
ಬೆಂಗಳೂರು(ಮಾ.23): ‘ದಿ ಕಾಶ್ಮೀರಿ ಫೈಲ್ಸ್’(The Kashmir Files) ಸಿನಿಮಾ ಪ್ರದರ್ಶನಕ್ಕಾಗಿ ನಟ ಪುನೀತ್ ರಾಜ್‌ಕುಮಾರ್(Puneeth Rajkumar) ಅಭಿನಯದ ‘ಜೇಮ್ಸ್’(James) ಚಿತ್ರ ಪ್ರದರ್ಶನವನ್ನು ಬಲತ್ಕಾರದಿಂದ ವಿವಿಧ ಚಿತ್ರಮಂದಿರಗಳಿಂದ ತೆಗೆಸಲು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪರದೆಗಳನ್ನು ಕಡಿತಗೊಳಿಸಲು ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದು, ಇಂತಹ ದೌರ್ಜನ್ಯ ಮಾಡಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ರಾತ್ರಿ ‘ಜೇಮ್ಸ್’ ಚಿತ್ರದ ನಿರ್ಮಾಪಕರು ನನ್ನನ್ನು ಭೇಟಿಯಾಗಿ ‘ಅನೇಕ ಕಡೆಗಳಲ್ಲಿ ಬಿಜೆಪಿ(BJP) ಶಾಸಕರು ‘ಜೇಮ್ಸ್’ ಚಿತ್ರ ನಡೆಯುತ್ತಿರುವ ಥಿಯೇಟರ್‌ಗಳಲ್ಲಿ ಪ್ರದರ್ಶನ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾರೆ. ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ಈ ರೀತಿಯ ಒತ್ತಡ ತರುತ್ತಿದ್ದಾರೆ’ ಎಂದು ನೋವು ತೋಡಿಕೊಂಡರು. ನಿರ್ಮಾಪಕರು ಮೊದಲೇ ಥಿಯೇಟರ್‌ಗಳಿಗೆ ಅಡ್ವಾಸ್ಸ್ ಕೊಟ್ಟಿರುತ್ತಾರೆ, ಬಿಜೆಪಿಯವರು ಬಲಾತ್ಕಾರದಿಂದ ಜೇಮ್ಸ್ ಚಿತ್ರ ತೆಗೆಸುವ ದೌರ್ಜನ್ಯ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಿನಿಮಾ ನೋಡಲು ಆಸಕ್ತಿಯಿಂದ ಇದ್ದಾರೆ. ಅಂತಹ ಸಂದರ್ಭದಲ್ಲಿ ಬಲಾತ್ಕಾರದಿಂದ ಸಿನಿಮಾ ತೆಗೆಸುವುದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಪರದೆಗಳನ್ನು ಕಡಿತಗೊಳಿಸುವುದು ಸರಿಯಲ್ಲ ಎಂದರು.
Karnataka Politics: ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಭ್ರಮೆ: ಸಿದ್ದು
ಬಿಜೆಪಿಯವರು ಸಜ್ಜನರ ರೀತಿ ಆಡುತ್ತಾರೆ. ನಾವು ಯಾರನ್ನೂ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಬೇಡಿ ಅನ್ನೋದಿಲ್ಲ. ಯಾರಿಗೆ ಇಷ್ಟಇದೆಯೋ ಅವರು ನೋಡಲಿ. ಆದರೆ, ದೌರ್ಜನ್ಯ ಮಾಡಬಾರದು ಅಷ್ಟೇ ಎಂದರು.
ತೆರಿಗೆ ವಿನಾಯಿತಿ ನೀಡಲಿ:
ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಕನ್ನಡದ(Kannada) ಜೇಮ್ಸ್ ಚಿತ್ರಕ್ಕೂ ತೆರಿಗೆ ವಿನಾಯತಿ ನೀಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಆಗ್ರಹಿಸಿದರು.
ಜಾತ್ರೆಗಳಲ್ಲಿ ಮುಸ್ಲಿಂ(Muslim) ವ್ಯಾಪಾರಿಗಳ ಮಳಿಗೆಗಳಿಗೆ ಅವಕಾಶ ನಿರಾಕರಿಸುವುದು, ಮಳಿಗೆ ನೀಡದೆ ಇರುವುದು, ಅಂಗಡಿ ಟೆಂಡರ್ ನಿರಾಕರಿಸುವುದು ತಪ್ಪು. ಇದು ಫ್ರೀ ಟ್ರೇಡಿಂಗ್‌ಗೆ ವಿರೋಧ. ನಮ್ಮ ದೇಶದಲ್ಲಿ ಫ್ರೀ ಟ್ರೆಡಿಂಗ್ ಇದೆ. ಈ ರೀತಿ ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ. ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಗೋಳು ಕೇಳೋರಿಲ್ಲ!
