ಪೈಲಟ್ ಇಲ್ಲದೇ 20 ನಿಮಿಷ ಪರದಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್!

By Sathish Kumar KH  |  First Published Nov 21, 2024, 3:28 PM IST

ಉಡುಪಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಲಿಕಾಪ್ಟರ್ ಟೇಕ್ ಆಫ್ ಮಾಡಲು ಪೈಲೇಟ್ ಇಲ್ಲದೆ 20 ನಿಮಿಷ ಕಾದರು. ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದ್ದು, ನಿಯಮಾವಳಿಗಳಿಂದಾಗಿ ಪೈಲಟ್ ಸರಿಯಾದ ಸಮಯಕ್ಕೆ ಬಂದರು.


ಉಡುಪಿ (ನ.21): ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಡುಪಿಗೆ ಹೋಗಿದ್ದ ವೇಳೆ ಹೆಲಿಕಾಪ್ಟರ್‌ನಲ್ಲಿ ಹೋಗಲು ಮುಂದಾದಾಗ ಹೆಲಿಪ್ಯಾಡ್‌ಗೆ ತೆರಳಿ ಹೆಲಿಕಾಪ್ಟರ್‌ನಲ್ಲಿ ಕುಳಿತರೂ ಪೈಲಟ್‌ ಇಲ್ಲದೇ 20 ನಿಮಿಷ ಪರದಾಡಿದ ಘಟನೆ ನಡೆದಿದೆ. 

ಹೌದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಉಡುಪಿಯಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಮಾಡಲು ಪೈಲೇಟ್ ಇಲ್ಲದೆ ಪರದಾಡಿದ್ದಾರೆ. ಬರೋಬ್ಬರಿ 20 ನಿಮಿಗಳ ಕಾಲ ಹೆಲಿಕಾಪ್ಟರ್ ಪೈಲೆಟ್ ತಡವಾಗಿ ಬಂದಿದ್ದು, ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಹೋಗುವ ಸ್ಥಳಕ್ಕೆ ತೆರಳಲು ಟೇಕಾಫ್ ಆಯಿತು. ಇನ್ನು ಹೆಲಿಪ್ಯಾಡ್‌ನಲ್ಲಿ ಪೈಲೆಟ್‌ಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಕಾದು ಕಾದು ಸುಸ್ತಾದರು. ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ನಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

Tap to resize

Latest Videos

undefined

ಇಂದು ಮಧ್ಯಾಹ್ನ 1.30ಕ್ಕೆ ಬೈಂದೂರಿನ ಹೆಲಿಪ್ಯಾಡ್‌ನಿಂದ ಡಿ.ಕೆ. ಶಿವಕುಮಾರ್ ಅವರು ಹೋಗಬೇಕಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆಗಬೇಕಿತ್ತು. ಆದರೆ, ಡಿ.ಕೆ.ಶಿವಕುಮಾರ್ ಅವಧಿಗಿಂತ ಮುನ್ನವೇ ಅಂದರೆ 12:10ಕ್ಕೆ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಬಳಿಕ ತರಾತುರಿಯಲ್ಲಿ ಎಲ್ಲವನ್ನೂ ಪರಿಶೀಲನೆ ಮಾಡಿಕೊಂಡು 12.30ಕ್ಕೆ ಹೆಲಿಪ್ಯಾಡ್‌ನೊಳಗೆ ಪ್ರವೇಶ ಮಾಡಿ ಹೆಲಿಕಾಪ್ಟರ್ ಏರಿ ಕುಳಿತಿದ್ದಾರೆ. ಆದರೆ, ವಾಯುಯಾನದಲ್ಲಿ ನಿಯಮಾವಳಿ ಉಲ್ಲಂಘನೆ ಮಾಡುವಂತಿಲ್ಲ. ಹೀಗಾಗಿ, ಹೆಲಿಕಾಪ್ಟರ್ ಪೈಲೆಟ್ ಸರಿಯಾದ ಸಮಯಕ್ಕೆ ಹೆಲಿಕಾಪ್ಟರ್ ಟೇಕ್ ಆಫ್ ಮಾಡಲು ಮುಂದಾಗಿದ್ದರು.

ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತ; ರದ್ದಾಗಿರುವ ಕಾರ್ಡ್‌ಗೂ ರೇಷನ್ ಕೊಡ್ತೀವಿ: ಮುನಿಯಪ್ಪ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಗ್ಗೆ ಬೆಂಗಳೂರಿನಿಂದ ಉಡುಪಿಗೆ ಹೆಲಿಕಾಪ್ಟರ್ ಮೂಲಕ ತೆರಳಿದ್ದರು. ಅಲ್ಲಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿ ನಂತರ ಮೀನುಗಾರಿಕೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಬರಲು ಪ್ರವಾಸ ಕಾರ್ಯಕ್ರಮ ನಿಗದಿ ಮಾಡಿದ್ದರು. ಆದರೆ, ಅವಧಿಗಿಂತ ಮುಂಚೆ ಎಲ್ಲ ಕಾರ್ಯಕ್ರಮಗಳು ಮುಗಿದಿದ್ದರಿಂದ ಬೇಗನೆ ಹೆಲಿಪ್ಯಾಡ್‌ನಲ್ಲಿ ಬಂದು ಕುಳಿತಿದ್ದರು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಹೆಲಿಪ್ಯಾಡ್‌ನಲ್ಲಿ ಕಾಯುತ್ತಿದ್ದರೂ ಅವರಿಗಿಂತ 20 ನಿಮಿಷ ತಡವಾಗಿ ಬಂದ ಪೈಲೆಟ್ ಸಮಯಕ್ಕೆ ಸರಿಯಾಗಿ 1.30ಕ್ಕೆ ಹೆಲಿಕಾಪ್ಟರ್ ಟೇಕ್ ಆಫ್ ಮಾಡಿಕೊಂಡು ಬೆಂಗಳೂರಿನತ್ತ ತೆರಳಿತು.

click me!