Karnataka Politics: ದಕ್ಷ, ನಿಷ್ಪಕ್ಷಪಾತ ತನಿಖೆಯಿಂದ ಕೆಲವರಿಗೆ ಭಯವಾಗ್ತಿದೆ: ಸಿಎಂ ಬೊಮ್ಮಾಯಿ

Published : May 04, 2022, 06:32 AM IST
Karnataka Politics:  ದಕ್ಷ, ನಿಷ್ಪಕ್ಷಪಾತ ತನಿಖೆಯಿಂದ ಕೆಲವರಿಗೆ ಭಯವಾಗ್ತಿದೆ: ಸಿಎಂ ಬೊಮ್ಮಾಯಿ

ಸಾರಾಂಶ

*  ರಾಜ್ಯ ಪೊಲೀಸ್‌ ಇಲಾಖೆಗೆ ಬೊಮ್ಮಾಯಿ ಶಹಬ್ಬಾಸ್‌ *  ಅಮಿತ್‌ ಶಾ ಒಬ್ಬ ಸ್ಟೇಟ್ಸ್‌ಮನ್‌ *  ನಮ್ಮ ದೇಶದ ಮುಂದಿನ ಯುವಪೀಳಿಗೆ ಬಗ್ಗೆ ಯೋಚಿಸುವ ದೊಡ್ಡ ನಾಯಕ

ಬೆಂಗಳೂರು(ಮೇ.04): ಯಾವುದೇ ಹಗರಣ, ಅಕ್ರಮ ಪ್ರಕರಣಗಳೇ ಆಗಲಿ ರಾಜ್ಯ ಪೊಲೀಸ್‌ ಇಲಾಖೆ(Department of Police) ದಕ್ಷ ಹಾಗೂ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ. ಇದರಿಂದ ಕೆಲವರಿಗೆ ತೊಂದರೆಯಾಗುತ್ತಿದ್ದು, ಎಲ್ಲಿ ತಮ್ಮ ಬುಡಕ್ಕೇ ಬರುತ್ತದೋ ಎಂಬ ಭಯದಿಂದ ನಿತ್ಯ ಏನನ್ನಾದರೂ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪರೋಕ್ಷವಾಗಿ ಪ್ರತಿಪಕ್ಷಗಳ ನಾಯಕರುಗಳಿಗೆ ತಿರುಗೇಟು ನೀಡಿದ್ದಾರೆ.

ನಗರದ ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದ ಅವರು, ಯಾವುದೇ ಅಕ್ರಮ, ಹಗರಣಗಳಿದ್ದರೂ(Scam) ನಮ್ಮ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಯಾವುದೇ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ(Impartial Investigation) ನಡೆಸುತ್ತಿದ್ದಾರೆ. ಇದರಿಂದ ಕೆಲವರಿಗೆ ತೊಂದರೆಯಾಗಿದೆ. ಹಾಗಾಗಿ ಅವರು ದಿನನಿತ್ಯ ಅನಗತ್ಯವಾಗಿ ಒಂದಿಲ್ಲೊಂದು ಮಾತನಾಡುತ್ತಿದ್ದಾರೆ. ಎಲ್ಲಿ ತನಿಖೆ ಅವರ ಬುಡಕ್ಕೇ  ಬಂದು ಬಿಡುತ್ತದೋ ಎಂಬ ಭಯದಿಂದ ಅವರು ಹಾಗೆ ಮಾತನಾಡುತ್ತಿದ್ದಾರೆ. ಆದರೆ, ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮ ಸರ್ಕಾರ ಯಾರ ವಿರುದ್ಧವೂ ಇಲ್ಲ. ಅಪರಾಧಿಗಳ ವಿರುದ್ಧ ಇದೆ. ಅಪರಾಧಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದರು.

Amit shah Visit ನೀವು ಆಡಳಿತ ನಡೆಸಿ ಉಳಿದಿದ್ದು ನಮಗೆ ಬಿಡಿ,ಬೊಮ್ಮಾಯಿಗೆ ಶಾ ಸಂದೇಶ!

ಕೇಂದ್ರ ಸಚಿವರಾದ ಅಮಿತ್‌ ಶಾ(Amit Shah) ಅವರು ರಾಜ್ಯಕ್ಕೆ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಮಹಿಳಾ ರಕ್ಷಣೆಗಾಗಿ ನಿರ್ಭಯ ಯೋಜನೆಯಡಿ ರಾಜ್ಯಕ್ಕೆ 750 ಕೋಟಿ ರು. ಅನುದಾನ ನೀಡಿದ್ದಾರೆ. ಈ ಅನುದಾನದಿಂದ ಇಡೀ ಬೆಂಗಳೂರು(Bengaluru) ನಗರದಾದ್ಯಂತ 7000ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸುವ, ವಿಶೇಷ ಕಮಾಂಡ್‌ ಸೆಂಟರ್‌ ಮತ್ತು ಠಾಣೆಗಳನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ರಾಜ್ಯದ ಸಮಸ್ತ ಮಹಿಳಾ ಸಮಾಜದ ಪರವಾಗಿ ಅಮಿತ್‌ ಶಾ ಅವರಿಗೆ ಅಭಿನಂದೆ ಸಲ್ಲಿಸುತ್ತೇನೆ ಎಂದರು.

ಅಮಿತ್‌ ಶಾ ಒಬ್ಬ ಸ್ಟೇಟ್ಸ್‌ಮನ್‌. ಜಮ್ಮು ಕಾಶ್ಮೀರದ ಆರ್ಟಿಕಲ್‌ 370 ರದ್ದು, ದೇಶದಲ್ಲಿದ್ದ ಕೆಲ ಅನಿಷ್ಠ ಕಾನೂನು ರದ್ದು ವಿಚಾರ, ಗಡಿ ಭಾಗದ ಭದ್ರತೆ ವಿಚಾರ ಸೇರಿದಂತೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಷಯಗಳಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಮುನ್ನುತ್ತಿರುವ ಅವರು ನಮ್ಮ ದೇಶದ ಮುಂದಿನ ಯುವಪೀಳಿಗೆ ಬಗ್ಗೆ ಯೋಚಿಸುವ ದೊಡ್ಡ ನಾಯಕ ಎಂದು ವರ್ಣಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