ಕನ್ನಡಿಗರಿಗೆ ಮತ್ತೊಂದು ಆಘಾತ ಬಂದೆರಗಿದೆ. ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದರು. ಬಡವರ ಬಾಳಿಗೆ ಬೆಳಕಾಗಿದ್ದ ಶ್ರೀಗಳ ಸಾವಿಗೆ ಇಡೀ ರಾಜ್ಯವೇ ಮಮ್ಮುಲ ಮರಗುತ್ತಿದೆ. ಶ್ರೀಗಳ ಅಂತಿಮ ವಿಧಾನ ಜನವರಿ 22ರ ಸಂಜೆ 4.30ಕ್ಕೆ ನೆರವೇರಲಿದೆ.

02:53 PM (IST) Jan 21
ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದಾರೆ. ಈಗಾಗಲೇ ಚಿತ್ರೋದ್ಯಮ ಮಂಗಳವಾರದಂದು ಬಂದ್ ಘೋಷಿಸಿದೆ. ಸಿನಿಮಾ ನಟ, ನಟಿಯರು 'ಕಾಯಕಯೋಗಿಯ' ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ
02:50 PM (IST) Jan 21
ಶ್ರೀಗಳು ಶಿವೈಕ್ಯರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನು ನಾಳೆ ಮಂಗಳವಾರ ಶ್ರೀಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
02:39 PM (IST) Jan 21
02:35 PM (IST) Jan 21
24 ಗಂಟೆಗಳ ಕಾಲ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಾಳೆ ಮಧ್ಯಾಹ್ನ 03 ಗಂಟೆಯವರೆಗೆ ಅಂತಿಮ ದರ್ಶನ.
02:31 PM (IST) Jan 21
ಶ್ರೀಗಳು ಶಿವೈಕ್ಯರಾಗಿದ್ದು, ನಾಳೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ತುಮಕೂರು ಸಿದ್ಧಗಂಗಾ ಮಠಕ್ಕೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
02:30 PM (IST) Jan 21
ತುಮಕೂರು ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಂಗಳವಾರ ಚಿತ್ರೋದ್ಯಮ ಬಂದ್ ಘೋಷಿಸಲಾಗಿದೆ.
02:28 PM (IST) Jan 21
ಶ್ರೀಗಳ ಶಿವೈಕ್ಯಕ್ಕೆ ವಿ. ಸೋಮಣ್ಣ ಕಣ್ಣೀರು ಹರಿಸಿದ್ದಾರೆ. ಇತ್ತ ಎಚ್. ಡಿ ಕುಮಾರಸ್ವಾಮಿ ಹಾಗೂ ಬಿ. ಎಸ್ ಯಡಿಯೂರಪ್ಪ ಶ್ರೀಗಳಿಗೆ ಭಾರತ ರತ್ನ ನೀಡಲೇಬೆಖು ಎಂದು ಮನವಿ ಮಾಡಿಕೊಂಡಿದ್ದಾರೆ.
02:22 PM (IST) Jan 21
02:16 PM (IST) Jan 21
ಶ್ರೀಗಳು ಲಿಂಗೈಕ್ಯರಾಗಿದ್ದು, ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ನಾಡಿನಾದ್ಯಂತ 3 ದಿನ ಶೋಕಾಚರಣೆ.
02:13 PM (IST) Jan 21
ಎಚ್. ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡುತ್ತಾ 'ಶಿವಕುಮಾರ ಸ್ವಾಮೀಜಿಗಳು ಸೋಮವಾರ 11.45ಕ್ಕೆ ಶಿವೈಕ್ಯರಾಗಿರುವುದನ್ನು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ. ಭಕ್ತರು ಅವರ ಅಂತಿಮ ದರ್ಶನ ಪಡೆಯಬೇಕಾದರೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಇಲ್ಲಿ ಎಲ್ಲಾ ಕ್ಷೇತ್ರದ ಮಠಾಧೀಶರು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು, ಬಿ. ಎಸ್ ಯಡಿಯೂರಪ್ಪನವರು ಸೇರಿ ನಡೆಸಿದ ತುರ್ತು ಸಭೆಯಲ್ಲಿ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಶಾಂತಿಯಿಂದ ಅಂತಿಮ ದರ್ಶನ ಪಡೆಯಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
02:06 PM (IST) Jan 21
ನಾಡಿನ ನಡೆದಾಡುವ ದೇವರೆಣಂದೇ ಕರೆಯಲಾಗುತ್ತಿದ್ದ ಪರಮಪೂಜ್ಯ ಶ್ರೀ ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿದ್ದಾರೆ.
