ಝಾಲಾಚ ಪಾಯಿಜೇ ಎಂದವರಿಗೆ ಶ್.....ಎಂದ ಪವಾರ್!

By Web Desk  |  First Published Jan 12, 2019, 6:55 PM IST

ಇದಕ್ಕಿಂತ ಮುಖಭಂಗ ಇನ್ನೇನು ಆಗ್ಬೇಕು?| ಶರದ್ ಪವಾರ್ ಮುಂದೆ ನಾಡ ವಿರೋಧಿ ಘೋಷಣೆ ಕೂಗಿದ ಎಂಇಎಸ್ ನಾಯಕರು| ಬೆಳಗಾವಿಗೆ ಬಂದಿದ್ದ ಎನ್ ಸಿಪಿ ಮುಖ್ಯಸ್ಥ ಶರದ ಪವಾರ್| ಕಡೋಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಕಾರ್ಯಕ್ರಮ| ಘೋಷಣೆ ಕೂಗಲೆತ್ನಿಸಿದ ಎಂಇಎಸ್ ನಾಯಕರ ಮೇಲೆ ಪವಾರ್ ಗರಂ


ಬೆಳಗಾವಿ(ಜ.12): ಬೆಳಗಾವಿಯಲ್ಲಿ ಏರ್‌ಪೋರ್ಟ್ ನಲ್ಲಿ ಎಂಇಎಸ್ ನಾಯಕರು ಉದ್ಘಟತನ ಮೆರೆದಿದ್ದು, ಬೆಳಗಾವಿ ಏರ್‌ಪೋರ್ಟ್ ಗೆ ಬಂದಿಳಿದ ಎನ್‌ಸಿಪಿ ಮುಖ್ಯಸ್ಥ ಶರದ ಪವಾರ್ ಮುಂದೆ ನಾಡದ್ರೋಹಿ ಘೋಷಣೆ ಕೂಗಲು ಪ್ರಯತ್ನಿಸಿದ್ದಾರೆ.

ಆದರೆ ಉದ್ಘಟತನ ಪ್ರದರ್ಶಿಸಲು ಮುಂದಾದ ಎಂಇಎಸ್ ನಾಯಕರು ಶರದ ಪವಾರ್ ಅವರಿಂದಲೇ ಮುಖಭಂಗ ಅನುಭವಿಸಿದ್ದಾರೆ.

Tap to resize

Latest Videos

"

ಬೆಳಗಾವಿ ಸಮೀಪದ ಕಡೋಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶರದ ಪವಾರ್, ಏರ್‌ಪೋರ್ಟ್ ಗೆ ಬಂದಿಳಿಯುತ್ತಿದ್ದಂತೇ ನಾಡ ವಿರೋಧಿ ಘೋಷಣೆ ಕೂಗಿದ ಎಂಇಎಸ್ ನಾಯಕರು ಮುಂದಾಗಿದ್ದಾರೆ. ನಾಯಕರು ಘೋಷಣೆ ಕೂಗುತ್ತಿದ್ದಂತೆ ಗರಂ ಆದ ಶರದ ಪವಾರ್, ಘೋಷಣೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಸುಮ್ಮನಾಗಿಸಿದ್ದಾರೆ.

ಬೆಳಗಾವಿ, ನಿಪ್ಪಾಣಿ,ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾಯಿಜೇ ಎಂದು ಘೋಷಣೆ ಕೂಗುತ್ತಿದ್ದ ಎಂ.ಇ.ಎಸ್ ನಾಯಕರು, ಪವಾರ್ ಸೂಚನೆ ಮೇರೆಗೆ ಸುಮ್ಮನಾದರು.
 

click me!