ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ?

By Kannadaprabha News  |  First Published Jun 16, 2020, 7:20 AM IST

ಕೊರೋನಾ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಳ| ಖಾಸಗಿ ಆಸ್ಪತ್ರೆಗಳಲ್ಲಿಕೊರೋನಾ ಚಿಕಿತ್ಸೆ?| ಶೀಘ್ರ ನಿರ್ಧಾರ: ಸುಧಾಕರ್‌


ಬೆಂಗಳೂರು(ಜೂ.16): ಕೊರೋನಾ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆಗೆ ಅವಕಾಶ ನೀಡುವ ಚಿಂತನೆ ಹೊಂದಿದೆ.

ಸೋಮವಾರ ಈ ವಿಷಯ ತಿಳಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಖಾಸಗಿ ವಲಯವೂ ಕೈಜೋಡಿಸಬೇಕಿದೆ. ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆ ಆರಂಭಿಸಲಿದ್ದು, ಸರ್ಕಾರವೇ ಚಿಕಿತ್ಸಾ ದರ, ಪರೀಕ್ಷಾ ದರ ಮುಂತಾದವುಗಳನ್ನು ನಿಗದಿಪಡಿಸಲಿದೆ ಎಂದು ತಿಳಿಸಿದರು.

Tap to resize

Latest Videos

ರಾಜ್ಯದಲ್ಲಿ ಹರ್ಡ್‌ ಇಮ್ಯುನಿಟಿ ಪ್ರಯತ್ನ ಡೇಂಜರ್: ತಜ್ಞರ ಸಲಹೆ, ಚಿಂತನೆ ಕೈಬಿಟ್ಟ ಸರ್ಕಾರ!

ಏಕರೂಪದ ದರ ನಿಗದಿಯಾದ ನಂತರ, ಸೂಚಿತ ದರ ಮೀರಿ ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಹಾಗೂ ಚಿಕಿತ್ಸೆಗೆ ಯಾವುದೇ ಆಸ್ಪತ್ರೆಗೆ ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೊರೋನಾ ಚಿಕಿತ್ಸೆಗೆ ವಿಮಾ ಸೌಲಭ್ಯ:

ಕೋವಿಡ್‌ ಚಿಕಿತ್ಸೆಯನ್ನೂ ಆಯಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ವಿಮೆ ಅಡಿಯಲ್ಲಿ ಪರಿಗಣಿಸುವ ನಿಟ್ಟಿನಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯದ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸುವುದಾಗಿ ಇದೇ ವೇಳೆ ಸಚಿವ ಸುಧಾಕರ್‌ ತಿಳಿಸಿದರು.

ಎಬಿಎಆರ್‌ಕೆ ಆರೋಗ್ಯ ವಿಮೆ ಅಡಿಯಲ್ಲಿ ಕೋವಿಡ್‌ ಚಿಕಿತ್ಸೆ ಸೇರಿಸುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಚಿಕಿತ್ಸೆಗೆ ಅನುಕೂಲ ಆಗಲಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಮನವಿ ಮಾಡಲಾಗುವುದು ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾಸ್ಕ್‌ ಧರಿಸುವುದರಿಂದ ಶೇ.90ರಷ್ಟುಸೋಂಕು ತಡೆಗಟ್ಟಬಹುದಾಗಿದೆ. ಆದ್ದರಿಂದ ಮಾÓ್ಕ… ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಮಾಧ್ಯಮಗಳ ಪಾತ್ರ ದೊಡ್ಡದು:

ಕೊರೋನಾ ಸಂಬಂಧಿಸಿದಂತೆ ಜನರಲ್ಲಿ ಇರುವ ಆತಂಕವನ್ನು ದೂರಮಾಡುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಊಹಾಪೋಹಗಳಿಗೆ ಮನ್ನಣೆ ನೀಡದೆ ನೈಜ ಅಂಶಗಳನ್ನು ಮಾತ್ರವೇ ಜನರಿಗೆ ತಲುಪಿಸಬೇಕು ಎಂದು ಸಚಿವರು ಮನವಿ ಮಾಡಿದರು.

40 ಜನ ಐಸಿಯುಗೆ: ರಾಜ್ಯದಲ್ಲಿ ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ!

ಬೆಂಗಳೂರಿನಲ್ಲಿ ಸುಮಾರು 697 ಸೋಂಕಿತರಲ್ಲಿ ಪ್ರಸ್ತುತ 330 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ ಕೇವಲ 6 ಜನ ಇದ್ದಾರೆ. ಉಳಿದವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಶೇ.93ರಷ್ಟುಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಕೊರೋನಾ, ಸಾರ್ಸ್‌ ವೈರಾಣುವಿಗಿಂತ ಅಪಾಯಕಾರಿಯೇನೂ ಅಲ್ಲ. ಕೊರೋನಾದಿಂದ ರಾಷ್ಟ್ರೀಯ ಸರಾಸರಿ ಮರಣ ಪ್ರಮಾಣ ಶೇ.2.8ರಷ್ಟಿದ್ದರೆ, ನಮ್ಮ ರಾಜ್ಯದಲ್ಲಿ ಕೇವಲ ಶೇ.1.2ರಷ್ಟಿದೆ. ಕರೋನಾ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ಬಿಟ್ಟರೆ ಇದು ಇತರೆ ವೈರಾಣುಗಳಿಗಿಂತ ಕಡಿಮೆ ಅಪಾಯಕಾರಿಯಾಗಿದೆ. ಮಾಧ್ಯಮಗಳು ಜನರಿಗೆ ಇಂತಹ ಅಂಶಗಳನ್ನು ಹೆಚ್ಚು ತೋರಿಸಿ ಆತಂಕ ದೂರ ಮಾಡಬೇಕು ಎಂದು ಮನವಿ ಮಾಡಿದರು.

click me!