ST Somashekar: ಶ್ರೀ ಗುರುರಾಘವೇಂದ್ರ ಬ್ಯಾಂಕ್‌ನಲ್ಲಿ ಅಕ್ರಮ ಎಸಗಿದವರ ಆಸ್ತಿ ಜಪ್ತಿ!

Kannadaprabha News   | Asianet News
Published : Mar 25, 2022, 03:00 AM IST
ST Somashekar: ಶ್ರೀ ಗುರುರಾಘವೇಂದ್ರ ಬ್ಯಾಂಕ್‌ನಲ್ಲಿ ಅಕ್ರಮ ಎಸಗಿದವರ ಆಸ್ತಿ ಜಪ್ತಿ!

ಸಾರಾಂಶ

ಬಹುಕೋಟಿ ಅವ್ಯವಹಾರ ನಡೆದಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯನ್ನು ಮಾ.29ಕ್ಕೆ ಕರೆಯಲಾಗಿದೆ. ಬ್ಯಾಂಕ್‌ ಅವ್ಯವಹಾರದ ಬಗ್ಗೆ ಆಡಿಟ್‌ ವರದಿ ಬಂದ ಕೂಡಲೇ ಅಕ್ರಮದಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಬೆಂಗಳೂರು (ಮಾ.25): ಬಹುಕೋಟಿ ಅವ್ಯವಹಾರ ನಡೆದಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ (Sri Guru Raghavendra Cooperative Bank) ಸರ್ವ ಸದಸ್ಯರ ಸಭೆಯನ್ನು ಮಾ.29ಕ್ಕೆ ಕರೆಯಲಾಗಿದೆ. ಬ್ಯಾಂಕ್‌ ಅವ್ಯವಹಾರದ ಬಗ್ಗೆ ಆಡಿಟ್‌ ವರದಿ ಬಂದ ಕೂಡಲೇ ಅಕ್ರಮದಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ (ST Somashekar) ತಿಳಿಸಿದರು. ಅರ್ಧ ಗಂಟೆ ಕಾಲಾವಧಿ ಚರ್ಚೆಯಲ್ಲಿ ಸದಸ್ಯ ಯು.ವಿ.ವೆಂಕಟೇಶ್‌ (UV Venkatesh) ಪ್ರಶ್ನೆಗೆ ಉತ್ತರಿಸಿದ ಅವರು, 2019ರಲ್ಲಿ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರ ಪತ್ತೆಯಾಗಿದೆ. 

ಸುಮಾರು .2317 ಕೋಟಿಯನ್ನು ದುರ್ಬಳಕೆ ಮಾಡಲಾಗಿದೆ. ಈ ಪೈಕಿ .317 ಕೋಟಿ ಪತ್ತೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಪ್ರಕರಣಕ್ಕೆ ಸಂಬಂಧ 64 ಲೆಕ್ಕಪರಿಶೋಧಕರನ್ನು ಸಮಿತಿಯಿಂದ ಕೈಬಿಡಲಾಗಿದೆ. 8 ಮಂದಿ ಲೆಕ್ಕಪರಿಶೋಧಕರ ಮೇಲೆ ಗಂಭೀರ ಆರೋಪವಿದೆ ಎಂದರು. ಈ ಸಹಕಾರ ಬ್ಯಾಂಕ್‌ ಆರ್‌ಬಿಐ ವ್ಯಾಪ್ತಿಯಲ್ಲಿದೆ. ಸಹಕಾರ ಇಲಾಖೆ ಮಧ್ಯ ಪ್ರವೇಶಿಸಿದರೆ ಪ್ರಕರಣ ಕೋರ್ಟ್‌ ಮೆಟ್ಟಿಲೇರುತ್ತದೆ.  ಆದ್ದರಿಂದ ಮಾ.29ರಂದು ಬ್ಯಾಂಕಿನ ಸರ್ವ ಸದಸ್ಯರ ಸಭೆ ಕರೆದಿದ್ದು, ಸದಸ್ಯರಿಗೆ ವಾಸ್ತವಾಂಶದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲು ತೀರ್ಮಾನಿಸಿದ್ದೇವೆ. 

