ಈಶ್ವರಪ್ಪರನ್ನ ಬಿಜೆಪಿಗೆ ತರಲು ಪ್ರಯತ್ನ? ಸಭೆ ಸೇರಿದ್ದೇಕೆ? ಯತ್ನಾಳ್ ಹೇಳಿದ್ದೇನು?

By Ravi JanekalFirst Published Sep 28, 2024, 1:10 PM IST
Highlights

ಈಶ್ವರಪ್ಪರನ್ನ ಮರಳಿ ಬಿಜೆಪಿಗೆ ಕರೆತರಲು ಸಭೆ ನಡೆಸಿಲ್ಲ. ಇದು ಸುಳ್ಳು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು.

ವಿಜಯಪುರ (ಸೆ.28): ಈಶ್ವರಪ್ಪರನ್ನ ಮರಳಿ ಬಿಜೆಪಿಗೆ ಕರೆತರಲು ಸಭೆ ನಡೆಸಿಲ್ಲ. ಇದು ಸುಳ್ಳು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು.

ಇಂದು ವಿಜಯಪುರದ ಗಣೇಶನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟನೆಗಾಗಿ ಸಭೆ ನಡೆಸಿದ್ದೇವೆ. ರಾಜ್ಯದಲ್ಲಿ ಸಾಬರ ಸಲುವಾಗಿ ಸರ್ಕಾರವಿದೆ ಎನ್ನುವಂತಾಗಿದೆ. ಈ ವಿಚಾರಕ್ಕಾಗಿ ಹಿಂದೂಳಿದ ನಾಯಕರಾದ ಈಶ್ವರಪ್ಪರನ್ನು ಭೇಟಿ ಮಾಡಿದ್ದೇನೆ. ಈಶ್ವರಪ್ಪ ಪಕ್ಷದಲ್ಲಿ ನಿಷ್ಠಾವಂತರಾಗಿದ್ದರು. ಪ್ರಧಾನಿ ಕರೆ ಮಾಡಿ ಹೇಳಿದ್ದಕ್ಕೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈಶ್ವರಪ್ಪ ಅವರಿಗೆ ತಮ್ಮದೇ ಆದ ಮೌಲ್ಯವಿದೆ. ಮುಂದಿನ ದಿನಗಳಲ್ಲಿ ಅವರು ಪಕ್ಷಕ್ಕೆ ಬರಲಿ ಎಂದು ಬಯಸುತ್ತೇವೆ. ಅದ್ಯಾಗೂ ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

Latest Videos

ಬೆಂಗಳೂರು ಐಟಿ ಹಬ್ ಮಂದಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! ಡಿಕೆ ಶಿವಕುಮಾರ ಕೊಟ್ಟ ಶುಭ ಸುದ್ದಿ ಏನು?

ಈಶ್ವರಪ್ಪ-ಯತ್ನಾಳ್ ಆರ್‌ಸಿಬಿ ಸಂಘಟನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನಗೆ ಪ್ರತಿಕ್ರಿಯಿಸಿ ಅವರು, ನೋ ಆರ್‌ಸಿಬಿ ಎಂದರು. ರಾಯಣ್ಣ-ಚೆನ್ನಮ್ಮ ಬ್ರಿಗೇಡ್ ಎಲ್ಲಾ ಸುಳ್ಳು. ಈಶ್ವರಪ್ಪ ಸಂಘಟನೆಗೆ ಬೆಂಬಲ ಅಂತ ಅಲ್ಲಾ. ಸಮಾಜದ ಜನರಿಗೆ ಅನ್ಯಾಯವಾಗಿದೆ ಹೋರಾಟಕ್ಕೆ  ನಮ್ಮ ಬೆಂಬಲವಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಹೋರಾಟ ನಡೆದರೆ ಬೆಂಬಲ ನೀಡುವೆ ಎಂದು ಅಚ್ಚರಿ ಮೂಡಿಸಿದರು.

ಹಿಂದೂಳಿದವರು, ದಲಿತರಿಗೆ ನ್ಯಾಯ ಕೊಡಲು ಸಿದ್ದರಾಮಯ್ಯ ಸಂಘಟನೆ ಮಾಡಿದ್ರೆ ನಮ್ಮ ಬೆಂಬಲವಿದೆ. ಈ ಹಿಂದೆ ಅಹಿಂದ ಹೋರಾಟಕ್ಕೂ ನಾವೆಲ್ಲ ಹೋಗಿದ್ದೆವು. ಕಾರಣ ಹಿಂದೂಳಿದವರ, ದಲಿತರ ನ್ಯಾಯಕ್ಕಾಗಿ. ಈಗಲೂ ಸಿದ್ದರಾಮಯ್ಯ ಜೊತೆಗೆ ಹೋಗಲು ಸಿದ್ಧ ಎಂದ ಯತ್ನಾಳ್.

click me!