01:47 PM (IST) Jan 21
ಸಿದ್ಧಗಂಗಾ ಮಠಕ್ಕೆ ಹೂಗಳಿಂದ ಪಲ್ಲಕ್ಕಿಯನ್ನೂ ತರಲಾಗಿದೆ. .
01:38 PM (IST) Jan 21
ತುಮಕೂರು ಮಠದ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ. ತುಮಕೂರಿನಾದ್ಯಂತ ಅಘೋಷಿತ ಬಂದ್. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವರ್ತಕರು. ತುಮಕೂರು ಮಠ ಹಾಗೂ ನಗರದಾದ್ಯಂತ ನೀರವ ಮೌನ.
01:33 PM (IST) Jan 21
ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಭಕ್ತರನ್ನು ಆತಂಕಕ್ಕೀಡು ಮಾಡಿದೆ. ಶ್ರೀಗಳ ದರ್ಶನ ಪಡೆಯಲು ಭಕ್ತ ಸಾಗರ ಮಠದತ್ತ ಆಗಮಿಸುತ್ತಿದ್ದು, ಆವರಣದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮಠಕ್ಕೆ ತಲುಪಿರುವ ಕುಮಾರಸ್ವಾಮಿ ತುರ್ತು ಸಭೆ ನಡೆಸುತ್ತಿದ್ದಾರೆ.
01:17 PM (IST) Jan 21
ಸಿಎಂ ಕುಮಾರಸ್ವಾಮಿ ತುಮಕೂರು ಸಿದ್ಧಗಂಗಾ ಮಠಕ್ಕೆ ತೆರಳಿದ್ದು, ವೈದ್ಯರು ಹಾಗೂ ಕಿರಿಯ ಶ್ರೀಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಇನ್ನು 15-20 ನಿಮಿಷಗಳೊಳಗೆ ಶ್ರೀಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಯಲಿದೆ.
01:03 PM (IST) Jan 21
ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ತುಮಕೂರಿನ ಸಿದ್ಧಗಂಗಾ ಮಠದತ್ತ ಆಗಮಿಸುತ್ತಿದ್ದಾರೆ
12:45 PM (IST) Jan 21
ತುಮಕೂರು ಸಿದ್ಧಗಂಗಾ ಮಠದಲ್ಲಿ ಕಿರಿಯ ಶ್ರೀಗಳೊಂದಿಗೆ ಬಿಎಸ್‌ವೈ ಚರ್ಚೆ ಆರಂಭಿಸಿದ್ದಾರೆ. ಶ್ರಿಗಳ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಆತಂಕಗೊಂಡಿರುವ ಕಿರಿಯ ಶ್ರೀಗಳು
12:34 PM (IST) Jan 21
ಶ್ರೀಗಳ ಅನಾರೋಗ್ಯ ಹಿನ್ನೆಲೆ ಕಾಂಗ್ರೆಸ್ ಶಾಸಕಾಂಗ ಸಭೆ ರದ್ದುಗೊಳಿಸಲಾಗಿದೆ. ರೆಸಾರ್ಟ್ ರಾಜಕಾರಣ ಕೂಡಾ ಅಂತ್ಯಗೊಂಡಿದ್ದು, ಕಾಂಗ್ರೆಸ್ ಶಾಸಕರು ತುಮಕೂರು ಮಠದತ್ತ ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸಿದ್ಧಗಂಗಾ ಮಠಕ್ಕೆ ಭೇಟಿ ಮಾಡುವ ಸಾಧ್ಯತೆ ಇದೆ.
12:14 PM (IST) Jan 21
ಶ್ರೀಗಳ ಆರೋಗ್ಯದ ಕುರಿತಾಗಿ ಡಾ| ಪರಮೇಶ್ ಮಾಹಿತಿ ನೀಡಿದ್ದು, 'ಶ್ರೀಗಳ ಆರೋಗ್ಯ ಬಹಳ ಗಂಭೀರವಾಗಿದೆ. ಆದರೂ ಚಿಕಿತ್ಸೆ ಮುಂದುವರೆಸಿದ್ದು, ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದ್ದೇವೆ. ಬೆಂಗಳೂರಿನಿಂದ ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡವೂ ಬರುತ್ತಿದೆ. ಡಾ. ರೆಲಾರವರ ಸಲಹೆಯನ್ನೂ ಪಡೆಯುತ್ತಿದ್ದೇವೆ. ಪ್ರೋಟೀನ್ ಅಂಶವೂ ಕುಸಿದಿದೆ. ಮುಂದಿನ 2-3 ಗಂಟೆಯೊಳಗೆ ಶ್ರೀಗಳ ಆರೋಗ್ಯದ ಕುರಿತಾಗಿ ಸ್ಪಷ್ಟವಾಗಿ ತಿಳಿಯಲಿದೆ' ಎಂದಿದ್ದಾರೆ.
12:04 PM (IST) Jan 21
ವಿವಿಧ ಜಿಲ್ಲೆಗಳಿಂದ ಸಿದ್ಧಗಂಗಾ ಮಠಕ್ಕೆ ಆಗಮಿಸಿರುವ ಸುಮಾರು 20ಕ್ಕೂ ಹೆಚ್ಚು ಮಠಾಧೀಶರಿಂದ ಹಳೆ ಮಠದ ಸಿದ್ಧಗಂಗಾ ಶ್ರೀಗಳ ಕೊಠಡಿ ಬಳಿ ಕುಳಿತು ಮಂತ್ರಘೋಷ
12:01 PM (IST) Jan 21
ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರ ಹಿನ್ನೆಸ್, ಸಿಎಂ ಕುಮಾರಸ್ವಾಮಿ ತುಮಕೂರು ಸಿದ್ದಗಂಗಾ ಮಠದತ್ತ ಪಯಣ ಬೆಳೆಸಿದ್ದಾರೆ. ತಮ್ಮ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿದ ಮುಖ್ಯಮಂತ್ರಿ ಎಚ್‌ಡಿಕೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಿಂದ ಮಠದತ್ತ ಹೊರಟಿದ್ದಾರೆ. ಹೆಲಿಕಾಪ್ಟರ್ ಮೂಲಕ ತೆರಳಿರುವ ಕುಮಾರಸ್ವಾಮಿ 11.20 ಕ್ಕೆ ಪ್ರಯಾಣ ಆರಂಭಿಸಿದ್ದಾರೆ.
11:58 AM (IST) Jan 21
ಸಿದ್ಧಗಂಗಾ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ತುಮಕೂರು ಮಠದತ್ತ ಮಾಜಿ ಸಚಿವರು, ಸಂಸದರು, ಗಣ್ಯರು ಸೇರಿದಂತೆ ಗಣ್ಯಾತಿ ಗಣ್ಯರು ದೌಡಾಯಿಸಿದ್ದಾರೆ. ಈಗಾಗಲೇ, ಗೃಹ ಸಚಿವ ಎಂ. ಬಿ ಪಾಟೀಲ್ ತುಮಕೂರಿಗೆ ತಲುಪಿದ್ದು, ಬಿ. ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ೆಚ್. ಡಿ ಕುಮಾರಸ್ವಾಮಿ, ಸಂಸದ ಸದಾನಂದ ಗೌಡ, ಮುದ್ದ ಹನುಮೇಗೌಡ, ಸಂಸದ ಪ್ರತಾಪ್ ಸಿಂಹ, ಆರ್ ಅಶೋಕ್, ಸಚಿವ ವೆಂಕಟ ರಮಣಪ್ಪ, ಎಸ್. ಆರ್. ವಿಶ್ವನಾಥ್, ಡಾ. ಜಿ. ಪರಮೆಶ್ವರ್, ವಿ. ಸೋಮಣ್ಣ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಿದ್ಧಗಂಗಾ ಮಠದತ್ತ ತೆರಳಿದ್ದಾರೆ.
11:45 AM (IST) Jan 21
ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ, ತುಮಕೂರಿಗೆ ತೆರಳುವ ಮಾರ್ಗಗಳು ಬದಲು ಮಾಡಲಾಗಿದೆ. ಯಾವೆಲ್ಲಾ ಮಾರ್ಗಗಳನ್ನು ಬದಲಾಯಿಸಲಾಗಿದೆ ಇಲ್ಲಿದೆ ಮಾಹಿತಿ
11:43 AM (IST) Jan 21
ಶ್ರೀಗಳ ಆರೋಗ್ಯದಲ್ಲಿ ಭಾನುವಾರ ರಾತ್ರಿಯಿಂದ ಏರುಪೇರಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಸಿರಾಟ, ರಕ್ತದೊಟ್ಟದಲ್ಲಿ ಏರುಪೇರಾಗುತ್ತಿದೆ. ಅವರಲ್ಲಿರುವ ದಿವ್ಯಶಕ್ತಿಗೆ ಅವರು ಮಾಡುತ್ತಿದ್ದ ಲಿಂಗ ಪೂಜೆಯೇ ಕಾರಣ. ದಾಸೋಹ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪಿಸಿದ ನಡೆದಾಡುವ ದೇವರಿಗಾಗಿ ನಾವು ಪ್ರಾರ್ಥನೆ ಮಾಡೋಣ. ಆರೋಗ್ಯದಲ್ಲಿ ಏರುಪೇರಾದಾಗ ಗಣ್ಯರು ಹಾಗೂ ಜನರು ಭೇಟಿ ಕೊಡುವುದು ಸಾಮಾನ್ಯ ಹೀಗಾಗಿ ಭದ್ರತೆ ವ್ಯವಸ್ಥೆ ಹೆಚ್ಚಿಸಿದ್ದೇವೆ.
11:29 AM (IST) Jan 21
ಸಿದ್ದಗಂಗಾ ಶ್ರೀಗಳ ಆರೋಗ್ಯ ಏರುಪೇರು ಹಿನ್ನೆಲೆ, ಬೆಳಗಾವಿಯ ಹುಕ್ಕೇರಿ ಮಠದಲ್ಲಿ ಚಂದ್ರಶೇಖರ ಶ್ರೀಗಳ ನೇತೃತ್ವದಲ್ಲಿ ಸಿದ್ದಗಂಗಾ ಶ್ರೀಗಳ ಚೇತರಿಕೆಗೆ ಪ್ರಾರ್ಥನೆ ನಡೆಸಲಾಗಿದೆ. ಸಂಸದ ಸುರೇಶ್ ಅಂಗಡಿ, ಶಾಸಕ ಅನಿಲ್ ಬೆನಕೆ ಸೇರಿದಂತೆ ಭಕ್ತರಿಂದ ಪ್ರಾರ್ಥನೆ ನಡೆಯುತ್ತಿದೆ.
11:26 AM (IST) Jan 21
ಶ್ರೀಗಳಿಗೆ ಚಿಕಿತ್ಸೆ ನಿಡುತ್ತಿರುವ ಡಾ| ಪರಮೇಶ್ವರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆತಂಕ ಪಡುವ ಅಗತ್ಯ ಇಲ್ಲ. ಆರೋಗ್ಯ ಗಂಭೀರವಾಗಿದ್ದರೂ ಚಿಕಿತ್ಸೆ ಮುಂದುವರೆಸುತ್ತೇವೆ. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ. ಭಕ್ತರು ಚಿಂತಿತರಾಗುವುದು ಬೇಡ, ವದಂತಿಗಳಿಗೆ ಕಿವಿ ಕೊಡಬೇಡಿ. ಲಕ್ಷಾಂತರ ಜನರು ದರ್ಶನ ಪಡೆಯಲು ಧಾವಿಸುತ್ತಿರುವುದರಿಂದ ಭದ್ರತೆ ಕೈಗೊಳ್ಳಲಾಗಿದೆ ಎಂದಿದ್ದಾರೆ.
11:19 AM (IST) Jan 21
ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರ ಹಿನ್ನೆಲೆ, ಬೆಂಗಳೂರಿನಿಂದ ತುಮಕೂರು ಮಾರ್ಗದ ಎಲ್ಲಾ ಟೋಲ್‌ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಭದ್ರತೆಗಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.
11:18 AM (IST) Jan 21
ಸಿದ್ದಗಂಗಾ ಶ್ರೀ ಗಭೀರ ಹಿನ್ನೆಲೆಯಲ್ಲಿ ತುಮಕೂರು ಮಠದಲ್ಲಿ ಮಹತ್ವದ ತುರ್ತುಸಭೆಕರೆಯಲಾಗಿದೆ. ಮಧ್ಯಾಹ್ನ 12 ಗಂಟೆಗೆ ಸಿಎಂ ಕುಮಾರಸ್ವಾಮಿ ಸಭೆ ಡೆಯಲಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಪರಮೇಶ್ವರ್, ಸಿದ್ದಗಂಗಾ ಕಿರಿಯ ಶ್ರೀ, ಗೃಹಸಚಿವ ಎಂ.ಬಿ .ಪಾಟೀಲ್.ಐಜಿಪಿ ದಯಾನಂದ್, ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ,ತುಮಕೂರು ಜಿಲ್ಲಾಧಿಕಾರಿ,ಎಸ್.ಪಿ, ಡಿಜಿಪಿ ನೀಲಮಣಿ ರಾಜು ಭಾಗಿಯಾಗಲಿದ್ದಾರೆ.
11:15 AM (IST) Jan 21
ಶ್ರೀಗಳ ಆರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ತುಮಕೂರು, ಬೆಂಗಳೂರು, ರಾಮನಗರ , ಚಿತ್ರದುರ್ಗ , ಬೆ.ಗ್ರಾಂ, ಚಿಕ್ಕಬಳ್ಳಾಪುರ ಸುತ್ತಾಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಭದ್ರತೆಗೆ ಕೇಂದ್ರ ವಲಯದ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಕೇಂದ್ರ ವಲಯ ಅಲರ್ಟ್ ಮಾಡಿದೆ.ಸಿದ್ದಗಂಗಾ ಮಠಕ್ಕೆ ತೆರಳುತ್ತಿರುವ ಕೇಂದ್ರ ವಲಯದ ಪೊಲೀಸರು
11:10 AM (IST) Jan 21
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ, ಶಾಸಕ ಬಿ.ಸಿ.ಪಾಟೀಲ್ ಪುತ್ರಿಯ ಆರತಕ್ಷತೆ ಕಾರ್ಯಕ್ರಮ, ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ದುರ್ಗಾದೇವಿ ಕೆರೆಗೆ ನೀರು ತುಂಬಿಸುವ ಕಾಮಗಾರಿ ವೀಕ್ಷಣೆ ಒಳಗೊಂಡಂತೆ ಕೈಗೊಂಡ ಹಾವೇರಿ ಪ್ರವಾಸ ರದ್ದುಗೊಳಿಸಿದ ಸಿಎಂ ಎಚ್. ಡಿ ಕುಮಾರಸ್ವಾಮಿ ತುಮಕೂರು ಸಿದ್ಧಗಂಗಾ ಮಠಕ್ಕೆ ಪ್ರಯಾಣ ಬೆಳೆಸಿದ್ದಾರೆ.
..
11:04 AM (IST) Jan 21
ಶ್ರೀಗಳ ಅನಾರೋಗ್ಯ ಹಿನ್ನೆಲೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದಶ್ರೀಗಳು, ಸ್ವಾಮೀಜಿ ಆರೋಗ್ಯ ವಿಚಾರಿಸಲು ಬೆಂಗಳೂರಿನ ವಿಜಯನಗರ ಶಾಖಾ ಮಠದಿಂದ ತುಮಕೂರಿಗೆ ತೆರಳಿದ್ದಾರೆ.
11:01 AM (IST) Jan 21
ಶ್ರೀಗಳಿಗೆ ತೀವ್ರ ಅನಾರೋಗ್ಯ, ಮಠದ ಸುತ್ತ ಹೆಚ್ಚಿನ ಭದ್ರತೆ. ವೈದ್ಯರಿಂದ ಮುಂದುವರೆದ ಚಿಕಿತ್ಸೆ