ಬೆಂಗ್ಳೂರನ್ನು ಸಿಂಗಾಪುರ್ ಮಾಡುವ ಕನಸು ಕಂಡಿದ್ದ ಎಸ್‌.ಎಂ. ಕೃಷ್ಣ: ಸಿದ್ದರಾಮಯ್ಯ

By Girish Goudar  |  First Published Dec 10, 2024, 6:18 PM IST

ಎಸ್.ಎಂ.ಕೃಷ್ಣ ಅವರು ವಿಧಾನಸಭೆ, ವಿಧಾನ‌ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದರು. ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು(ಡಿ.10):  ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಮ್ಮೆನೆಲ್ಲ ಅಗಲಿದ್ದಾರೆ. ಮುತ್ಸದ್ದಿತನ, ದೂರದೃಷ್ಟಿ ಉಳ್ಳವರಾಗಿದ್ದ ರಾಜಕಾರಣಿಯಾಗಿದ್ದರು. ಅವರು ದೀರ್ಘಕಾಲ ರಾಜಕಾರಣದಲ್ಲಿ‌ ಸಕ್ರಿಯರಾಗಿದ್ದರು. ಸುಮಾರು 6 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. ಎಸ್.ಎಂ ಕೃಷ್ಣ ಅವರು ಸಮರ್ಥ ಆಡಳಿತಗಾರರು ಆಗಿದ್ರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು(ಮಂಗಳವಾರ) ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್.ಎಂ.ಕೃಷ್ಣ ಅವರು ವಿಧಾನಸಭೆ, ವಿಧಾನ‌ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದರು. ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಹೇಳಿದ್ದಾರೆ. 

Tap to resize

Latest Videos

ಅನಾರೋಗ್ಯದ ನಡುವೆಯೂ ಹುಟ್ಟೂರು ಮರೆಯದ ಕೃಷ್ಣ, 3 ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದ ಎಸ್. ಎಮ್. ಕೆ

5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ರು. ಬೆಂಗಳೂರನ್ನು ಸಿಂಗಾಪುರ್ ಮಾಡುವ ಕನಸು ಕಂಡಿದ್ರು. ಬೆಂಗಳೂರಿನ ಐಟಿ ಬೆಳವಣಿಗೆ ಎಸ್.ಎಂ.ಕೃಷ್ಣ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ. ಸಿಎಂ ಆಗಿದ್ದಾಗ ಅನೇಕ ಸವಾಲು ಎದುರಿಸಿದ್ದರು, ಬರಗಾಲ, ರಾಜಕುಮಾರ್ ಅಪಹರಣ, ಕಾವೇರಿ ವಿವಾದ. ಆ ಸಂದರ್ಭದ ದೊಡ್ಡ ಸವಾಲನ್ನು ಎದುರಿಸಿದ್ದರು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದು ತಿಳಿಸಿದ್ದಾರೆ. 

ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗಲೇ ನಾನು ಕಾಂಗ್ರೆಸ್ ಸೇರಿದ್ದು. ಅವರು ರಾಜ್ಯಪಾಲರಾಗಿದ್ದಾಗ ನಾನು ಅವರನ್ನು ಭೇಟಿಯಾಗಿ, ನಾನು ಕಾಂಗ್ರೆಸ್ ಸೇರುವ ತೀರ್ಮಾನವನ್ನು ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿ, ಇದು ನೆಸಸಿಟಿ ಅಂದಿದ್ದರು. ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು‌. ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಅವರ ಅಗಲಿಕೆ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. 

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೃಷ್ಣ ಮುತ್ಸದ್ದಿ ರಾಜಕಾರಣಿಯಾಗಿದ್ರು, ಸ್ನೇಹ ಜೀವಿ, ಕುಸ್ತಿಗೆ ಹೆಸರಾಗಿದ್ದವರು, ಸಮಯ ಪಾಲನೆ, ಬೆಂಗಳೂರಿನ ಮೇಲೆ ವಿಷೇಶವಾಗಿ ಪ್ರೀತಿ ಇತ್ತು. ಸ್ವಚ್ಚತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ರು. ಪಾರ್ಕ್ ಗಳಿಗೆ ಹೊಸ ರೂಪ ಕೊಟ್ಟಿದ್ದರು ಎಂದು ತಿಳಿಸಿದ್ದಾರೆ. 

