ಕೆಪಿಸಿಸಿ ಎನ್‌ಆರ್‌ಐ (ಕತಾರ್) ಸೆಲ್ ಅಧ್ಯಕ್ಷರಾಗಿ ಶಶಿಧರ್ ಹೆಬ್ಬಾಳ ನೇಮಕ

Published : May 27, 2023, 12:21 PM ISTUpdated : May 27, 2023, 02:22 PM IST
ಕೆಪಿಸಿಸಿ ಎನ್‌ಆರ್‌ಐ  (ಕತಾರ್) ಸೆಲ್ ಅಧ್ಯಕ್ಷರಾಗಿ ಶಶಿಧರ್ ಹೆಬ್ಬಾಳ ನೇಮಕ

ಸಾರಾಂಶ

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಕೆಪಿಸಿಸಿ ಎನ್‌ಆರ್‌ಐ(ಕತಾರ್) ಸೆಲ್ ಅಧ್ಯಕ್ಷ ಡಾ.ಆರತಿ ಕೃಷ್ಣ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎನ್‌ಆರ್‌ಐ ಸೆಲ್‌ಗೆ ಅಧ್ಯಕ್ಷ ಸ್ಥಾನಕ್ಕೆ ಶ್ರೀ ಶಶಿಧರ ಹೆಬ್ಬಾಳ  ಅವರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಕತಾರ್ ದೇಶದಲ್ಲಿ ಹಾಗೂ ಭಾರತದಲ್ಲಿ ಪಕ್ಷ್ಯವನ್ನು ಬಲಪಡಿಸಲು ಸಹಾಯಕವಾಗಲಿದೆ.

ಬೆಂಗಳೂರು (ಮೇ.27) : ಭಾರತೀಯ ಸಾಗರೋತ್ತರ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಕೆಪಿಸಿಸಿ ಎನ್‌ಆರ್‌ಐ ಸೆಲ್ ಅಧ್ಯಕ್ಷ ಡಾ.ಆರತಿ ಕೃಷ್ಣ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎನ್‌ಆರ್‌ಐ(ಕತಾರ್) ಸೆಲ್‌ಗೆ ಅಧ್ಯಕ್ಷ ಸ್ಥಾನಕ್ಕೆ ಶ್ರೀ ಶಶಿಧರ ಹೆಬ್ಬಾಳ  ಅವರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಕತಾರ್ ದೇಶದಲ್ಲಿ ಹಾಗೂ ಭಾರತದಲ್ಲಿ ಪಕ್ಷ್ಯವನ್ನು ಬಲಪಡಿಸಲು ಸಹಾಯಕವಾಗಲಿದೆ.

ಶಶಿಧರ್ ಹೆಬ್ಬಾಳ(Shashidhar hebbal) ಅವರು ವಿಜಯಪುರ ಜಿಲ್ಲೆಯ ಹೊನ್ನಳ್ಳಿ  ಗ್ರಾಮದವರಾಗಿದ್ದು ಇಂಜಿನಿಯರ್ ಆಗಿ ಕಳೆದ 13 ವರ್ಷಗಳಿಂದ ಕತಾರ್‌ನಲ್ಲಿ ನೆಲೆಸಿದ್ದಾರೆ. 

ಉದ್ಯೋಗದ ಜೊತೆಗೆ ಕತಾರ್‌(Qatar)ನಲ್ಲಿರುವ ಭಾರತೀಯ ಸಮುದಾಯದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಅವರು ಈಗಾಗಲೇ ಸಾಕಷ್ಟು  ಅನಿವಾಸಿ ಭಾರತೀಯರಿಗೆ ಸಹಾಯ ಮಾಡಿದ್ದು ಈ ಹೊಸ ಜವಾಬ್ದಾರಿಯಿಂದ  ಇನ್ನಷ್ಟು ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಭಾರತೀಯರ ಸಮಸ್ಯೆ ನಿರ್ವಹಿಸುತ್ತಾರೆ ಅನ್ನುವ ಆಶಾಭಾವನೆ ಹೊಂದಿದ್ದೇವೆ.

ಅವರು ಈಗಾಗಲೇ UKBQ ಸಂಸ್ಥಾಪಕರು ಮತ್ತು ಪ್ರಸ್ತುತ ಕತಾರ್‌ನಲ್ಲಿರುವ ಭಾರತೀಯ ಸಮುದಾಯದ ಹಿತಚಿಂತಕ ವೇದಿಕೆಯ ಸಲಹೆಗಾರರಾಗಿದ್ದಾರೆ.

ಲೋಕಸಭೆ ಚುನಾವಣೆಗೆ ಸಜ್ಜಾಗಿ: ಅಸೆಂಬ್ಲಿ ಪರಾಜಿತರಿಗೆ ಡಿಕೆಶಿ ಪತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!