ಇವತ್ ಸಿಗ್ದಿದ್ರೆ ಅಷ್ಟೇ: ಸಿದ್ದರಾಮಯ್ಯ ಭೇಟಿಗೆ ಸಾನ್ವಿ ಹಠ!

Published : Dec 19, 2018, 06:59 PM ISTUpdated : Dec 19, 2018, 07:07 PM IST
ಇವತ್ ಸಿಗ್ದಿದ್ರೆ ಅಷ್ಟೇ: ಸಿದ್ದರಾಮಯ್ಯ ಭೇಟಿಗೆ ಸಾನ್ವಿ ಹಠ!

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುಟ್ಟ ಅಭಿಮಾನಿ ಈಕೆ| ಸಿದ್ದರಾಮಯ್ಯ ಭೇಟಿಗೆ ಒಂದೇ ಸಮನೆ ಹಠ ಮಾಡ್ತಿದ್ದ ಸಾನ್ವಿ| ಬಾದಾಮಿಯ ಸಿದ್ದು ಗೃಹ ಕಚೇರಿಯಲ್ಲಿ ಸಿದ್ದು ಭೇಟಿ ಮಾಡಿದ ಸಾನ್ವಿ| ಸಾನ್ವಿಳನ್ನು ಕರೆದು ಕೆನ್ನೆ ಸವರಿ ಮುದ್ದು ಮಾಡಿದ ಸಿದ್ದರಾಮಯ್ಯ| ಸಾನ್ವಿ ಹಠಕ್ಕೆ ತಲೆಬಾಗಿದ ಬಾದಾಮಿ ನಗರದ ಜನತೆ

ಮಲ್ಲಿಕಾರ್ಜುನ್ ಹೊಸಮನಿ

ಬಾದಾಮಿ(ಡಿ.19): ಬಾದಾಮಿಯಲ್ಲಿ ಮಾಜಿ ಸಿಎಂ‌  ಸಿದ್ದರಾಮಯ್ಯ ಭೇಟಿ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಸಿದ್ದರಾಮಯ್ಯ ಭೇಟಿಗೆ ಮೂರು ವಷ೯ದ ಮಗುವೊಂದು ಹಠ ಹಿಡಿದಿದ್ದು, ಕೊನೆಗೆ ಖುದ್ದು ಸಿದ್ದರಾಮಯ್ಯ ಅವರೇ ಮಗುವನ್ನು ಕರೆಸಿ ಮಾತನಾಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಗೃಹ ಕಚೇರಿಗೆ ಮಗು ಸಾನ್ವಿಯೊಂದಿಗೆ ಬಂದಿದ್ದ ತಾಯಿ, ಮಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕೆಂದು ಹಠ ಹಿಡಿದಿದ್ದಾಳೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

"

ವಿಷಯ ತಿಳಿದ ಸಿದ್ದರಾಮಯ್ಯ ತಾಯಿ ಮತ್ತು ಮಗುವನ್ನು ಕರೆಸಿಕೊಂಡು ಮಾತನಾಡಿಸಿದ್ದಾರೆ. ಈ ವೇಳೆ ಮಗು ಸಾನ್ವಿಯ ಕೆನ್ನೆ ಸವರಿ ಮುದ್ದು ಮಾಡಿದ ಸಿದ್ದರಾಮಯ್ಯ, ಆಕೆಯೊಂದಿಗೆ ಕೆಲ ಕಾಲ ಸಂತೋಷವಾಗಿ ಕಾಲ ಕಳೆದರು.

ನೂರಾರು ಜನರ ಮಧ್ಯೆ ಮಗು ಸಾನ್ವಿಳನ್ನು ಕರೆದು ಮಾತನಾಡಿಸಿದ ಸಿದ್ದರಾಮಯ್ಯ ನಡೆಗೆ ನೆರೆದವರು ಹರ್ಷ ವ್ಯಕ್ತಪಡಿಸಿದರು. ಅಲ್ಲದೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹಠ ಮಾಡುತ್ತಿದ್ದ ಸಾನ್ವಿಗೆ ಎಲ್ಲರೂ ಮುದ್ದು ಮಾಡಿ ಕಳುಹಿಸಿಕೊಟ್ಟರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