ನೈಋತ್ಯ ರೈಲ್ವೆಯಲ್ಲಿ ವಂದೇ ಭಾರತ್ ಹವಾ, ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ, ಆದಾಯದಲ್ಲೂ ಚಾಕ್‌ಪಾಟ್‌!

Published : Dec 19, 2025, 04:44 PM IST
Vande Bharat Express

ಸಾರಾಂಶ

ನೈಋತ್ಯ ರೈಲ್ವೆ ವಲಯದಲ್ಲಿ ವಂದೇ ಭಾರತ್ ರೈಲುಗಳು ಜನಪ್ರಿಯತೆ ಗಳಿಸುತ್ತಿದ್ದು, ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯ ಏರಿಕೆ ಕಂಡಿವೆ. ಬೆಂಗಳೂರು-ಧಾರವಾಡ, ಹುಬ್ಬಳ್ಳಿ-ಪುಣೆ, ಮತ್ತು ಬೆಳಗಾವಿ-ಬೆಂಗಳೂರು ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಈ ರೈಲುಗಳು ಉತ್ತಮ ಸ್ಪಂದನೆ ಪಡೆದು ಯಶಸ್ವಿಯಾಗಿವೆ.

ವರದಿ: ಅಜೀಜಅಹ್ಮದ್ ಬಳಗಾನೂರ

ಹುಬ್ಬಳ್ಳಿ: ಐಷಾರಾಮಿ ಸೌಲಭ್ಯ ಹಾಗೂ ವೇಗದ ಸಂಚಾರದಿಂದ ಜನ ಮನ್ನಣೆ ಗಳಿಸಿರುವ ವಂದೇ ಭಾರತ್‌ ರೈಲುಗಳು ನೈಋತ್ಯ ರೈಲ್ವೆ ಭಾಗದಲ್ಲೂ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿವೆ. ಈ ರೈಲಿನಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಆದಾಯವೂ ಜಾಸ್ತಿಯಾಗಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಸ್ತುತ 6 ಜೋಡಿ ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳು ಬೆಂಗಳೂರು, ಧಾರವಾಡ, ಕಲಬುರಗಿ, ಮೈಸೂರು, ಚೆನ್ನೈ, ಪುಣೆ, ಬೆಳಗಾವಿ ಮತ್ತು ಎರ್ನಾಕುಲಂ ಸೇರಿದಂತೆ ಅನೇಕ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತಿವೆ. ಇವುಗಳಲ್ಲಿ ನೈಋತ್ಯ ರೈಲು ನಡೆಸುವ 3 ಪ್ರಮುಖ ಮಾರ್ಗಗಳಾದ ಕೆಎಸ್‌ಆರ್ ಬೆಂಗಳೂರು-ಧಾರವಾಡ, ಯಶವಂತಪುರ-ಕಾಚೇಗುಡ ಮತ್ತು ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ನಿರಂತರವಾಗಿ ಉತ್ತಮ ಕಾರ್ಯಕ್ಷಮತೆ ತೋರಿಸಿವೆ.

ಬೆಂಗಳೂರು-ಧಾರವಾಡ:

ಜೂ. 28, 2023ರಂದು ಆರಂಭವಾದ ಕೆಎಸ್‌ಆರ್ ಬೆಂಗಳೂರು-ಧಾರವಾಡ ರೈಲು ಪ್ರಾರಂಭಿಕ ತಿಂಗಳಲ್ಲಿ ಶೇ. 56, 6ನೇ ತಿಂಗಳಿಗೆ ಶೇ. 75ರಷ್ಟು ಪ್ರಯಾಣಿಕರು ಸಂಚರಿಸಿದ್ದು ಶೇ. 67ರಷ್ಟು ಆದಾಯ ಗಳಿಸಿದೆ. ಧಾರವಾಡ-ಬೆಂಗಳೂರು ಮಾರ್ಗವು 2 ತಿಂಗಳಲ್ಲಿ ಶೇ. 80, 6ನೇ ತಿಂಗಳಿಗೆ ಶೇ. 81ರಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ.

ಯಶವಂತಪುರ- ಕಾಚಿಗುಡ:

ಸೆ. 25, 2023ರಂದು ಆರಂಭವಾದ ಈ ರೈಲು ಸಹ ಎರಡೂ ಮಾರ್ಗಗಳಲ್ಲಿ ಮೊದಲು ಶೇ. 90ರಷ್ಟಿದ್ದ ಜನಸಂದಣಿ ನಂತರದ ದಿನಗಳಲ್ಲಿ ಸಂಪೂರ್ಣ ಭರ್ತಿಯಾಯಿತು. ಇದನ್ನು ಮನಗಂಡ ರೈಲ್ವೆ ಇಲಾಖೆ ಪ್ರಯಾಣಿಕರ ಬೇಡಿಕೆಯಂತೆ 8 ಕೋಚ್‌ಗಳಿದ್ದ ಈ ರೈಲನ್ನು 2025ರ ಜುಲೈನಲ್ಲಿ 16 ಕೋಚ್‌ಗಳಿಗೆ ವಿಸ್ತರಿಸಿದೆ.

ಬೆಂಗಳೂರು-ಕಲಬುರಗಿ:

ಮಾರ್ಚ್ 15, 2024ರಂದು ಆರಂಭವಾದ ಈ ರೈಲು ಮೊದಲು ಮಿಶ್ರ ಆರಂಭ ಕಂಡಿತು. ಎಸ್ಎಂವಿಟಿ ಬೆಂಗಳೂರು-ಕಲಬುರಗಿ ಮಾರ್ಗವು 2 ತಿಂಗಳಲ್ಲೇ ಶೇ. 90 ದಾಟಿದರೆ, ಕಲಬುರಗಿ-ಎಸ್ಎಂವಿಟಿ ಬೆಂಗಳೂರು ಮಾರ್ಗವು ಮೊದಲ ತಿಂಗಳಲ್ಲಿ ಕೇವಲ ಶೇ. 42 ಆಸನ ಭರ್ತಿಯಾಗುತ್ತಿದ್ದವು. 6 ತಿಂಗಳ ಬಳಿಕ ಶೇ. 93ರಷ್ಟು ಪ್ರಯಾಣಿಕರು ಸಂಚರಿಸಲು ಆರಂಭಿಸಿದರು.

