ಗೋಕರ್ಣ ದೇಗುಲದಲ್ಲಿ ಯೋಧರಿಗೆ ನೇರ ದರ್ಶನ

By Web Desk  |  First Published Feb 24, 2019, 10:08 AM IST

ಯೋಧರಿಗೆ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನೇರ ವ್ಯವಸ್ಥೆ ಕಲ್ಪಿಸಲಾಗಿದೆ. ಸೇವೆಯಲ್ಲಿರುವ ಯೋಧರು ಮಾತ್ರವಲ್ಲ, ನಿವೃತ್ತ ಯೋಧರು ಸಹ ನೇರವಾಗಿ ಆತ್ಮಲಿಂಗ ದರ್ಶನ ಮಾಡಬಹುದಾಗಿದೆ.


ಕಾರವಾರ: ದೇಶ ಕಾಯುವ ವೀರ ಯೋಧರಿಗೆ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನೇರ ವ್ಯವಸ್ಥೆ ಕಲ್ಪಿಸಲಾಗಿದೆ. ಸೇವೆಯಲ್ಲಿರುವ ಯೋಧರು ಮಾತ್ರವಲ್ಲ, ನಿವೃತ್ತ ಯೋಧರು ಸಹ ನೇರವಾಗಿ ಆತ್ಮಲಿಂಗ ದರ್ಶನ ಮಾಡಬಹುದಾಗಿದ್ದು, ಇಂಥದ್ದೊಂದು ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ವರ್ಷದ ಹಿಂದೆಯೇ ಜಾರಿಗೆ ತಂದಿದೆ. ದೇವಾಲಯದ ಪ್ರವೇಶ
ದ್ವಾರದಲ್ಲಿ ದೇವರ ದರ್ಶನಕ್ಕೆ ನಿವೃತ್ತ, ಕರ್ತವ್ಯದಲ್ಲಿರುವ ಸೈನಿಕರಿಗೆ ಪ್ರಾಶಸ್ತ್ಯ ಎಂಬ ಫಲಕ ಹಾಕಲಾಗಿದೆ. 

ಸೈನಿಕರು, ದೇವಸ್ಥಾನದ ಕೌಂಟರ್‌ನಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು. ಆಡಳಿತ ಮಂಡಳಿಯ ಸದಸ್ಯರೇ ಅವರನ್ನು ಗೌರವಪೂರ್ವಕವಾಗಿ ಕರೆದುಕೊಂಡು ಹೋಗಿನೇರವಾಗಿ ಆತ್ಮಲಿಂಗ ದರ್ಶನ ಹಾಗೂ ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ. ಮಹಾಬಲೇಶ್ವರ ದೇವಾಲಯ ರಾಮಚಂದ್ರಾಪುರ ಮಠದಆಡಳಿತಕ್ಕೊಳಪಟ್ಟಿದ್ದು, ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಂತೆ ದೇವಾಲಯದ
ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಈ ಕ್ರಮ ಕೈಗೊಂಡಿದ್ದಾರೆ. 

Latest Videos

ಮಳೆ, ಚಳಿ, ಬಿಸಿಲೆನ್ನದೇ ಯೋಧರು ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಾರೆ. ಅವರು ಪ್ರಾಣದ ಹಂಗನ್ನು ತೊರೆದು ದೇಶ ಕಾಯುತ್ತಿರುವ ಕಾರಣ ನಾವು ನೆಮ್ಮದಿಯಿಂದ ಇರುವಂತಾಗಿದೆ. ಸೈನಿಕರು ಸರದಿಯಲ್ಲಿ ನಿಂತು ಕಾಯುವುದು ಸರಿಯಲ್ಲ. ಅವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಚಿಂತನೆಯಿಂದಾಗಿ ಈ ವ್ಯವಸ್ಥೆ ಜಾರಿಗೆ ಬಂದಿದೆ. 

click me!