ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ ಸ್ಥಳಾಂತರ: ಸಚಿವ ಎಚ್.ಕೆ.ಪಾಟೀಲ್‌

By Kannadaprabha News  |  First Published May 10, 2024, 10:43 AM IST

ಹಾಸನದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ ಅನ್ನು ಎಸ್‌ಐಟಿ ವಿನಂತಿ ಮೇರೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಮಾಹಿತಿ ನೀಡಿದ್ದಾರೆ.


ಗದಗ (ಮೇ.10): ಹಾಸನದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ ಅನ್ನು ಎಸ್‌ಐಟಿ ವಿನಂತಿ ಮೇರೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಮಾಹಿತಿ ನೀಡಿದ್ದಾರೆ. 42 ACMM, ಸಿಟಿ ಸಿವಿಲ್ ಸೆಸನ್ಸ್ ಜಡ್ಜ್ 81(82) ಜನ ಪ್ರತಿನಿಧಿಗಳ ನ್ಯಾಯಾಲಯವು, ಪ್ರಕರಣ ವಿಚಾರಣೆ ನಡೆಸುತ್ತಿರುವ ಎರಡೂ ಕೋರ್ಟ್‌ಗಳು ಈಗ ಸಿವಿಲ್ ಕೋರ್ಟ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಾಗದ ಕೊರತೆ ಹಾಗೂ ನೊಂದ ಮಹಿಳೆಯರು, ಸಾಕ್ಷೀದರರ ರಕ್ಷಣೆಗೆ ಕೋರ್ಟ್ ಸ್ಥಳಾಂತರ ಮಾಡಲಾಗುತ್ತಿದೆ ಎಂದರು.

ಹಾಸನದಲ್ಲಿ ನಡೆದ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷಿದಾರರ ಬೆದರಿಗೆ, ಅಪಹರಣ ಕಂಡು‌ಬಂದಿದೆ. ಈಗಾಗ್ಲೆ ದೌರ್ಜನ್ಯಕ್ಕೊಳಗಾದ ಮಹಿಳೆಯ ಅಪಹರಣ ಮಾಡಲಾಗಿದೆ. ನೊಂದ ಮಹಿಳೆಯರ, ಸಾಕ್ಷಿದಾರರ ಗೌಪ್ಯತೆ ಕಾಪಾಡುವುದು ತನಿಖಾ ತಂಡದ, ಸರ್ಕಾರದ ಜವಾಬ್ದಾರಿ. ಆರೋಪಿತದ ಪರ ಇರುವವರು, ಮಾಧ್ಯಮದವರು, ಸಾರ್ವಜನಿಕರು ಓಡಾಡುವುದರಿಂದ ಗೌಪ್ಯತೆ ಕಷ್ಟವಾಗಿದೆ. ಹೀಗಾಗಿ ಎರಡೂ ನ್ಯಾಯಾಲಯವನ್ನ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಕೋರಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಕ್ರೀಡಾ ಇಲಾಖೆ ವ್ಯಾಪ್ತಿಯ ಗುರುನಾನಕ ಭವನದಲ್ಲಿ ಕೋರ್ಟ್ ಸ್ಥಾಪನೆ ಮಾಡಿದ್ವಿ. ಅದೇ ಜಾಗೆಯಲ್ಲಿ ಹಾಸನ ಲೈಂಗಿಕ ಪ್ರಕರಣದ ವಿಚಾರಣೆ ನಡೆಯಲಿದ ಎಂದು ಎಚ್.ಕೆ.ಪಾಟೀಲ್‌ ತಿಳಿಸಿದರು.

Tap to resize

Latest Videos

undefined

ನಾಲ್ವರು ರೇವಣ್ಣ ಬೆಂಬಲಿಗರು ವಶಕ್ಕೆ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಸಂತ್ರಸ್ತ ಮಹಿಳೆ ಅಪಹರಣ ಸಂಬಂಧ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರ ನಾಲ್ವರು ಬೆಂಬಲಿಗರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆದಿದೆ. ಈ ನಾಲ್ವರು ಆರೋಪಿಗಳು ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನವರಾಗಿದ್ದು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಅವರನ್ನು ಎಸ್‌ಐಟಿ ಗಾಳಕ್ಕೆ ಹಾಕಿದೆ. ಪ್ರಾಥಮಿಕ ಹಂತದ ವಿಚಾರಣೆ ಬಳಿಕ ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಇನ್ನು ಅಪಹರಣ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿರುವುದನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬುಧವಾರ ಖಚಿತಪಡಿಸಿದ್ದಾರೆ.

Kidnap Case: ಜೈಲಲ್ಲಿ ಬೇಸರದಿಂದಲೇ ಮೊದಲ ದಿನ ಕಳೆದ ಎಚ್.ಡಿ.ರೇವಣ್ಣ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮನೆಯಲ್ಲಿ ಕೆ.ಆರ್‌.ನಗರ ತಾಲೂಕಿನ ಮಹಿಳೆ ಕೆಲಸ ಮಾಡುತ್ತಿದ್ದರು. ಆ ವೇಳೆ ಅವರನ್ನು ಸಂಸದರು ಲೈಂಗಿಕವಾಗಿ ಶೋಷಣೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಎಸ್ಐಟಿ ತನಿಖೆಗೆ ಹೆದರಿ ಸಂತ್ರಸ್ತ ಮಹಿಳೆಯನ್ನು ಸಂಸದರ ತಂದೆ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸೂಚನೆ ಮೇರೆಗೆ ಅಪಹರಿಸಲಾಗಿತ್ತು. ಈ ಕೃತ್ಯದಲ್ಲಿ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಈಗ ಅವರು ಜೈಲು ಸೇರಿದ ಬೆನ್ನಲ್ಲೆ ಮಾಜಿ ಸಚಿವರ ಬೆಂಬಲಿಗರನ್ನು ಎಸ್‌ಐಟಿ ಸೆರೆ ಹಿಡಿದಿದೆ ಎಂದು ಮೂಲಗಳು ಹೇಳಿವೆ.

click me!