ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಬಹರೇನ್‌ನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಮಂಗಳೂರು ಮೂಲದ ಡಾ.ಸುನಿಲ್ ರಾವ್ ಎಂಬುವವರನ್ನು ಬಹರೇನ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೆಲಸದಿಂದ ವಜಾ ಮಾಡಲಾಗಿದೆ.
ಮಂಗಳೂರು (ಅ.21): ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಬಹರೇನ್‌ನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಮಂಗಳೂರು ಮೂಲದ ಡಾ.ಸುನಿಲ್ ರಾವ್ ಎಂಬುವವರನ್ನು ಬಹರೇನ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೆಲಸದಿಂದ ವಜಾ ಮಾಡಲಾಗಿದೆ.
ಇಲ್ಲಿನ ‘ರಾಯಲ್ ಬಹ್ರೇನ್ ಆಸ್ಪತ್ರೆ’ಯಲ್ಲಿ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಸುನೀಲ್, ಹಮಾಸ್ ಮೇಲಿನ ಇಸ್ರೇಲ್ ದಾಳಿಯನ್ನು ಬೆಂಬಲಿಸಿ, ಪ್ಯಾಲೆಸ್ತೀನ್‌ನನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಕೆಲವರು ಈ ಪೋಸ್ಟನ್ನು ಬಹರೈನ್ ಆಡಳಿತಕ್ಕೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಬಹ್ರೇನ್ ಅರಬ್ ರಾಷ್ಟ್ರವಾಗಿದ್ದು, ಅದು ಪ್ಯಾಲೆಸ್ತೀನ್‌ಗೆ ತನ್ನ ಸಂಪೂರ್ಣ ಬೆಂಬಲ ನೀಡಿದೆ ಹಾಗೂ ಇಸ್ರೇಲ್ ವಿರೋಧಿಯಾಗಿದೆ. ಹೀಗಾಗಿ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸರ್ಕಾರ ವೈದ್ಯ ಸುನೀಲ್ ರಾವ್ ಬಂಧಿಸಲಾಗಿದೆ. ತನ್ನ ನೆಲದಲ್ಲಿ ಕೆಲಸ ಮಾಡುತ್ತ ತನ್ನ ವಿರೋಧಿ ರಾಷ್ಟ್ರ ಬೆಂಬಲಿಸಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ ಬಹ್ರೇನ್ ಸುನೀಲ್‌ರನ್ನು ಕೆಲಸದಿಂದ ವಜಾಗೊಳಿಸಿದೆ. ಅಲ್ಲದೇ ಇದು ತನ್ನ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
900 ವರ್ಷಗಳ ಇತಿಹಾಸ ಚರ್ಚ್‌ಗೆ ಬಾಂಬ್ ಎಸೆದ ಇಸ್ರೇಲ್, ಗಾಜಾದಲ್ಲಿ 4 ಸಾವಿರದ ಗಡಿ ಮುಟ್ಟಿದ ಸಾವು!
ಇದಾದ ಬಳಿಕ ಸುನೀಲ್ ಕೂಡಲೇ ತಮ್ಮ ಪೋಸ್ಟ್ ಕುರಿತು ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನಾನು ಟ್ವೀಟ್ ಮಾಡಿದ್ದ ಪೋಸ್ಟ್‌ಗಳ ಬಗ್ಗೆ ಕ್ಷಮೆಯಾಚಿಸುತ್ತೇನೆ. ಇಂತ ಸಂದರ್ಭದಲ್ಲಿ ನಾನು ಮಾಡಿದ ಪೋಸ್ಟ್ ಆಕ್ಷೇಪಾರ್ಹವಾಗಿದ್ದು, ಓರ್ವ ವೈದ್ಯನಾಗಿ ಎಲ್ಲ ಜೀವಗಳು ಮುಖ್ಯವಾಗಿದೆ. ನಾನು ಈ ದೇಶ (ಬಹ್ರೇನ್) ಮತ್ತು ಧರ್ಮವನ್ನು ಗೌರವಿಸುತ್ತೇನೆ’ ಎಂದಿದ್ದಾರೆ.
ವೈದ್ಯ ಸುನಿಲ್ ರಾವ್ ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡಿದ್ದರು. ಬಹರೈನ್ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಬಹರೈನ್ ನಲ್ಲೇ ನೆಲೆಸಿರುವ ಸುನಿಲ್ ರಾವ್. ಇದೀಗ ಬಹರೈನ್ ಪೊಲೀಸರು ಬಂಧಿಸುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರನ್ನು ಹುದ್ದೆಯಿಂದ ತೆಗೆದು ಹಾಕಿದೆ.
ಪ್ಯಾಲೆಸ್ತೀನ್ ಪರ ಬೀದಿಗಿಳಿದ ಕಮ್ಯುನಿಸ್ಟ್ ಸಂಘಟನೆಗಳು, ಫ್ರೀಡಂ ಪಾರ್ಕ್‌ನಲ್ಲಿ ವಶಕ್ಕೆ ಪಡೆದ ಪೊಲೀಸರು