ಸರ್ಕಾರಿ ಜಾಗದಲ್ಲಿ RSS ಚಟುವಟಿಕೆಗೆ ಕಡಿವಾಣ, ಸಂಘದ ಹೆಸರು ಉಲ್ಲಂಘಿಸದೇ ಜಾಣ ನಡೆ

Published : Oct 16, 2025, 04:10 PM ISTUpdated : Oct 16, 2025, 04:24 PM IST
Priyank Kharge RSS Ban Statement

ಸಾರಾಂಶ

Karnataka Government Cabinet Decision: ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಎತ್ತಿದ ಆರ್‌ಎಸ‌್‌ಎಸ್‌ಗೆ ಬ್ಯಾನ್ ಧ್ವನಿಗೆ ಸಿದ್ದರಾಮಯ್ಯ ನೇತೃತ್ವದ ಸಂಪುಟ ಪರೋಕ್ಷವಾಗಿ ಬೆಂಬಲ ನೀಡಿದ್ದು, ಸಂಘದ ಹೆಸರು ಉಲ್ಲೇಖಿಸದೇ ಸರಕಾರ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವಂತೆ ಹೇಳಿದೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಕ್ಕೆ ಸಂಪುಟ ಸಭೆಯಲ್ಲಿ ಅಂಕುಶ ಹಾಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಎಲ್ಲ ಸಂಘಗಳ ಕಾರ್ಯಕ್ರಮಗಳಿಗೂ ಕಡಿವಾಣ ಹಾಕಲು ನಿರ್ಧರಿಸಿದೆ. ಇನ್ನು ಮುಂದೆ ಸರಕಾರ ಜಾಗಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ, ಹೊಸ ನಿಯಮ ಜಾರಿಗೊಳ್ಳಲಿದೆ. ಆ ಮೂಲಕ RSS ಚಟುವಟಿಕೆಗಳಿಗೂ ಕಡಿವಾಣ ಹಾಕಲು ಸಂಪುಟ ಸಭೆ ನಿರ್ಧರಿಸಿದೆ.

ಏಷ್ಯಾ‌ನೆಟ್ ಸುವರ್ಣ ನ್ಯೂಸ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು, ಹಲವು ನಿಯಮಗಳು ನಮ್ಮಲ್ಲೇ ಇವೆ. ಬೇರೆ ಇಲಾಖೆಗಳಲ್ಲಿ ಆದೇಶಗಳಿವೆ. 2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಇದ್ದಾಗ ಶಾಲಾ ಮೈದಾನಗಳ ಬಗ್ಗೆ ಆದೇಶಿಸಿದ್ದರು. ಅದೇ ರೀತಿ ಗೃಹ ಇಲಾಖೆಯಲ್ಲಿ ಏನಿದೆ, ನಗರಾಭಿವೃದ್ಧಿ ಇಲಾಖೆಯ ನೀತಿ ನಿಯಮಗಳು ಏನಿವೆ ಎಂಬುದನ್ನು ಮನಗೊಂಡು, ಸಮಗ್ರವಾಗಿ ಕಾನೂನು ತರುತ್ತೇವೆ. ಅಲ್ಲಿ ಯಾರೇ ಇರಬಹುದು, ಸಂಘಟನೆ ಇರಬಹುದು, ಪಕ್ಷಗಳಿರಬಹುದು, ಏನೇ ಚಟುವಟಿಕೆ ಕೈಗೊಳ್ಳುವುದಾದರೂ ಕಾರಣ ಕೊಡಬೇಕು. ಉದ್ದೇಶ ಸರಿ ಇರಬೇಕು. ಇದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವುದಿಲ್ಲವೆಂಬುದನ್ನು ಹೇಳಬೇಕು. ನಾಳೆ ನಾನೇ ಸಾವಿರ ಜನ ಕರೆದುಕೊಂಡು ಲಾಟಿ‌ ಹಿಡಿದುಕೊಂಡು ಮಾರ್ಚ್ ಫಾಸ್ಟ್ ಮಾಡುತ್ತೇನೆಂದರೆ ಅನುಮತಿ ಕೊಡುತ್ತಾರಾ..? ಇಲ್ಲವಲ್ಲವೇ ಎಂದು ಹೇಳಿದ್ದಾರೆ.

ಎಲ್ಲ ಸಂಘಕ್ಕೂ ಒಂದೇ ರೂಲ್

ಸರ್ಕಾರಿ ಜಾಗದಲ್ಲಿ RSS ಕಾರ್ಯಕ್ರಮಕ್ಕೆ ರೂಲ್ಸ್​​ ಕಡ್ಡಾಯಗೊಳಿಸಿ, ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ ಸರ್ಕಾರ. ಆರ್​ಎಸ್​ಎಸ್​ ಚಟುವಟಿಕೆಗಳನ್ನು ಸರಕಾರ ಜಾಗದಲ್ಲಿ ನಡೆಸಲು ಷರತ್ತು ವಿಧಿಸಲಿದ್ದು, ಆರ್​ಎಸ್​ಎಸ್​ ಸೇರಿ ಎಲ್ಲ ಖಾಸಗಿ ಸಂಸ್ಥೆಗಳಿಗೂ ರೂಲ್ಸ್ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. RSS​ ಹೆಸರು ಉಲ್ಲೇಖಿಸದೇ ಸರ್ಕಾರ ಜಾಣ ನಡೆ ಇಟ್ಟಿದೆ.

