ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಪಶ್ಚಿಮ ಬಂಗಾಳಕ್ಕೆ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು, ಎಷ್ಟು ದಿನ ಪ್ರಯಾಣ?

Published : Apr 14, 2026, 06:45 PM IST
Train

ಸಾರಾಂಶ

ಬೇಸಿಗೆ ರಜೆಯ ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು (07323/07324) ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ಮೂಲಕ ಒಂದು ಟ್ರಿಪ್ ಮಾತ್ರ ಸಂಚರಿಸಲಿದೆ. ಏಪ್ರಿಲ್ 15 ರಂದು ಹುಬ್ಬಳ್ಳಿಯಿಂದ ಮತ್ತು ಏಪ್ರಿಲ್ 19 ರಂದು ಅಲಿಪುರ್ ದ್ವಾರ್‌ನಿಂದ ಈ ರೈಲು ಹೊರಡಲಿದೆ.

ಹುಬ್ಬಳ್ಳಿ: ಬೇಸಿಗೆಯ ರಜಾ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಿಲ್ದಾಣಗಳ ನಡುವೆ ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಕಾರ್ಯಾಚರಣೆ ಮಾಡಲಾಗುವುದು.

ವಿಶೇಷ ಎಕ್ಸ್ ಪ್ರೆಸ್ ರೈಲು ಪಟ್ಟಿ

ರೈಲು ಸಂಖ್ಯೆ 07323 ಹುಬ್ಬಳ್ಳಿ- ಅಲಿಪುರ್ ದ್ವಾರ್ ವಿಶೇಷ ಎಕ್ಸ್ ಪ್ರೆಸ್ ರೈಲು ಏ. 15ರಂದು ರಾತ್ರಿ 11.15ಕ್ಕೆ ಹುಬ್ಬಳ್ಳಿಯಿಂದ ಹೊರಟು ಶನಿವಾರ ಮಧ್ಯಾಹ್ನ 1:50ಕ್ಕೆ ಅಲಿಪುರ್ ದ್ವಾರ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 07324 ಅಲಿಪುರ್ ದ್ವಾರ್- ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಏ. 19ರ ಸಂಜೆ 4:25ಕ್ಕೆ ಅಲಿಪುರ್ ದ್ವಾರ್‌ನಿಂದ ಹೊರಟು, ಬುಧವಾರ ಬೆಳಗ್ಗೆ 9.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.

ಯಾವೆಲ್ಲ ಮಾರ್ಗದಲ್ಲಿ ಸಂಚಾರ?

ಈ ರೈಲು ಎರಡೂ ಮಾರ್ಗಗಳಲ್ಲಿ ತನ್ನ ಪ್ರಯಾಣದ ಅವಧಿಯಲ್ಲಿ ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಯಲಹಂಕ, ಧರ್ಮಾವರಂ, ಡೋನ್, ನಂದ್ಯಾಲ, ಗುಂಟೂರು, ವಿಜಯವಾಡ, ರಾಜಮಂಡ್ರಿ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಾಕ್, ಖರಗ್ಪುರ, ಅಂದುಲ್, ದನಕುಣಿ, ಬರ್ದ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರಸೋಯಿ, ಕಿಶನ್ ಗಂಜ್, ನ್ಯೂ ಜಲ್ಪೈಗುರಿ, ಸಿಲಿಗುರಿ, ಬಿನ್ನಗುರಿ ಮತ್ತು ಹಸಿಮಾರಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ರೈಲು, ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

RSS ವಿಷಸರ್ಪ ಎಂದವರಿಗೆ ಶಾಕ್ ನೀಡಿದ ಸ್ವಪಕ್ಷೀಯರು: ಕಾಂಗ್ರೆಸ್ ಹುದ್ದೆಗೆ RSS ಮುಖಂಡರ ಎಂಟ್ರಿ
ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನ ಬಲಿ ಪಡೆದಿದ್ದ ನೀರಾನೆ 'ಹಂಸಿನಿ'ಯೂ ಸಾವು! ಕಾರಣವೇನು ಗೊತ್ತಾ?