ಹುಬ್ಬಳ್ಳಿ-ಪುಣೆ:

ಸೆ. 15, 2024ರಂದು ಆರಂಭಗೊಂಡ ಹುಬ್ಬಳ್ಳಿ-ಪುಣೆ (20669) ವಂದೇ ಭಾರತ್ ರೈಲು ಏಪ್ರಿಲ್‌ನಲ್ಲಿ ಶೇ. 95.47ರಷ್ಟು ಬುಕ್ಕಿಂಗ್ ಮತ್ತು ಶೇ. 61.5ರಷ್ಟು ಆದಾಯ ಪಡೆದಿದೆ. ಪ್ರಸ್ತುತ ಮೇ ಮತ್ತು ಜೂನ್ ತಿಂಗಳಲ್ಲಿ ಶೇ. 85ರಷ್ಟು ಬುಕ್ಕಿಂಗ್, ಶೇ. 55ರಷ್ಟು ಆದಾಯ. ಜುಲೈ-ಆಗಸ್ಟ್‌ನಲ್ಲಿ ಶೇ. 65-69ರಷ್ಟು ಬುಕ್ಕಿಂಗ್ ಇಳಿಕೆಯಾಗಿದ್ದು, ಶೇ. 41-45ರಷ್ಟು ಆದಾಯ ಕಂಡಿತ್ತು. ಸೆಪ್ಟೆಂಬರ್‌ನಲ್ಲಿ ರೈಲು ಮತ್ತೆ ಸುಧಾರಣೆ ಕಂಡು ಶೇ. 71.91 ಬುಕ್ಕಿಂಗ್, ಶೇ. 46.73 ಆದಾಯ ದಾಖಲಿಸಿದೆ. ಪುಣೆ-ಹುಬ್ಬಳ್ಳಿ (20670) ವಂದೇ ಭಾರತ್ ರೈಲು ಏಪ್ರಿಲ್‌ನಲ್ಲಿ ಶೇ. 95.72 ಬುಕ್ಕಿಂಗ್, ಶೇ. 62.58 ಆದಾಯ ಕಂಡಿದೆ. ಆಗಸ್ಟ್‌ನಲ್ಲಿ ಶೇ. 86.22ರಷ್ಟು ಬುಕ್ಕಿಂಗ್, ಶೇ. 54.81 ಆದಾಯದ ಮೂಲಕ ಸ್ಥಿರ ಪ್ರದರ್ಶನ ಮುಂದುವರಿಸಿತು. ಸೆಪ್ಟೆಂಬರ್‌ನಲ್ಲಿ ಶೇ. 65.52ರಷ್ಟು ಬುಕ್ಕಿಂಗ್ ಇಳಿದಿದ್ದರೂ, ಒಟ್ಟಾರೆಯಾಗಿ ಈ ಮಾರ್ಗದ ಕಾರ್ಯಕ್ಷಮತೆ ಉತ್ತಮವಾಗಿಯೇ ಉಳಿದಿದೆ.

ಉತ್ತಮ ಸ್ಪಂದನೆ

ಆ. 10ರಿಂದ ಆರಂಭವಾಗಿರುವ ಬೆಳಗಾವಿ-ಬೆಂಗಳೂರು (26751) ಮಾರ್ಗದಲ್ಲಿ ಆಗಸ್ಟ್‌ನಲ್ಲಿ 5,300 ಪ್ರಯಾಣಿಕರಿಂದ ₹69 ಲಕ್ಷ, ಸೆಪ್ಟೆಂಬರ್‌ನಲ್ಲಿ 7,491 ಪ್ರಯಾಣಿಕರಿಂದ ₹96.6 ಲಕ್ಷ ಮತ್ತು ಅಕ್ಟೋಬರ್‌ನಲ್ಲಿ 9,273 ಪ್ರಯಾಣಿಕರಿಂದ ₹1.23 ಕೋಟಿ ಆದಾಯ ಬಂದಿದೆ. ಬುಕ್ಕಿಂಗ್ ಶೇ. 55ರಿಂದ ಶೇ. 67ಕ್ಕೆ ಏರಿಕೆಯಾಗಿದೆ. ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಆಗಸ್ಟ್‌ನಲ್ಲಿ 7,970 ಪ್ರಯಾಣಿಕರಿಂದ ₹1 ಕೋಟಿ, ಸೆಪ್ಟೆಂಬರ್‌ನಲ್ಲಿ 11,100 ಪ್ರಯಾಣಿಕರಿಂದ ₹1.37 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 11,079 ಪ್ರಯಾಣಿಕರಿಂದ ₹1.38 ಕೋಟಿ ಆದಾಯ ಗಳಿಸಿದೆ. ಬುಕ್ಕಿಂಗ್‌ ಶೇ. 80ಕ್ಕೆ ಏರಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಐಎಎಲ್ ನಿರ್ಬಂಧವಿದ್ದರೂ ಬೆಂಗಳೂರು 2ನೇ ಏರ್‌ಪೋರ್ಟ್‌ ನಿರ್ಮಾಣ ಪ್ರಕ್ರಿಯೆ ಆರಂಭ: ಎಂ.ಬಿ. ಪಾಟೀಲ
ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?