ಸಿದ್ಧಗಂಗಾ ಮಠಕ್ಕೆ ವಿಶೇಷ ರೈಲು ವ್ಯವಸ್ಥೆ

By Web DeskFirst Published Jan 22, 2019, 7:10 AM IST
Highlights

ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಮಂಗಳವಾರ ಯಶವಂತಪುರ- ತುಮಕೂರು ನಡುವೆ 4 ವಿಶೇಷ ರೈಲು ಸೇವೆ ಕಲ್ಪಿಸಿದೆ. 

ತುಮಕೂರು :  ಲಕ್ಷಾಂತರ ಭಕ್ತರ, ಶಿವಶರಣರ ಕಣ್ಣೀರ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹಿ, ಶತಮಾನದ ಸಂತ, ದೇಶದ ಅತ್ಯಂತ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ(111) ಭವದ ಬದುಕಿಗೆ ವಿದಾಯ ಹೇಳಿ ಶಿವನೆಡೆಗೆ ನಡೆದೇ ಬಿಟ್ಟರು. 

ಎಣ್ಣೆಬತ್ತಿಗೂ ಕಾಸಿಲ್ಲದ ಹೊತ್ತಲ್ಲಿ ಸಿದ್ಧಗಂಗಾ ಮಠದ ಪೀಠಾರೋಹಣ ಮಾಡಿ ಇಡೀ ದೇಶವೇ ತುಮಕೂರಿನತ್ತ ತಿರುಗುವಂತೆ ಮಾಡಿದ್ದ ‘ನಡೆದಾಡುವ ದೇವರು’ ಉತ್ತರಾಯಣ ಪುಣ್ಯ ಕಾಲ ವಾದ ಸೋಮವಾರ ಬೆಳಗ್ಗೆ 11.44ಕ್ಕೆ ಶಿವೈಕ್ಯರಾದರು. 

ರೈಲು: ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಮಂಗಳವಾರ ಯಶವಂತಪುರ- ತುಮಕೂರು ನಡುವೆ 4 ವಿಶೇಷ ರೈಲು ಸೇವೆ ಕಲ್ಪಿಸಿದೆ. ವಿಶೇಷ ರೈಲುಗಳ ಪೈಕಿ ಮೊದಲ ರೈಲು ಯಶವಂತ ಪುರದಿಂದ ಬೆಳಗ್ಗೆ 7.30 ಮತ್ತು ಎರಡನೇ ರೈಲು ಮಧ್ಯಾಹ್ನ 12ಕ್ಕೆ ಹೊರಡಲಿದೆ.

click me!