ಕಲಬುರಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಿಂದ ತಿರುಪತಿ ವಿಮಾನ ಸೇವೆ ಆರಂಭಿಸಬೇಕೆಂಬುದು ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಕಲಬುರಗಿ, (ಜ.10): ಹೆಚ್ಚಿನ ವಿಮಾನ ಹಾರಾಟ, ಪ್ರಯಾಣಿಕರ ಸಂಖ್ಯಾಬಲ ಹೊಂದುವ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಇದೀಗ ತಿರುಪತಿಗೆ ವಿಮಾನ ಸೇವೆ ಆರಂಭವಾಗಿದೆ.
ನಾಳೆಯಿಂದ ಅಂದ್ರೆ ಜನವರಿ 11ರಿಂದ ಕಲಬುರಗಿ To ತಿರುಪತಿ ವಿಮಾನ ಸೇವೆ ಆರಂಭವಾಗಲಿದೆ. ಮೊದಲ ವಿಮಾನ ಸೋಮವಾರ ಬೆಳಗ್ಗೆ 9. 55 ಕ್ಕೆ ಕಲಬುರಗಿಯಿಂದ ತಿರುಪತಿಗೆ ಹೋರಡಲಿದೆ.
ತಿಮ್ಮಪ್ಪನ ಭಕ್ತರಿಗೊಂದು ಸಂತಸದ ಸುದ್ದಿ: ಕಲಬುರಗಿಯಿಂದ ತಿರುಪತಿಗೆ ನೇರ ವಿಮಾನ
ಸ್ಟಾರ್ air ಸಂಸ್ಥೆ ಈ ವಿಮಾನ ಸೇವೆಯನ್ನು ಉಡಾನ್ ಯೋಜನೆಯಲ್ಲಿ ಆರಂಭಿಸಿದ್ದು, ವಾರದಲ್ಲಿ 4ದಿನ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಈ ಸೇವೆ ಲಭ್ಯ ಲಭ್ಯವಿರಲಿದೆ.
ಸಮಯ ಮತ್ತು ಟಿಕೆಟ್ ದರ
ಕಲಬುರಗಿಯಿಂದ ತಿರುಪತಿಗೆ ಬೆಳಗ್ಗೆ 9:55ಕ್ಕೆ ಹೊರಡಲಿದ್ದು, ಬೆಳಗ್ಗೆ 11ಗಂಟೆಗೆ ತಿರುಪತಿ ತಲುಪಲಿದೆ. ಅದೇ ರೀತಿ ತಿರುಪತಿಯಿಂದ ಮಧ್ಯಾಹ್ನ 2:25 ಗಂಟೆಗೆ ಬಿಡಲಿದ್ದು ಮರಳಿ ಕಲಬುರಗಿಗೆ 03:30 ಗಂಟೆಗೆ ಬಂದು ತಲುಪಲಿದೆ.
620 ಕಿ.ಮೀ ದೂರ ಇರುವ ತಿರುಪತಿಯನನ್ನು 1ಗಂಟೆಯಲ್ಲಿ ಕ್ರಮಿಸುವ ವಿಮಾನದ ಬೇಸಿಕ್ ಟಿಕೆಟ್ ದರ 999 ರೂ. ನಂತರದಲ್ಲಿ ಡೈನಾಮಿಕ್ ಟಿಕೆಟ್ ದರ ಅನ್ವಯವಾಗಲಿದೆ.