Hijab Verdict ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಶ್ರೀರಾಮ ಸೇನೆ ದೂರು!

By Kannadaprabha News  |  First Published Mar 22, 2022, 5:37 AM IST

- ಹಿಜಾಬ್‌ ಕೇಸ್‌ ಜಡ್ಜ್‌ಗಳಿಗೆ ಬಹಿರಂಗ ಜೀವ ಬೆದರಿಕಗೆ ಆಕ್ಷೇಪ
- ತಮಿಳ್ನಾಡಿನ ಮುಸ್ಲಿಂ ಸಂಘಟನೆ ಮುಖಂಡರ ಬಂಧನಕ್ಕೆ ಆಗ್ರಹ
- ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲು ಮನವಿ
 


ಬೆಂಗಳೂರು(ಮಾ.22) ಶಾಲಾ-ಕಾಲೇಜಿನಲ್ಲಿ ಹಿಜಾಬ್‌ ಸಂಬಂಧ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಬಹಿರಂಗ ಜೀವ ಬೆದರಿಕೆ ಹಾಕಿರುವ ತಮಿಳುನಾಡು ಮುಸ್ಲಿಂ ಸಂಘಟನೆ ಮುಖಂಡರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆ ಸಂಘಟನೆಯಿಂದ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಶ್ರೀರಾಮಸೇನೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಅವರು ಈ ದೂರು ನೀಡಿದ್ದಾರೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್‌ ಧರಿಸುವ ಕುರಿತಂತೆ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ತರಗತಿ ಪ್ರವೇಶ ಮಾಡಬಾರದು ಪೀಠದ ಮೂವರು ನ್ಯಾಯಮೂರ್ತಿಗಳುಆದೇಶದಲ್ಲಿ ತಿಳಿಸಿದ್ದಾರೆ. ಈ ತೀರ್ಪು ಹೊರಬಿದ್ದ ಎರಡೇ ದಿನಕ್ಕೆ ತಮಿಳುನಾಡಿನ ಮಧುರೈನಲ್ಲಿ ತೂಹೀರ್‌ ಜಮಾತ್‌ ಸಂಘಟನೆ ಮುಖಂಡರು ಸಾರ್ವಜನಿಕ ಸಭೆಯಲ್ಲಿ ಹಿಜಾಬ್‌ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬಹಿರಂಗ ಜೀವ ಬೆದರಿಕೆ ಹಾಕಿದ್ದಾರೆ.

