ಬ್ಯಾಂಕ್‌ ಹಗರಣದ ಬಗ್ಗೆ ಸಿಬಿಐ ತನಿಖೆ, ಸಿದ್ಧರಾಮಯ್ಯ ಹೇಳಿದ ಸುಳ್ಳು ಆರ್‌ಟಿಐ ಮಾಹಿತಿಯಿಂದ ಬಯಲು!

By Santosh Naik  |  First Published Aug 20, 2024, 1:20 PM IST

Sri Guru Raghavendra Sahakara Bank Niyamitha bank Scam 2023ರಲ್ಲಿ ಸಿಎಂ ಸಿದ್ಧರಾಮಯ್ಯ, ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದೇವೆ. ಅವರು ತನಿಖೆ ಮಾಡುತ್ತಿದ್ದಾರೆ ಎಂದಿದ್ದರು. ಆದರೆ, ಆರ್‌ಟಿಐ ಮಾಹಿತಿಯಲ್ಲಿ ಸ್ವತಃ ಸಿಬಿಐ ತಾವು ಈ ಪ್ರಕರಣದ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದೆ.


ಬೆಂಗಳೂರು (ಆ.20): ಬೆಂಗಳೂರು ಮೂಲದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ (ಎಸ್‌ಜಿಆರ್‌ಎಸ್‌ಬಿಎನ್) ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದ ಹಗರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಸಿಬಿಐನಿಂದ ದೊರೆತಿರುವ ಆರ್‌ಟಿಐ ಪ್ರತಿಕ್ರಿಯೆಯು ಅನುಸಾರ, ಈ ಪ್ರಕರಣದ ತನಿಖೆಯನ್ನು ಸಿಬಿಐ ವರಹಿಸಿಕೊಂಡಿಲ್ಲ. ಆದರೆ, ಸಿಎಂ ಸಿದ್ಧರಾಮಯ್ಯ ಕಳೆದ ಡಿಸೆಂಬರ್‌ನಲ್ಲಿ ಈ ಕೇಸ್‌ಅನ್ನು ಸಿಬಿಐಗೆ ವಹಿಸಲಾಗಿದ್ದು ಅವರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದರು. ಈಗ ಸಿಬಿಐ ನೀಡಿರುವ ಹೇಳಿಕೆ, ಸಿದ್ಧರಾಮಯ್ಯ ಅವರ ಹೇಳಿಕೆಗಿಂತ ವ್ಯತಿರಿಕ್ತವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಕ್ಕಾಗಿ ಭಾರಿ ವಿವಾದದ ಹಿನ್ನೆಲೆಯಲ್ಲಿ ಈ ಆರ್‌ಟಿಐ ಉತ್ತರ ಬಂದಿದೆ. ಆದರೆ ಮುಡಾ ಹಗರಣದಲಲ್ಲಿ ಅಲ್ಪ ಸಮಾಧಾನ ಎನ್ನುವಂತೆ ಕರ್ನಾಟಕ ಹೈಕೋರ್ಟ್‌ ಇದರ ವಿಚಾರಣೆಯನ್ನು ಆಗಸ್ಟ್‌ 29ಕ್ಕೆ ಮುಂದೂಡಿಕೆ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಸ್‌ಜಿಆರ್‌ಎಸ್‌ಬಿಎನ್ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಆದರೆ ಏಜೆನ್ಸಿಯ ಆರ್‌ಟಿಐ ಪ್ರತಿಕ್ರಿಯೆಯು ಠೇವಣಿದಾರರಿಗೆ ದೊಡ್ಡ ನಿರಾಶೆಯನ್ನುಂಟು ಮಾಡಿದೆ. ಠೇವಣಿದಾರರು ಈ ಕೇಸ್‌ನಲ್ಲಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದು ಮಾತ್ರವಲ್ಲದೆ,  ನ್ಯಾಯ ಮತ್ತು ಸತ್ಯವನ್ನು ಬಹಿರಂಗಪಡಿಸುವ ಏಕೈಕ ಮಾರ್ಗ ಅದಾಗಿದೆ ಎಂದಿದ್ದರು.

