Shivamogga: ಜೈಲಲ್ಲೇ ಮೊಬೈಲ್‌ ಫೋನ್‌ ನುಂಗಿದ ಕೈದಿ, ಬೆಂಗಳೂರಿನಲ್ಲಿ ಗಂಭೀರ ಸರ್ಜರಿ!

By Santosh NaikFirst Published May 2, 2024, 12:34 PM IST
Highlights

ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕರು ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ 2022ರ ಅಡಿಯಲ್ಲಿ ನಿಷೇಧಿತ ವಸ್ತುವನ್ನು ಹೊಂದಿದ್ದಕ್ಕಾಗಿ ಕೈದಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಮೇ.2): ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಕೈದಿಯೊಬ್ಬನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬ್ಯಾಟರಿ ಹಾಗೂ ಸಿಮ್ ಹೊಂದಿರುವ ಮೊಬೈಲ್ಅನ್ನು ಈತನ ಹೊಟ್ಟೆಯಿಂದ ತೆಗೆದಿದ್ದಾರೆ. ಇದೀಗ, ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ 2022 ರ ಅಡಿಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕರು ನಿಷೇಧಿತ ವಸ್ತುವನ್ನು ಹೊಂದಿದ್ದಕ್ಕಾಗಿ ಕೈದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಶಿವಮೊಗ್ಗದ ಪರಶುರಾಮ್ ಅಲಿಯಾಸ್ ಚಿಂಗಾರಿ ಮಾರ್ಚ್ 28 ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಹಂತದಲ್ಲಿ ಅವರಿಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರ ನರಳಾಟ ಮುಂದುವರಿದ ಕಾರಣ ಅಧಿಕಾರಿಗಳು ಆತನನ್ನು ಶಿವಮೊಗ್ಗದ ಮೆಕ್‌ಗನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ವೈದ್ಯರು ಮೊಬೈಲ್‌ನಂಥ ವಸ್ತುವನ್ನು ನುಂಗಿರುವ ಕಾರಣಕ್ಕೆ ಈ ರೀತಿ ಆಗಿದೆ ಎಂದು ತಿಳಿಸಿದ್ದರು.

ನಂತರ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲಿರುವ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಚಿಂಗಾರಿಯನ್ನು ಕರೆದೊಯ್ತಲಾಗಿತ್ತು. ಎಪ್ರಿಲ್ 25ರಂದು ಆತನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಆತನ ಹೊಟ್ಟೆಯಿಂದ ಮೊಬೈಲ್ ತೆಗೆಯಲಾಗಿದೆ ಎಂದು ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಿಯಾಜ್ ಅಹಮದ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ಕೈದಿಯ ಹೊಟ್ಟೆಯಲ್ಲಿ ಪತ್ತೆಯಾದ ಬ್ಯಾಟರಿ ಮತ್ತು ಸಿಮ್‌ನೊಂದಿಗೆ ಮೊಬೈಲ್ ಫೋನ್ ಅನ್ನು ಶಿವಮೊಗ್ಗ ಕಾರಾಗೃಹಕ್ಕೆ ರವಾನಿಸಿದ್ದಾರೆ. ಜೈಲು ಕೈದಿಗಳು ಮೊಬೈಲ್ ಫೋನ್ ಹೊಂದುವುದನ್ನು ನಿರ್ಬಂಧಿಸಿರುವುದರಿಂದ ಅಧಿಕಾರಿಗಳು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲೋಕಸಭಾ ಚುನಾವಣೆ 2024: ಸ್ವಾರ್ಥಿ ಯಡಿಯೂರಪ್ಪ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ, ಈಶ್ವರಪ್ಪ

ಜೈಲಿನಲ್ಲಿ ಶೋಧ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲು ಪರಶುರಾಮ್ ಮೊಬೈಲ್‌ ನುಂಗಿದ್ದಾನೆ ಎನ್ನಲಾಗಿದೆ. ಕೈದಿಗಳು ಮೊಬೈಲ್ ಫೋನ್‌ಗಳು, ಗಾಂಜಾ ಮತ್ತು ಇತರ ನಿಷೇಧಿತ ವಸ್ತುಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳು ಆಗಾಗ್ಗೆ ಜೈಲಿನ ಬ್ಯಾರಕ್‌ಗಳ ಮೇಲೆ ದಾಳಿ ನಡೆಸುತ್ತಾರೆ.

ಲೋಕಸಭಾ ಚುನಾವಣೆ 2024: ಈ ಬಾರಿ ಹೆಚ್ಚಿನ ಅಂತರದಲ್ಲಿ ನಾವು ಗೆಲ್ಲುತ್ತೇವೆ, ಮಧು ಬಂಗಾರಪ್ಪ

ಕಾರಾಗೃಹದ ಅಧೀಕ್ಷಕಿ ಅನಿತಾ ಆರ್., ಕೈದಿಯ ವಿರುದ್ಧ ತುಂಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿಸಿದ್ದಾಗಿ ತಿಳಿಸಿದ್ದಾರೆ. ಆತನ ಕೃತ್ಯವು ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
 

click me!