ಹಳೇ ನಿಯಮಗಳನ್ನೇ ಮತ್ತೆ ಎತ್ತಿ ಹಿಡಿದಿದ್ದು, ಇದರಲ್ಲಿ ಹೊಸತೇನೂ ಇಲ್ಲವೆಂದು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರೆ, ಕೆಲವು ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದ್ದು, ಇದನ್ನು ತಡೆಯಲು ಸರಕಾರ ಇಂಥದ್ದೊಂದು ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗಿತ್ತೆಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನೋಡೋಣ ಸಂಘಕ್ಕೆ ಯಾವ ರೂಲ್ಸ್ ಅನ್ನು ಅದು ಹೇಗೆ ಜಾರಿಗೊಳಿಸುತ್ತಾರೆಂದು ಹೇಳಿದ್ದಾರೆ.

ಅದೇ ರೀತಿ RSS ಕೂಡ ಸಂವಿಧಾನ ಅಡಿಯಲ್ಲೇ ಬರುತ್ತೆ. ಧಾರ್ಮಿಕ ಸಂಘಟನೆ ಅಷ್ಟೇ ಅಲ್ಲ, ಉದಾಹರಣೆಗೆ ಯಾವುದೋ ಬಳಗ ನಡೆಸುತ್ತೇನೆ. ನಾಳೆ ರಸ್ತೆಯಲ್ಲಿ ಫಂಕ್ಷನ್ ಮಾಡಬೇಕು ಅಂದ್ರು ಅನುಮತಿ ತಗೊಬೇಕಲ್ಲವೇ? ನಾವು ಮಾಡುವ ಕಾರ್ಯಕ್ರಮದ ಉದ್ದೇಶ ಸರಿ ಇರಬೇಕು. ಸುಮ್ನೆ ನೂರು ಜನ ಬರೋದು, ಲಾಟಿ ಟೋಪಿ ಇಡುಕೊಂಡು ಬರ್ತಾರೆ, ರಾಜ್ಯದ ಪೊಲೀಸರು ಅವರಿಗೆ ಭದ್ರತೆ ಕೊಡಬೇಕಾಗುತ್ತೆ. ಅವರ ಉದ್ದೇಶ ಏನು? ನಾನ್ ಮಾಡಿದ್ರು ಸರಿ, ಅವರು ಮಾಡಿದ್ರು ಸರಿ ಇಲ್ಲ ಎಂದಾಗಬಾರದು. ಎಲ್ಲರಿಗೂ ಒಂದು ರೂಲ್ ಆಗಬೇಕು, ಎಂದಿದ್ದಾರೆ.

ಸರ್ಕಾರಿ ಜಾಗಗಳು ಸಂಸ್ಥೆಗಳು ಅನುದಾನಿತ ಸಂಸ್ಥೆಗಳು ಏನೇ ಮಾಡಿದರೂ ಅನುಮತಿ ಪಡೆಯಬೇಕು. ಎಲ್ಲಾ ಸ್ಥಳಗಳನ್ನು ಆದೇಶದಲ್ಲಿಯೇ ಒಳಗೊಳ್ಳುವಂತೆ ಮಾಡುತ್ತೇವೆ. ನಾಳೆ ಪ್ರಿಯಾಂಕರಿಗೆ ಬೈಠಕ್ ನಡೆಸಿದರೂಅನುಮತಿ ತೆಗೆದುಕೊಳ್ಳಬೇಕು. ನಾವು ಆರ್‌ಸಿಬಿ ಕಾಲ್ತುಳಿದತ ಆದಾಗ ಒಂದಷ್ಟು ಜನರನ್ನು ಜವಾಬ್ದಾರಿಯನ್ನಾಗಿ ಮಾಡಿದ್ದೇವೆ. ಯಾಕಂದ್ರೆ ಅವ್ರು ರಿಜಿಸ್ಟರ್ ಆಗಿರುವ ಸಂಸ್ಥೆಗಳು. ಆರ್‌ಎಸ್‌ಎಸ್ ರಿಜಿಸ್ಟರ್ ಆಗಿಲ್ಲ ಅಂದ್ರೆ ಅವ್ರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಾರೆ? ಅವರ ಅಂಗ ಸಂಸ್ಥೆಗಳು ಇದಾವಲ್ಲ, ಅನುಮತಿಗೆ ಅರ್ಜಿ ಹಾಕಲಿ ಬಿಡಿ.

ಅಗತ್ಯವಿದ್ದರೆ ಕಾನೂನು ಜಾರಿ

ನಾನು ಶಾಸಕ ಅದ್ರೆ ಶಾಸನ‌ ಮಾಡುವವನು. ಕಾನೂನು ಅಗತ್ಯ ಇದ್ರೆ ಮಾಡ್ತೇನೆ. ಅದಕ್ಕೆ ಅಲ್ವಾ ವಿಧಾನಸೌಧ ಇರೋದು, ಎಂದು ಪ್ರಿಯಾಂಕ್ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!