Tap to resize

Latest Videos

ಹಿಜಾಬ್‌ ಕಾರಣ ಪರೀಕ್ಷೆಗೆ ಗೈರು ಹಾಜರಾದರೆ ಮತ್ತೆ ಪರೀಕ್ಷೆ ಇಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಜಾರ್ಖಂಡ್‌ನಲ್ಲಿ ನಡೆದ ನ್ಯಾಯಾಧೀಶರ ಕೊಲೆಯಂತೆ ನಿಮ್ಮ ಕೊಲೆಯಾದರೆ ನಾನು ಹೊಣೆಯಲ್ಲ. ಮುಖ್ಯ ನ್ಯಾಯಮೂರ್ತಿ ಅವರು ಶೃಂಗೇರಿಗೆ ತೆರಳುತ್ತಿರುವುದರ ಬಗ್ಗೆ ಉಲ್ಲೇಖಿಸಿ, ನ್ಯಾಯಮೂರ್ತಿಗಳ ಪರಿವಾರದವರ ಚಲನವಲಗಳ ಮೇಲೆ ಕಣ್ಣಿಟ್ಟಿರುವುದಾಗಿ ಹೇಳಿದ್ದಾರೆ. ಜಾರ್ಖಂಡ್‌ನ ಮಾದರಿಯಲ್ಲೇ ಕೊಲೆ ಮಾಡುವುದಾಗಿ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅಂತೆಯೇ ತೀರ್ಪು ಹಾಗೂ ನ್ಯಾಯಮೂರ್ತಿಗಳ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹೀಗಾಗಿ ಈ ಕೂಡಲೇ ತೂಹೀರ್‌ ಜಮಾತ್‌ ಸಂಘಟನೆಯ ಮುಖಂಡರನ್ನು ಬಂಧಿಸಿ ನ್ಯಾಯಾಂಗ ನಿಂದನೆ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಹಿಜಾಬ್‌ ಕುರಿತು ತೀರ್ಪು ನೀಡಿರುವ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿರುವುದು ವಿಡಿಯೋ ವೈರಲ್‌ ಬೆನ್ನಲೇ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಂಘಟನೆ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ನ್ಯಾಯಮೂರ್ತಿಗಳಿಗೆ ಬೆದರಿಕೆ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಮನವಿ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ್ದ ಹಿಜಾಬ್‌ ಪ್ರಕರಣ ಸಂಬಂಧ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಮೂಲದ ತೌಹೀದ್‌ ಜಮಾತ್‌ ಸಂಘಟನೆಯ ಮುಖಂಡ ಆರ್‌.ರೆಹ್ಮತ್‌ವುಲ್ಲಾ ಎಂಬುವರು ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಾಬ್‌ ಉಲ್ಲೇಖಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋ ಆಧಾರಿಸಿ ವಕೀಲ, ಸುಧಾ ಕಟ್ವ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಿಜಾಬ್ ತೀರ್ಪು ಕೊಟ್ಟ ಜಡ್ಜ್‌ಗಳಿಗೆ ಬೆದರಿಕೆ ಬೆನ್ನಲ್ಲೇ Y ಕ್ಯಾಟಗರಿ ಭದ್ರತೆ

ಮಂಗಳೂರು, ಹೊಸಪೇಟೆಲಿ ಮತ್ತೆ ಹಿಜಾಬ್‌ ವಿವಾದ
ದಕ್ಷಿಣಕನ್ನಡ ಮತ್ತು ವಿಜಯನಗರ ಜಿಲ್ಲೆಯಲ್ಲಿ ಹಿಜಾಬ್‌ ವಿವಾದ ಸೋಮವಾರ ಮತ್ತೆ ಸದ್ದು ಮಾಡಿದೆ. ವಾಮಂಜೂರಿನ ಸೇಂಟ್‌ ರೇಮಂಡ್ಸ್‌ ಪಿಯು ಕಾಲೇಜಿನಲ್ಲಿ 18 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ಪೂರ್ವಸಿದ್ಧತಾ ಪರೀಕ್ಷೆ ಬರೆಯಲು ಆಗಮಿಸಿದ್ದರು. ಯಾವುದೇ ಕಾರಣಕ್ಕೂ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗದು ಎಂದು ಪ್ರಾಂಶುಪಾಲರು ತಿಳಿಸಿದ್ದರಿಂದ ಈ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಲ್ವರು ಬಿಎಸ್ಸಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಪರೀಕ್ಷಾ ಕೊಠಡಿಯೊಳಗೆ ಬಲವಂತದ ಪ್ರವೇಶ ಮಾಡಿದ್ದರು. ಉಪನ್ಯಾಸಕರ ಆಕ್ಷೇಪದಿಂದಾಗಿ ಓರ್ವ ವಿದ್ಯಾರ್ಥಿನಿ ಹಿಜಾಬ್‌ ತೆಗೆದು ಪರೀಕ್ಷೆ ಬರೆದರೆ, ಉಳಿದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದರು. ವಿಜಯನಗರ ಕಾಲೇಜಲ್ಲಿ ಹಿಜಾಬ್‌ ಧರಿಸಿ ಬಂದಿದ್ದ ಎಂಟು ವಿದ್ಯಾರ್ಥಿನಿಯರು, ಪ್ರಾಚಾರ್ಯರು ತಿಳಿ ಹೇಳಿದ ಬಳಿಕ ಹಿಜಾಬ್‌ ತೆಗೆದು ಪರೀಕ್ಷೆ ಬರೆದರು.

click me!