61ನೇ ಬರ್ತ್ ಡೇಗೆ ತಾಯಿ ಜೊತೆ ಮದ್ಯ ಕುಡಿದ ಮಗ; ಅಮ್ಮನ ರಿಯಾಕ್ಷನ್ ಹೇಗಿತ್ತು ಅಂತ ನೋಡಿ

Published : Aug 26, 2025, 09:44 PM IST
Son Mother

ಸಾರಾಂಶ

ಮಗನೊಬ್ಬ ತಾಯಿಯ 61ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಮೊದಲ ಬಾರಿಗೆ ತಾಯಿಯೊಂದಿಗೆ ಮದ್ಯಪಾನ ಮಾಡಿ ಸಂಭ್ರಮಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಂಡುಬರುವ ಪ್ರೀತಿ ಮತ್ತು ಬಾಂಧವ್ಯ ಎಲ್ಲರ ಮನಗೆದ್ದಿದೆ.

ಬೆಂಗಳೂರು: ಮಕ್ಕಳ ಬರ್ತ್ ಡೇ ಅಂದ್ರೆ ಅಮ್ಮನಿಗೆ ಒಂದು ರೀತಿ ಹಬ್ಬದ ಸಂಭ್ರಮ. ತನ್ನ ಆರ್ಥಿಕ ಶಕ್ತಿಗನುಸಾರವಾಗಿ ಪೋಷಕರು ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಮಕ್ಕಳು ದೊಡ್ಡವರಾದಂತೆ ಪೋಷಕರ ಬರ್ತ್ ಡೇ ಆಚರಿಸುತ್ತಾರೆ. ಯಂಗ್ ಮಗನೊಬ್ಬ ತಾಯಿಯ 61ನೇ ಹುಟ್ಟುಹಬ್ಬದಂದು ಅಮ್ಮನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಮೊದಲ ಬಾರಿ ತಾಯಿಯೊಂದಿಗೆ ಮದ್ಯ ಸೇವಿಸಿ ಮಗ್ ಫುಲ್ ಎಂಜಾಯ್ ಮಾಡಿದ್ದಾರೆ. ಈ ವಿಶೇಷ ಮತ್ತು ವಿಭಿನ್ನ ಬರ್ತ್ ಡೇ ಆಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವ ಮೂವರು ಕನ್ನಡ ಮಾತನಾಡುತ್ತಿರೋದನ್ನು ಕೇಳಬಹುದು.

ಶುಭಾಗ್ ರಾವ್ ಹೆಸರಿನ (shubhag_rao) ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದುವರೆಗೂ ಈ ವಿಡಿಯೋಗೆ 34 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಖ್ಯಾತ ನಿರೂಪಕಿ ಹೇಮಲತಾ ಸಹ ವೈರಲ್ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಬಹುತೇಕರು ತಾಯಿ ಮತ್ತು ಮಗನ ನಡುವಿನ ಬಾಂಧವ್ಯವನ್ನು ತಮ್ಮ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ನಾನು ಫೈಸ್ಟ್ ಟೈಮ್ ಅಮ್ಮನ ಜೊತೆ ಶಾಟ್ ಕುಡೀತಾ ಇದ್ದೀನಿ. ಅದು ಸಹ ಅಮ್ಮನ 61ನೇ ಬರ್ತ್ ಡೇ ದಿನದಂದು ಎಂದು ಯುವಕ ಹೇಳುತ್ತಾ ಚೀಯರ್ಸ್ ಎನ್ನುತ್ತಾನೆ. ಇವರಿಬ್ಬರ ಜೊತೆಯಲ್ಲಿದ್ದ ಯುವತಿ ಜೋರು ಧ್ವನಿಯಲ್ಲಿ ಏಯ್‌ ಎಂದು ಕೂಗುತ್ತಿರೋದನ್ನು ನೀವು ಸಹ ಗಮನಿಸಬಹದು. ನಾನು ಇದುವರೆಗೂ ಇದನ್ನು ಟೇಸ್ಟ್ ಮಾಡಿಲ್ಲ ಅಪ್ಪಿ, ಬೇಡ ಎಂದು ತಾಯಿ ಹೇಳುತ್ತಾರೆ. ಅದಕ್ಕೆ ಮಗ, ಏನು ಆಗಲ್ಲ ಕುಡಿಯಮ್ಮಾ ಎಂದು ಧೈರ್ಯ ತುಂಬುತ್ತಾನೆ.

ಟೀ ಕುಡಿದಂಗೆ ಅದನ್ನು ಕುಡಿಬಾರದು. ಚೀಯರ್ಸ್ ಅಂದ್ಮೇಲೆ ಒಂದೇ ಸಲಕ್ಕೆ ಎತ್ತಬೇಕು. ಇಲ್ಲಿ ನೋಡು ನಾನು ಮೊದಲ ಶಾಟ್ ಮುಗಿಸಿ, ಎರಡನೇಯದ್ದು ಹಿಡಿದುಕೊಂಡಿದ್ದೇನೆ ಎಂದು ತಾಯಿಗೆ ಮಗ ಸಲಹೆ ನೀಡುತ್ತಾನೆ. ಮೊದಲು ಸಿಪ್ ಕುಡಿಯುತ್ತಿದ್ದಂತೆ ತಾಯಿ, ಆ ಒಗರುತನಕ್ಕೆ ಮುಖ ಸಿಂಡರಿಸುತ್ತಾರೆ. ಈ ವೇಳೆ ಮಗ ಜಿಂಜರ್-ಗಾರ್ಲಿಕ್ ಪೇಸ್ಟ್ ರೀತಿಯಲ್ಲಿರುತ್ತೆ ಫುಲ್ ಕುಡಿಯುವಂತೆ ಹೇಳುತ್ತಾನೆ. ಪಕ್ಕದಲ್ಲಿ ಕುಳಿತ ಯುವತಿ, ಜೋರಾಗಿ ಮಸಾಲೆ ಚಾಯ್ ಎಂದು ಹೇಳಿ ನಗುತ್ತಾರೆ.