ರೈತರಿಗೆ ಸಾಲ ನೀಡಿಕೆಯಲ್ಲಿ 68% ಗುರಿ ಸಾಧನೆ: ಸಚಿವ ಎಸ್‌.ಟಿ.ಸೋಮಶೇಖರ್‌

ತನಿಖೆ ಹಂತ ಹಂತವಾಗಿ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕೆಲವರು ಸಾಲ ಮರು-ಪಾವತಿಗೆ ಒಪ್ಪಿದ್ದಾರೆ ಎಂದು ಹೇಳಿದರು. ಐದು ಲಕ್ಷಕ್ಕಿಂತ ಕಡಿಮೆ ಮೊತ್ತದ ಠೇವಣಿದಾರರಿಗೆ ಹಣ ಮರುಪಾವತಿ ಮಾಡಲಾಗಿದೆ. ದೊಡ್ಡ ಮೊತ್ತ ಇಟ್ಟವರ ಹಣ ವಾಪಸ್‌ ಬರಲಿದ್ದು, ಆತಂಕ ಪಡಬೇಕಿಲ್ಲ. ಇನ್ನೊಂದು ವರ್ಷದ ಆಡಿಟ್‌ ವರದಿ ಮಾತ್ರ ಬಾಕಿ ಇದ್ದು, ಅದು ಪೂರ್ಣಗೊಂಡ ಬಳಿಕ ಅಕ್ರಮದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.  ಆ ನಂತರ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದಲ್ಲಿ ಅಕ್ರಮ ಎಸಗಿದವರ ಹೆಸರು ಅಂತಿಮ ವಾಗುವವರೆಗೂ ಬಹಿರಂಗ ಪಡಿಸುವುದಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇವೆ ಎಂದರು. 

ಅದೇ ರೀತಿ ವಶಿಷ್ಠ ಸೌಹಾರ್ದ ಸಹಕಾರ ಬ್ಯಾಂಕಿನ ಅವ್ಯವಹಾರದ ಕುರಿತು ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಅದನ್ನು ತೆರವುಗೊಳಿಸಲು ಅಡ್ವೋಕೇಟ್‌ ಜನರಲ್‌ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ತಡೆಯಾಜ್ಞೆ ತೆರವಾಗುತ್ತಿದ್ದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು. ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಮಾಜಿ ಮೇಯರ್‌ ಒಬ್ಬರ ಪುತ್ರ ಲಂಡನ್‌ ವೈದ್ಯರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ಬಳಿಕ ಬಂದ ಉಳಿತಾಯದ .5 ಕೋಟಿಯನ್ನು ಈ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ. ಈಗ ಆ ಹಣ ಬಂದ್‌ ಆಗಿದ್ದು, ಅವರಿಗೆ ಊಟಕ್ಕೂ ಕಷ್ಟವಾಗಿದೆ. ಸಾಕಷ್ಟುಮಂದಿ ಇಲ್ಲಿ ಹಣ ಇಟ್ಟಿದ್ದಾರೆ. ಈ ಸಂಕಷ್ಟಕ್ಕೆ ಪರಿಹಾರ ಕೊಡಿಸಬೇಕು ಒತ್ತಾಯಿಸಿದರು.

Karnataka Politics : ಡಿ.ಕೆ.ಶಿವಕುಮಾರ್ ಪರ್ಮನೆಂಟ್ ಮುಖ್ಯಮಂತ್ರಿ : ಸಚಿವ ಸೋಮಶೇಖರ್

ಡಿಸಿಸಿ-ಅಪೆಕ್ಸ್ ಬ್ಯಾಂಕ್ ವಿಲೀನ: ಇನ್ನು ಇದೇ ವೇಳೆ ಡಿಸಿಸಿ-ಅಪೆಕ್ಸ್ ಬ್ಯಾಂಕ್ ವಿಲೀನ ಮಾಡುವ ವಿಚಾರದ ಬಗ್ಗೆ ಸೋಮೇಶರ್ ಪ್ರತಿಕ್ರಿಯಿಸಿದ್ದು, ಡಿಸಿಸಿ ಬ್ಯಾಂಕ್ ಗಳನ್ನು ಅಪೆಕ್ಸ್ ಬ್ಯಾಂಕ್ ನೊಡನೆ ವಿಲೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸುತ್ತಿನ ಸಭೆ ಮಾಡಿದ್ದೇವೆ. ಈಗಾಗಲೇ ಜಾರ್ಖಂಡ್ ಮತ್ತು ಕೇರಳದಲ್ಲಿ ಈ ಮಾದರಿ ಚಾಲನೆಯಲ್ಲಿ ಇದೆ. ಈ ರೀತಿಯ ವಿಲೀನ ಪ್ರಕ್ರಿಯೆ ಯಿಂದ ರೈತರಿಗೆ ಬಡ್ಡಿಯಲ್ಲಿ ಉಳಿತಾಯ ಆಗುತ್ತದೆ. ಕರ್ನಾಟಕದಲ್ಲಿ ಕೂಡಾ ಇದೇ ರೀತಿ ವಿಲೀನ ಮಾಡುವ ಚಿಂತನೆ ಇದೆ ಎಂದರು. ಅಧಿವೇಶನ ಮುಗಿದ ಬಳಿಕ ಅಧಿಕಾರಿಗಳು ಕೇರಳ ಮತ್ತು ಜಾರ್ಖಂಡ್ ಗೆ ಅದ್ಯಯನ ಪ್ರವಾಸಕ್ಕೆ ಹೋಗಲಿದ್ದು,  ಅಲ್ಲಿನ ಸಾಧಕಬಾಧಕಗಳನ್ನು ನೋಡಿ ವರದಿ ಕೊಡಲಿದ್ದಾರೆ. ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ತೀವಿ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!