ಬಾಗಲಕೋಟೆ: ಅದು ಹೇಳಿ ಕೇಳಿ ಮಾಜಿ ಸಿಎಂ ಅವರೊಬ್ಬರ ಸ್ವಕ್ಷೇತ್ರದ ಸರ್ಕಾರಿ ಶಾಲೆ, ಈ ಶಾಲೆಯಲ್ಲಿ 100ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ, ದುರಾದೃಷ್ಟ ಅಂದ್ರೆ ಈ ಮಕ್ಕಳು ಪಾಠ ಕೇಳಬೇಕು ಅಂದ್ರೆ ತಗಡಿನ ಶೆಡ್ಗಳೇ ಗತಿಯಾಗಿವೆ. ಕಂಗೆಡುವ ಬಿಸಿಲಿರಲಿ, ಗುಡುಗು ಸಹಿತ ಮಳೆ ಇರಲಿ, ಎಲ್ಲವನ್ನ ಸಹಿಸಿ ಮಕ್ಕಳು ತಗಡಿನ ಶೆಡ್ಗಳಲ್ಲಿಯೇ ಓದಬೇಕು. ಇದ್ರಿಂದ ಗ್ರಾಮಸ್ಥರು ಮತ್ತು ಮಕ್ಕಳು ತೀವ್ರ ಬೇಸತ್ತು ಹೋಗಿದ್ದು, ಸಮಸ್ಯೆ ಬಗೆಹರಿಸುವಂತೆ ಗೋಗರೆಯುತ್ತಿದ್ದಾರೆ.
Dakshina Kannada: ಗೋಡ್ಸೆ ವಂಶಸ್ಥರಿಂದ ಕರಾವಳಿಯ ಸಾಮರಸ್ಯ ಹಾಳು: ಸಿದ್ದರಾಮಯ್ಯ
ಹೌದು, ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ ತಾಲೂಕಿನ (badami taluk ) ತಳಕವಾಡ ಗ್ರಾಮದ (Talakavada village) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಗೋಳಿನ ಕಥೆ ಇದು. ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರವಾಗಿರೋ ತಳಕವಾಡ ಗ್ರಾಮದಲ್ಲಿ 1 ರಿಂದ 8ನೇ ತರಗತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಬರೋಬ್ಬರಿ 114 ಮಕ್ಕಳು ನಿತ್ಯ ಕಲಿಕೆಯಲ್ಲಿ ತೊಡುಗಿತ್ತಾರೆ. ಆದರೆ ಈ ಶಾಲೆಯ ಬಹುತೇಕ ಕಟ್ಟಡಗಳು ಶಿಥಿಲಗೊಂಡಿದ್ದು, ಎಲ್ಲೆಂದರಲ್ಲಿ ತರಗತಿಯ ಗೋಡೆಗಳು ಸೇರಿದಂತೆ ಮೇಲ್ಚಾವಣಿ ಬಿದ್ದು ಹೋಗಿವೆ.
ಇನ್ನು ತಳಕವಾಡ ಗ್ರಾಮ 2009 ಮತ್ತು 2019ರಲ್ಲಿ ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ ಶಾಲೆಯೂ ಸಹ ಸಂಪೂರ್ಣ ಜಲಾವೃತವಾಗಿತ್ತು. ಈ ವೇಳೆ ನೀರು ನಿಂತ ಮೇಲೆ ಗೋಡೆಗಳೆಲ್ಲಾ ಬಿದ್ದು ಹೋಗಿದ್ದರಿಂದ ನಂತರದಲ್ಲಿ ಶಾಲಾ ಆವರಣದಲ್ಲಿಯೇ ಶೆಡ್ ನಿರ್ಮಿಸಿ ಕೊಡಲಾಗಿದೆ. ಹೀಗಾಗಿ ಕಳೆದ ಮೂರು ವರ್ಷದಿಂದ ಬಿರು ಬೇಸಿಗೆ ಮತ್ತು ಬಿರುಗಾಳಿ ಮಳೆ ಬಂದ್ರೂ ಮಕ್ಕಳು ಮಾತ್ರ ಶೆಡ್ನಲ್ಲಿ ದಯನೀಯ ಸ್ಥಿತಿಯಲ್ಲಿ ಪಾಠ ಕೇಳುವಂತಾಗಿದ್ದು, ಕೂಡಲೇ ನಮ್ಮೂರಿನ ಶಾಲೆ ಸಮಸ್ಯೆ ಬಗೆಹರಿಸಿಕೊಡಿ ಅಂತ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