ತನ್ನ ತಾಯಿಯೂ ವಿಧವೆ ಅನ್ನೋದನ್ನ ಪ್ರಧಾನಿ ಮೋದಿ ಮರೆಯಬಾರದು: ಸಿದ್ದು ಗುದ್ದು

Published : Dec 08, 2018, 04:49 PM ISTUpdated : Dec 08, 2018, 07:45 PM IST
ತನ್ನ ತಾಯಿಯೂ ವಿಧವೆ ಅನ್ನೋದನ್ನ ಪ್ರಧಾನಿ ಮೋದಿ ಮರೆಯಬಾರದು: ಸಿದ್ದು ಗುದ್ದು

ಸಾರಾಂಶ

ಪಿಂಚಣಿ ಹಣ ಕಾಂಗ್ರೆಸ್‌ನ ಯಾವ ವಿಧವೆಯ ಬ್ಯಾಂಕ್ ಖಾತೆಗೆ ಹೋಗಿದೆ? ಎನ್ನುವ ಪ್ರಧಾನಿ ನರೇಂದ್ರ ಮೋದಿ ವಿವಾದಾತ್ಮಕ ಹೇಳಿಕೆಗೆ ಕೈ ಪಡೆ ಕೆರಳಿದ್ದು, ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ನರೇಂದ್ರ ಮೋದಿಗೆ ಗುದ್ದು ನೀಡಿದ್ದಾರೆ. ಹಾಗಾದ್ರೆ ಸಿದ್ದು ಕೊಟ್ಟ ಗುದ್ದು ಹೇಗಿದೆ? ನೋಡಿ

ಬೆಂಗಳೂರು,[ಡಿ.8]: ಜೈಪುರದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿ ಬಳಸಿದ 'ವಿಧವೆ' ಪದ ಭಾರಿ ವಿವಾದ ಸೃಷ್ಟಿಸಿದೆ. 

ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ತಾಯಿಯೂ ವಿಧವೆ ಎನ್ನವುದನ್ನು ಮೋದಿ ಮರೆಯಬಾರದು ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ರಾಜಸ್ಥಾನ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ದೇಶದ ವಿಧವೆಯರ ವೇತನದ ಹಣವನ್ನು ಕಾಂಗ್ರೆಸ್‍ನ ವಿಧವಾ ಮಹಿಳೆ ಲೂಟಿ ಮಾಡಿದ್ದಾಳೆ ಎಂದು ಟೀಕೆ ಮಾಡಿದ್ದರು. ಇದನ್ನು ಖಂಡಿಸಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹುಟ್ಟದೇ ಇರುವ ಹೆಣ್ಣುಮಕ್ಕಳನ್ನು ವಿಧವೆಯರೆಂದು ಪಟ್ಟಿ ಮಾಡಿ ಅವರ ಹೆಸರಿನಲ್ಲಿ ಪಿಂಚಣಿ ಪಡೆದುಕೊಳ್ಳಲಾಗಿತ್ತು. ಈ ಹಣ ಕಾಂಗ್ರೆಸ್‌ನ ಯಾವ ವಿಧವೆಯ ಬ್ಯಾಂಕ್ ಖಾತೆಗೆ ಹೋಗಿದೆ? ಎಂದು ಮೋದಿ ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ವಿಧವೆ ಎಂಬ ಪದವನ್ನು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಕುರಿತಾಗಿ ಆಡಿದ್ದು. ಈ ಮೂಲಕ ಸೋನಿಯಾ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದ ಜನರಿಗೆ ಹೊಸ ವರ್ಷಕ್ಕೆ ಪವರ್‌ ಶಾಕ್‌, 'Top Up' ಹೆಸರಲ್ಲಿ ಟೋಪಿ ರೆಡಿಮಾಡಿಕೊಂಡ KERC
ಕಿರುತೆರೆ ನಟಿ ನಂದಿನಿ ಸಾವು: ಮಗಳಿಗೆ ನಾನೇ ಮಹಾನಟಿ ಅಂತಿದ್ದೆ, ಸರ್ಕಾರಿ ಕೆಲಸದ ಬಗ್ಗೆ ಒತ್ತಡ ಹಾಕಿರಲಿಲ್ಲ- ತಾಯಿ