ಬ್ಯಾಂಕ್‌ ಹಗರಣ ಬೆಳಕಿಗೆ ಬಂದ ಬಳಿಕ ಡೆಪಾಸಿಟರ್‌ಗಳ ಭವಿಷ್ಯ ಅನಿಶ್ಚಿತವಾಗಿದೆ ಎಂದು ಹೇಳಿದ್ದ ಸಿದ್ದರಾಮಯ್ಯ,   ಪ್ರಕರಣದ ತನಿಖೆಗೆ ತನಿಖಾ ಸಂಸ್ಥೆ ಅನುಮತಿ ಪಡೆದಿದೆ ಎಂದು ಹೇಳಿದ್ದರು. ‘ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ವಸಿಷ್ಠ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಬ್ಯಾಂಕ್ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಲು ಅನುಮೋದನೆ ನೀಡಲಾಗಿದೆ’ ಎಂದಿದ್ದರು.

"ಸಾವಿರಾರು ಠೇವಣಿದಾರರು ತಮ್ಮ ನಿವೃತ್ತಿ, ಮಕ್ಕಳ ಮದುವೆ, ಮನೆ ಖರೀದಿ ಮತ್ತು ಇತರ ಕನಸುಗಳ ಭರವಸೆಯೊಂದಿಗೆ ತಮ್ಮ ಜೀವಮಾನದ ಉಳಿತಾಯವನ್ನು ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದಾರೆ. ಬ್ಯಾಂಕ್‌ನ ಮೋಸದ ಚಟುವಟಿಕೆಗಳಿಂದಾಗಿ, ಅವರು ಈಗ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತರಾಗಿದ್ದಾರೆ" ಎಂದು ಹೇಳಿದ್ದರು.

Tap to resize

Latest Videos

ಸಿದ್ದು ಪತ್ನಿ ಸರಳ ವ್ಯಕ್ತಿತ್ವದವರು, ಅವರ ಹೆಸರಿಗೆ ಬಿಜೆಪಿ ಮಸಿ: ದೇಶಪಾಂಡೆ ಕಿಡಿ

ಏನಿದು ಹಗರಣ: ಬೆಂಗಳೂರು ಮೂಲದ ಸಹಕಾರಿ ಬ್ಯಾಂಕ್ SGRSBN ಒಳಗೊಂಡಿರುವ ಹಗರಣವು 2020 ರಲ್ಲಿ ಬೆಳಕಿಗೆ ಬಂದಿತು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿನ ಮೇಲೆ ವಿತ್‌ಡ್ರಾ ನಿರ್ಬಂಧಗಳನ್ನು ವಿಧಿಸಿತ್ತಲ್ಲದೆ, ಬ್ಯಾಂಕ್ ಆಡಳಿತ 2,500 ಕೋಟಿ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದೆ ಎಂದು ದೂರಿತ್ತು. 45,000 ಕ್ಕೂ ಹೆಚ್ಚು ಠೇವಣಿದಾರರು ತಮ್ಮ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದ್ದರು. ಅದರಲ್ಲಿ ಹೆಚ್ಚಿನವರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ನಿಂದ 5 ಲಕ್ಷ ರೂಪಾಯಿ ಹಣವನ್ನು ಮಾತ್ರವೇ ಪಡೆದುಕೊಂಡಿದ್ದಾರೆ. ಆದರೆ, 6 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿ ಹೊಂದಿರುವ 15,000ಕ್ಕೂ ಹೆಚ್ಚು ಠೇವಣಿದಾರರಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ.. ಜಾರಿ ನಿರ್ದೇಶನಾಲಯವು ಬ್ಯಾಂಕ್‌ನ 159 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಬ್ಯಾಂಕ್‌ನ ಆಡಳಿತ ಮಂಡಳಿ ಕೂಡ ಇತರರೊಂದಿಗೆ ಶಾಮೀಲಾಗಿ ದೊಡ್ಡ ಮೊತ್ತದ ಹಣವನ್ನು ನುಂಗಿಹಾಕಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಸಿದ್ದರಾಮಯ್ಯ ಮನೆಗೆ ತೊಲಗಲಿ, ಅವರು ಸಮಾಜವಾದಿ ಅಲ್ಲ ಮಜಾವಾದಿ: ವಿಜಯೇಂದ್ರ ಆಕ್ರೋಶ

click me!