ವಿಜೆ ಹೇಮಲತಾ ಕಮೆಂಟ್ ಮಾಡಿ ಹೇಳಿದ್ದೇನು?

ಲವ್ಲಿ ವಿಡಿಯೋ, ಇಲ್ಲಿ ನಮಗೆ ಎರಡು ಸುಂದರವಾದ ವಿಷಯಗಳು ಕಾಣಿಸುತ್ತವೆ.

1. ಮಕ್ಕಳು ತಮ್ಮದೇ ಆದ ರೀತಿಯಲ್ಲಿ ತಾಯಂದಿರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ ಹೆಚ್ಚಿನವರಿಗೆ ತಮ್ಮ ತಾಯಂದಿರ ಹುಟ್ಟುಹಬ್ಬದ ಬಗ್ಗೆ ತಿಳಿದಿರುವುದಿಲ್ಲ ಅಥವಾ ತಿಳಿದಿದ್ದರೂ ಅಮ್ಮಂದಿರ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ.

2.ಆ 61 ವರ್ಷದ ಯುವ ತಾಯಿ ತನ್ನ ಕುಟುಂಬದೊಂದಿಗೆ ತನ್ನ ಹುಟ್ಟುಹಬ್ಬವನ್ನು ಆ ಎಲ್ಲಾ ಸ್ಟೀರಿಯೊಟೈಪ್‌ಗಳನ್ನು ಮುರಿದು ಸುಂದರವಾಗಿ ಆಚರಿಸುತ್ತಿದ್ದಾರೆ. ಯಾರಾದರೂ ಹೇಳಬೇಕೆಂದರೆ, ಇದೆಲ್ಲವೂ ಅವಳ ಜೀವನ ಮತ್ತು ಅವಳ ಮಕ್ಕಳ ಸಂತೋಷಕ್ಕಾಗಿ ಎಂದು ಜನ್ಮದಿನದ ಶುಭಾಶಯಗಳನ್ನು ಸಹ ವಿಜೆ ಹೇಮಲತಾ ಹೇಳಿದ್ದಾರೆ.

ತಮಾಷೆಯ ಕಮೆಂಟ್‌ಗಳು ಸಾಕಷ್ಟು!

ಇದರ ಜೊತೆಯಲ್ಲಿ ಸಾಕಷ್ಟು ತಮಾಷೆಯ ಕಮೆಂಟ್‌ಗಳು ಈ ವಿಡಿಯೋಗೆ ಬಂದಿವೆ. ಇವರು ಕಣ್ರೋ ನಿಜವಾದ ಸಂತೂರ್ ಮಮ್ಮಿ. 61ನೇ ಬರ್ತ್ ಡೇ ಅಂದ್ರೆ ನಂಬೋದಕ್ಕೆ ಆಗುತ್ತಿಲ್ಲ. ಟೀ ಕುಡಿದಂತೆ ಒಂದೇ ಸಿಪ್‌ನಲ್ಲಿ ಕುಡಿಯಬಹುದು. ಸುಂದರವಾದ ಕುಟುಂಬ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನುಳಿದಂತೆ ಈ ಪೋಸ್ಟ್‌ಗೂ ಕೆಲವು ನೆಗೆಟಿವ್ ಕಮೆಂಟ್‌ಗಳು ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶುಭಾಗ್, ಜನರಲ್ಲಿ ತುಂಬಾ ಅಭದ್ರತೆ ಮತ್ತು ಅಸೂಯೆ ಇದೆ. ನಮ್ಮ ಜೀವನದಲ್ಲಿ ನಾವು ಖುಷಿಯಾಗಿದ್ದೇವೆ. ನಿಮ್ಮ ನೆಗೆಟಿವ್ ಕಮೆಂಟ್ ಮತ್ತು ಜಡ್ಜ್‌ಮೆಂಟ್‌ನಿಂದ ನಮಗೆ ಏನೂ ಆಗಲ್ಲ. ನೆಗೆಟಿವ್ ಕಮೆಂಟ್ ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಚಳಿ ಬಿಡಿಸಿದ್ದಾರೆ.

 

 

ಈ ಪೋಸ್ಟ್‌ ನೋಡಿ ನಿಜವಾಗಿ ಆನಂದಿಸಿದವರಿಗೂ ಮತ್ತು ಅದರಲ್ಲಿನ ಸಂತೋಷವನನ್ನು ನೋಡಿದ ಎಲ್ಲಾ ಜನರಿಗೆ ಧನ್ಯವಾದಗಳು. ವಿಡಿಯೋಗೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಕ್ಕೆ ನೋಡುಗರಿಗೆ ಶುಭಾಗ್ ಧನ್ಯವಾದಗಳನ್ನು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು