ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸಿಕ್ತು ಶಿವರಾಜ್ ಕುಮಾರ್ ಬಲ
ಮೇಕೆದಾಟು ಪಾದಯಾತ್ರೆಗೆ ಚಾಲನೆ ಕೊಡಲಿರುವ ಶಿವಣ್ಣ
ಬೆಂಗಳೂರು,(ಜ.08): ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ(Congress Mekedatu Padayatra) ಸ್ಯಾಂಡಲ್ವುಡ್ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಬಲ ಸಿಕ್ಕಿದೆ.
ಹೌದು...ಮೇಕೆದಾಟು(Mekedatu) ಪಾದಯಾತ್ರೆಯಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಲಿದ್ದು, ಭಾನುವಾರದಿಂದ (ಜನವರಿ 9) ಆರಂಭವಾಗಲಿರುವ ಮೇಕೆದಾಟು ಪಾದಯಾತ್ರೆಯನ್ನು ಶಿವಣ್ಣ ಉದ್ಘಾಟಿಸಲಿದ್ದಾರೆ.
undefined
Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಪಾದಯಾತ್ರೆಯಲ್ಲಿ ಭಾಗಿ ಆಗಲಿದ್ದಾರೆ. ಕಾಂಗ್ರೆಸ್ ನಾಯಕರ ಜತೆ ಶಿವಣ್ಣ ವೇದಿಕೆ ಹಂಚಿಕೊಳ್ಳಲಿದ್ದಾರೆ. ಶಿವಣ್ಣನ ಮೂಲಕ ಪಕ್ಷಾತೀತ ಹೋರಾಟವೆಂದು ಕಾಂಗ್ರೆಸ್ ಸಂದೇಶ ರವಾನಿಸಿದಂತಿದೆ.
ಕಾಂಗ್ರೆಸ್ ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಮತ್ತೊಂದೆಡೆ ಬಿಜೆಪಿ ಸರ್ಕಾರ ಏನಾದರೂ ಮಾಡಿ ಇದನ್ನ ತಡೆಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದರ ಮಧ್ಯೆ ಕನ್ನಡ ಚಿತ್ರೋದ್ಯಮ ಈಗಾಗಲೇ ಬೆಂಬಲ ನೀಡಿದ್ದು ಈಗ ನಟ ಶಿವರಾಜ್ ಕುಮಾರ್ ಪಾದಯಾತ್ರೆಗೆ ಚಾಲನೆ ನೀಡುತ್ತಿರುವುದು ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಂತಾಗಿದೆ.
ಈ ಮಧ್ಯೆ ಪಾದಯಾತ್ರೆ ಮಾಡುವಂತಿಲ್ಲ ಎಂದು ರಾಮನಗರ ಎಸ್‍ಪಿ ನೋಟಿಸ್ ಜಾರಿ ಮಾಡಿದ್ದಾರೆ. ಕೈ ನಾಯಕರ ಮನವೊಲಿಸಲು ಅರ್ಧ ಗಂಟೆ ಪ್ರಯತ್ನಿಸಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ನಾಯಕರು ಜಗ್ಗಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕೊಪ್ಪಳದಿಂದ ನೂರಾರು ಕಾರ್ಯಕರ್ತರು ಬರುತ್ತಿದ್ದಾರೆ.
ಸರ್ಕಾರ ಅನುಮತಿ ನೀಡದಿದ್ದರೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಪಣತೊಟ್ಟಿದ್ದಾರೆ. ಇದರಿಂದ ಬಿಗಿಬಂದೋಬಸ್ತ್‌ಗೆ 2 ಸಾವಿರಕ್ಕೂ ಹೆಚ್ಚು ಪೊಲೀಸರು ರಾಮನಗರ ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.
ಪಾದಯಾತ್ರೆಯ ವಿವರ
* ಜನವರಿ 9ರ ಭಾನುವಾರ ಬೆಳಿಗ್ಗೆ 8.30ಕ್ಕೆ ಮೇಕೆದಾಟು ಬಳಿಯ ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಧಿಸುವ ಸಂಗಮ ಸ್ಥಳದಿಂದ ಪ್ರಾರಂಭವಾಗುವ ಪಾದಯಾತ್ರೆ 6.5 ಕಿ. ಮೀ. ದೂರ ಸಾಗಿ ಹೆಗ್ಗನೂರು ಬಳಿ ಮಧ್ಯಾಹ್ನದ ಭೋಜನ ಮುಗಿಸಿ ಮತ್ತೆ 8.5 ಕಿ. ಮೀ. ಸಾಗಿ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮ ತಲುಪಲಿದೆ. ಸಭೆಯ ಬಳಿಕ ಅಲ್ಲೇ ರಾತ್ರಿ ವಾಸ್ತವ್ಯ.
* 2ನೇ ದಿನ ದೊಡ್ಡಾಲಹಳ್ಳಿ ಗ್ರಾಮದಿಂದ 8 ಕಿ. ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ. ಮೀ. ಸಾಗಿ ಕನಕಪುರ ತಾಲ್ಲೂಕು ಕೇಂದ್ರ ತಲುಪಲಿದೆ. ರಾತ್ರಿ ಕನಕಪುರದಲ್ಲಿ ನಾಯಕರ ವಾಸ್ತವ್ಯ.
* 3ನೇ ದಿನ ಕನಕಪುರದಿಂದ 7.3 ಕಿ. ಮೀ. ನೆಡದು ಗಾಣಳು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದ ಬಳಿ ಊಟ ಹಾಗೂ ವಿಶ್ರಾಂತಿ. ನಂತರ ಮತ್ತೆ 7 ಕಿ. ಮೀ. ಸಾಗುವ ಪಾದಯಾತ್ರೆ ಚಿಕ್ಕೇನಹಳ್ಳಿ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ.
* 4ನೇ ದಿನದ ಪಾದಯಾತ್ರೆ ಚುಕ್ಕೇನಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ 15 ಕಿ. ಮೀ. ಸಾಗಿ ಜಿಲ್ಲಾ ಕೇಂದ್ರ ರಾಮನಗರ ತಲುಪಲಿದೆ. ರಾತ್ರಿ ಅಲ್ಲಿಯೇ ಸಭೆ ನಡೆಸಿ, ನಾಯಕರು ವಾಸ್ತವ್ಯ ಹೂಡಲಿದ್ದಾರೆ.
* 5 ನೇ ದಿನದ ಪಾದಯಾತ್ರೆ ರಾಮನಗರದಿಂದ ಆರಂಭಗೊಂಡು 15 ಕಿ. ಮೀ. ಸಾಗಿ ಬಿಡದಿ ತಲುಪಲಿದೆ. ರಾತ್ರಿ ಬಿಡದಿಯಲ್ಲಿ ವಾಸ್ತವ್ಯ.
* 6ನೇ ದಿನದ ಪಾದಯಾತ್ರೆ ಬಿಡದಿಯಿಂದ ಪ್ರಾರಂಭಗೊಂಡು ಮಂಚನಾಯಕನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಕಿ. ಮೀ. ಸಾಗಿ ಕೆಂಗೇರಿ ತಲುಪಲಿದೆ. ರಾತ್ರಿ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಲ್ಲಿ ವಾಸ್ತವ್ಯ.
* 7ನೇ ದಿನದ ಪಾದಯಾತ್ರೆ ಕೆಂಗೇರಿಯಿಂದ ಪ್ರಾರಂಭ, ಬೆಂಗಳೂರು ನಗರ ಪ್ರವೇಶ. 12 ಕಿ. ಮೀ. ನಡೆದು ಬೆಂಗಳೂರಿನ ಬನಶಂಕರಿಯಲ್ಲಿ ಮೂಲಕ ಸಾಗಿ ಸಾರಕ್ಕಿ ಸಿಗ್ನಲ್ ಬಳಿಯ ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ರಾತ್ರಿ ವಾಸ್ತವ್ಯ.
* 8ನೇ ದಿನದ ಪಾದಯಾತ್ರೆ ಸಾರಕ್ಕಿಯಿಂದ ಪ್ರಾರಂಭ. ಕೋರಮಂಗಲ ಮಾರ್ಗವಾಗಿ ಸಾಗುವ ಪಾದಯಾತ್ರೆ 17.2 ಕಿ. ಮೀ. ಸಾಗಿ ರಾತ್ರಿ ಲಕ್ಷ್ಮಿಪುರಂ ಸುಬ್ರಹ್ಮಣ್ಯ ಛತ್ರದಲ್ಲಿ ವಾಸ್ತವ್ಯ.
* 9ನೇ ದಿನದ ಪಾದಯಾತ್ರೆ ಲಕ್ಷ್ಮಿಪುರಂನಿಂದ ಪ್ರಾರಂಭ. ಬಾಣಸವಾಡಿ ಮಾರ್ಗವಾಗಿ 12 ಕಿ. ಮೀ. ಸಾಗಿ ರಾತ್ರಿ ನಾಗವಾರದ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ.
* 10ನೇ ದಿನದ ಪಾದಯಾತ್ರೆ ನಾಗವಾರದಿಂದ ಪ್ರಾರಂಭವಾಗುವ ಕಾಂಗ್ರೆಸ್ ನಾಯಕರ ಪಾದಯಾತ್ರೆ 12 ಕಿ. ಮೀ. ಸಂಚಾರ ಮಾಡಿ ಗಾಯಿತ್ರಿ ವಿಹಾರ್, ಪ್ಯಾಲೇಸ್ ಗ್ರೌಂಡ್ ತಪುಪಲಿದೆ.
* ಪಾದಯಾತ್ರೆ ಕೊನೆಯ ದಿನವಾದ 11ನೇ ದಿನ ಪ್ಯಾಲೇಸ್ ಗ್ರೌಂಡ್‌ನಿಂದ ಹೊರಟು 8 ಕಿ. ಮೀ. ಸಂಚಾರ ಮಾಡಿ ರೇಸ್ ಕೋರ್ಸ್ ರೋಡ್ ಮೂಲಕ ಸಾಗಿ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮುಕ್ತಾಯ.