ಬಿ, ಸಿ ದರ್ಜೆಯ ಕಾಲೇಜು, ವಿವಿ ಮುಚ್ಚಿ: ರಾಜ್ಯಪಾಲ ವಿ.ಆರ್‌. ವಾಲಾ!

By Suvarna News  |  First Published Jan 8, 2020, 8:04 AM IST

ಬಿ, ಸಿ ದರ್ಜೆಯ ಕಾಲೇಜು, ವಿವಿ ಮುಚ್ಚಿ: ರಾಜ್ಯಪಾಲ!| ಉನ್ನತ ಶ್ರೇಣಿ ಪಡೆಯದ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ನಷ್ಟ|  ವಿವಿಗಳ ಕುಲಾಧಿಪತಿಯಿಂದ ಶಿಕ್ಷಣ ಸಂಸ್ಥೆ ಗುಣಮಟ್ಟಬಗ್ಗೆ ಬೇಸರ


ಬೆಂಗಳೂರು[ಜ.08]: ನ್ಯಾಕ್‌ ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಉನ್ನತ ರಾರ‍ಯಂಕ್‌ ನೀಡುತ್ತದೆ. ಹಲವು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಬಿ ಮತ್ತು ಸಿ ಶ್ರೇಣಿ ಪಡೆಯುತ್ತಿದ್ದು, ಇಂತಹ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ನಷ್ಟ. ಇಂತಹ ಕಾಲೇಜು-ವಿಶ್ವವಿದ್ಯಾಲಯಗಳನ್ನು ಬಂದ್‌ ಮಾಡುವುದೇ ಲೇಸು ಎಂದು ರಾಜ್ಯಪಾಲ ವಿ.ಆರ್‌. ವಾಲಾ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿರುವ 29 ವಿಶ್ವವಿದ್ಯಾಲಯಗಳಿಗೆ ಕುಲಾಧಿಪತಿಯಾಗಿರುವ ರಾಜ್ಯಪಾಲರೇ ವಿಶ್ವವಿದ್ಯಾಲಯಗಳ ಶಿಕ್ಷಣ ಗುಣಮಟ್ಟದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

Tap to resize

Latest Videos

ಮಂಗಳವಾರ ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನಡೆದ ‘ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‌’ (ನ್ಯಾಕ್‌) ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ ಅಥವಾ ಸಿ ಶ್ರೇಣಿ ಪಡೆದುಕೊಳ್ಳುವ ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಶಿಕ್ಷಣ ಗುಣಮಟ್ಟಸರಿ ಇಲ್ಲ ಎಂದು ಅರ್ಥ. ಇಂತಹ ಶ್ರೇಣಿ ಪಡೆದುಕೊಳ್ಳಲು ವಿದ್ಯಾರ್ಥಿಗಳು ವ್ಯಾಸಂಗ ಮಾಡದಿರುವುದು ಕಾರಣವಾಗಿರಬೇಕು ಅಥವಾ ಬೋಧಕರು ಸೂಕ್ತ ರೀತಿಯಲ್ಲಿ ಬೋಧನೆ ಮಾಡುತ್ತಿಲ್ಲ ಎಂದಾದರೂ ಇರಬೇಕು. ಕಡಿಮೆ ರಾರ‍ಯಂಕ್‌ ಪಡೆದಿರುವ ಶಿಕ್ಷಣ ಸಂಸ್ಥೆಗಳವರೇ ಯೋಚನೆ ಮಾಡಿ, ನಿಮ್ಮ ಕಾಲೇಜು ಇರುವುದರಿಂದ ಯಾರಿಗೆ ಪ್ರಯೋಜನ ಎಂದು ಪ್ರಶ್ನಿಸಿದರು.

ಕಡಿಮೆ ಶ್ರೇಣಿ ಹೊಂದಿರುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಂದ ವಿದ್ಯಾರ್ಥಿಗಳಿಗೆ ನಷ್ಟ. ಹೀಗಾಗಿ ಇಂತಹ ಕಾಲೇಜುಗಳು ಸುಧಾರಿಸಿಕೊಳ್ಳದಿದ್ದರೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಬಂದ್‌ ಮಾಡುವುದೇ ಲೇಸು ಎಂದು ನುಡಿದರು.

ಶಿಕ್ಷಣದಲ್ಲಿ ಗುಣಮಟ್ಟ ಎಲ್ಲಿದೆ?:

ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಮಾತನಾಡಿ, ವಿಶ್ವದ ಮೊದಲ 200 ವಿಶ್ವವಿದ್ಯಾಲಯಗಳಲ್ಲಿ ನಮ್ಮ ದೇಶದ ಒಂದೂ ವಿಶ್ವವಿದ್ಯಾಲಯ ಸ್ಥಾನ ಪಡೆದಿಲ್ಲ. ನಮ್ಮಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿವೆ, ಆದರೆ ಗುಣಮಟ್ಟಹೆಚ್ಚಾಗುತ್ತಿಲ್ಲ. ನಳಂದಾ, ತಕ್ಷಶಿಲಾ ಕಾಲದಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದ ನಮ್ಮ ಶಿಕ್ಷಣ ವ್ಯವಸ್ಥೆ ಈಗ ಎಲ್ಲಿದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಖಾಸಗಿ ಡೀಮ್‌್ಡ ವಿಶ್ವವಿದ್ಯಾಲಯಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಆದರೆ, ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಏನಾಗಿದೆ? ನಿಮಗೆ ಉತ್ತಮ ವೇತನ, ಮೂಲಸೌಕರ್ಯಗಳಿವೆ. ಆದರೂ, ಏಕೆ ನಿಮ್ಮಿಂದ ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

'ಜೋರಾಗಿ ಗಟ್ಟಿ ಜೈಕಾರ ಹಾಕದವರು ನಪುಂಸಕರು'...

"

click me!