ಐಟಿಗೆ ಹೆಚ್ಚು ಒತ್ತು‌ ಕೊಟ್ಟಿದ್ರು, ಅದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಸ್ತ್ರೀಶಕ್ತಿ ಸಂಘಗಳನ್ನ ಪ್ರಥಮವಾಗಿ ಪ್ರಾರಂಭಿಸಿದ್ರು. ಸ್ಟೇಟ್ ಮೆನ್ ಅಂತ ಕರೆಸಿಕೊಂಡವರು ಕೃಷ್ಣ. ಅವರ ಅಗಲಿಕೆಯಿಂದ ರಾಜ್ಯದ ಜನರಿಗೆ ಅತೀವ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. 

ಸರ್ಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಎಸ್.ಎಂ.ಕೃಷ್ಣ ದೂರ ದೃಷ್ಟಿಯೇ ಕಾರಣ: ಕೋಡಿಮಠ ಶ್ರೀ

ಎಸ್.ಎಂ. ಕೃಷ್ಣ ಇವತ್ತು ನಮ್ಮನ್ನ ಅಗಲಿದ್ದಾರೆ. ಅವರು ಕಾಂಗ್ರೆಸ್‌ನಲ್ಲೇ ಬಹು ವರ್ಷ ಇದ್ರೂ. ಆದರೂ ಹಲವು ರಾಜಕಾರಣಿಗಳಿಗೆ ಪ್ರೇರಣೆಯಾಗಿದ್ದರು. ಚಿಕ್ಕ ವಯಸ್ಸಿನಿಂದಲೂ ಅವರು ನನಗೆ ಮಾರ್ಗದರ್ಶಕರಾಗಿದ್ದರು. ಅವರ ಗಾಂಭೀರ್ಯತೆ, ಪ್ರಬುದ್ಧವಾದ ಮಾತು ಎಲ್ಲವೂ ನನ್ನನ್ನು ಸೆಳೆದಿತ್ತು. ಸಾರ್ವಜನಿಕ ಜೀವನದಲ್ಲಿ ಅದೆಷ್ಟೋ ರಾಜಕಾರಣಿಗಳನ್ನ ನೋಡಿದೀವಿ. ಬೇರೆ ಬೇರೆ ರಾಜಕಾರಣಿಗಳು ಟೀಕೆ ಮಾಡಿದ್ದನ್ನು ನೋಡಿದ್ದೀವಿ. ಆದ್ರೆ ಎಸ್ಎಂಕೆ ಯಾರನ್ನ ಕೂಡ ಅಗೌರವದಿಂದ ನೋಡಿಲ್ಲ. ಅವರ ನಡುವಳಿಕೆ ಅವರ ಬೆಳವಣಿಗೆ ಹಾಗಿತ್ತು ಎಂದು ಅವರ ನೆನಪನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮೆಲುಕು ಹಾಕಿದ್ದಾರೆ. 

ಎಸ್‌.ಎಂ ಕೃಷ್ಣ  ಅವರು ಹಾಕುತ್ತಿದ್ದ ಬಟ್ಟೆ ಅಷ್ಟು ಸ್ಟೈಲಿಶ್ ಆಗಿತ್ತು. ಅದಕ್ಕೂ ಕೂಡ ಅವರಿಂದ ನಾನು ಸ್ಫೂರ್ತಿಯಾಗಿದ್ದೆ. ನಾನು ಅವರ ಹೆಸರು ಹಾಕಿ ಗೂಗಲ್ ಮಾಡಿದ್ದೆ. ಅವರು ಯಾವ ಶರ್ಟ್ ಹಾಕ್ತಾರೆ, ಯಾವ ಟೋಪಿ ಹಾಕ್ತಾರೆ ಅಂತ. ಕಾವೇರಿ ವಿವಾದ, ರಾಜಕುಮಾರ್ ಅಪಹರಣ ಎಲ್ಲವನ್ನೂ ವಿಶೇಷವಾಗಿ ನಿಭಾಯಿಸಿದ್ದರು. ವಿಶೇಷವಾಗಿ ಬೆಂಗಳೂರಿಗೆ ಕೊಡುಗೆ ಕೊಟ್ಟವರು. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನ ಕೊಡಬೇಕು ಅಂತ ಸಿಎಂ ಅವರಿಗೆ ಮನವಿ ಮಾಡುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. 

click me!