ಮಗಳು ಕೇಂದ್ರ ಮಂತ್ರಿ : ಕನಸು ಈಡೇರಿದ ಖುಷಿಯಲ್ಲಿ ಶೋಭಾ ತಾಯಿ

Kannadaprabha News   | Asianet News
Published : Jul 09, 2021, 07:32 AM ISTUpdated : Jul 09, 2021, 07:54 AM IST
ಮಗಳು ಕೇಂದ್ರ ಮಂತ್ರಿ : ಕನಸು ಈಡೇರಿದ ಖುಷಿಯಲ್ಲಿ ಶೋಭಾ ತಾಯಿ

ಸಾರಾಂಶ

ಸಂಸದೆಯಾಗಿರುವ ಮಗಳು ದೇಶಕ್ಕೆ ಒಮ್ಮೆಯಾದರೂ ಮಂತ್ರಿಯಾಗಬೇಕು ಅನ್ನೋ ಅಮ್ಮನ ಕನಸು ನನಸು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ತಾಯಿ ಪೂವಕ್ಕ ಅವರಿಗೆ ಖುಷಿಯೋ ಖುಷಿ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಮಂತ್ರಿಯಾಗಿದ್ದು ನೋಡಿ ತುಂಬಾ ಖುಷಿಯಾಯ್ತು.

ಸಂದರ್ಶನ : ಡೆಲ್ಲಿ ಮಂಜು

 ನವದೆಹಲಿ (ಜು.09):  ಸಂಸದೆಯಾಗಿರುವ ಮಗಳು ದೇಶಕ್ಕೆ ಒಮ್ಮೆಯಾದರೂ ಮಂತ್ರಿಯಾಗಬೇಕು ಅನ್ನೋ ಅಮ್ಮನ ಕನಸು ಕೊನೆಗೂ ಈಡೇರಿತು. ಅಮ್ಮನಿಗೆ ಈಗ ಖುಷಿಯೋ ಖುಷಿ. ಹೀಗೆ ಖುಷಿಪಟ್ಟವರು ಬೇರಾರೂ ಅಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ತಾಯಿ ಪೂವಕ್ಕ. ಈ ಸಂತೋಷದ ಸಂದರ್ಭದಲ್ಲಿ  ಅವರು ಹಂಚಿಕೊಂಡ ಅನಿಸಿಕೆಗಳು ಹೀಗಿವೆ.

*ಮಗಳು ಮಂತ್ರಿಯಾಗಿದ್ದಕ್ಕೆ ಏನನಿಸಿತು?

ತುಂಬಾ ಖುಷಿಯಾಯ್ತು. ಹಿಂದೆ ರಾಜ್ಯದಲ್ಲಿ ಕೆಲಸ ಮಾಡಿದ್ದಾಳೆ. ಈಗ ಕೇಂದ್ರದಲ್ಲಿ ಕೆಲಸ ಮಾಡ್ತಾಳೆ.

ಅವಿಭಜಿತ ದ.ಕ. ಮೊದಲ ಕೇಂದ್ರ ಸಚಿವೆ ಕರಂದ್ಲಾಜೆ! ..

*ಮೋದಿ ಸರ್ಕಾರದಲ್ಲಿ ಮಗಳು ಮಂತ್ರಿಯಾಗ್ತಾಳೆ ಅಂಥ ಅಂದುಕೊಂಡಿದ್ರಾ?

ಈಗ ಮಂತ್ರಿ ಆಗುತ್ತಾಳೆ ಅಂತ ಅಂದುಕೊಂಡಿರಲಿಲ್ಲ. ಆದರೆ ಒಮ್ಮೆಯಾದರೂ ಮಗಳು ದೇಶಕ್ಕೆ ಮಂತ್ರಿ ಆಗಬೇಕು ಅಂಥ ಅಂದುಕೊಂಡಿದ್ದೆ. ಈಗ ಆ ಕನಸು ಈಡೇರಿದೆ. ಅದೂ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಮಂತ್ರಿಯಾಗಿದ್ದು ನೋಡಿ ತುಂಬಾ ಖುಷಿಯಾಯ್ತು.

*ಮಗಳು ಈಗ ಕೇಂದ್ರಸಚಿವೆ, ಯಾವ್ಯಾವ ಕೆಲಸ ಮಾಡಲು ಸಲಹೆ ಕೊಡ್ತೀರಿ?

ನನ್ನ ಮಗಳು ರೈತರ ಪರವಾಗಿ, ರೈತರಿಗೆ ಅನುಕೂಲ ಆಗುವ ಕೆಲಸ ಮಾಡಬೇಕು. ಕರ್ನಾಟಕದ ಜನರ ಪ್ರೀತಿ ಆಕೆಯ ಮೇಲಿದೆ. ರಾಜ್ಯದ ರೈತರಿಗೂ ಒಳಿತಾಗುವ ಕೆಲಸ ಆಕೆ ಮಾಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್