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 23 ಅಡಿ ಎತ್ತರದ ಪ್ರತಿಮೆಯನ್ನು 3 ತಿಂಗಳಲ್ಲಿ ನಿರ್ಮಾಣವಾಗಿದೆ. ಕಬ್ಬಿಣ, ಫೈಬರ್‌ನಿಂದ ನಿರ್ಮಿಸಲಾಗಿದ್ದು, ಒಟ್ಟು 3 ಸಾವಿರ ಕೆ.ಜಿ. ತೂಕವನ್ನು ಹೊಂದಿದೆ. ಕಬ್ಬಿಣವೇ 1ಸಾವಿರ ಕೆ.ಜಿ. ಇದೆ. ನಿಧಿಗೆ ಗ್ರಾಮದಲ್ಲಿರುವ ಜೀವನ್ ಕಲಾ ಸನ್ನಿಧಿ ಹೆಸರಿನ ಶಿಲ್ಪಕಲಾ ಸಂಸ್ಥೆಯ ಜೀವನ್ ಮತ್ತವರ 15 ಜನಶಿಲ್ಪಿಗಳು ಈ ಪ್ರತಿಮೆಗಾಗಿ ಶ್ರಮವಹಿಸಿದ್ದಾರೆ. ಮೊದಲು ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡಿ ನಿರ್ಮಿಸಿಕೊಂಡು ಆನಂತರದಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಅದಕ್ಕಾಗಿ 16 ಜನರ ತಂಡ ದಿನದ 24 ಗಂಟೆಗಳ ಕಾಲ ಹಗಲು ರಾತ್ರಿ 3 ತಿಂಗಳ ಕಾಲ ಕೆಲಸ ಮಾಡಿದೆ. 40 ಅಡಿ ಉದ್ದದ 20 ಚಕ್ರದ ಲಾರಿಯಲ್ಲಿ ಪುನೀತ್ ಪ್ರತಿಮೆಯನ್ನು ಇಂದೇ ಬಳ್ಳಾರಿಗೆ ರವಾನೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