ಶವಾಗಾರದಲ್ಲೇ ಪಲ್ಲಂಗದಾಟ: ಪೋಸ್ಟ್‌ಮಾರ್ಟಮ್‌ ಮಾಡೋ ಜಾಗದಲ್ಲಿ ಇದೆಂತಾ ಕರ್ಮ

Published : Nov 11, 2022, 05:18 PM IST
ಶವಾಗಾರದಲ್ಲೇ ಪಲ್ಲಂಗದಾಟ: ಪೋಸ್ಟ್‌ಮಾರ್ಟಮ್‌ ಮಾಡೋ ಜಾಗದಲ್ಲಿ ಇದೆಂತಾ ಕರ್ಮ

ಸಾರಾಂಶ

Kodagu sex scandal: ಕೋವಿಡ್‌ ಸಂದರ್ಭದಲ್ಲಿ ಹತ್ತಾರು ಶವಗಳನ್ನು ಪೋಸ್ಟ್‌ಮಾರ್ಟಮ್ ಮಾಡಿ ಶವಸಂಸ್ಕಾರ ಮಾಡಿ ಮಾದರಿಯಾಗಿದ್ದ ವ್ಯಕ್ತಿಯೊಬ್ಬ ಈಗ ಶವಾಗಾರದಲ್ಲೇ ಪಲ್ಲಂಗದಾಟವಾಡಿದ ಆರೋಪಕ್ಕೆ ಸಿಲುಕಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ ರಕ್ತ ಸಂಬಂಧಿಗಳಾದರೂ ಶವಗಳನ್ನು ಮುಟ್ಟುವುದೆಂದರೆ ಅದೇಕೋ ಒಂದು ಸಣ್ಣ ಅಳುಕು ತೋರುತ್ತಾರೆ. ಆದರೆ ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಆತ ಯಾವುದೇ ರೀತಿಯಲ್ಲಿ ಸತ್ತು ಶವಾಗಾರ ಸೇರುತ್ತಿದ್ದ ಮೃತದೇಹಗಳ ಪೋಸ್ಟ್ ಮಾರ್ಟಂ ಮಾಡುತ್ತಿದ್ದ. ಅದರಲ್ಲೂ ಕೋವಿಡ್ ಮಾಹಮಾರಿ ನೂರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಂತು ಆತ ಹಗಲಿರುಳು ಶ್ರಮಿಸಿ ಶವಸಂಸ್ಕಾರ ಮಾಡುತ್ತಿದ್ದ. ಇಂತಹ ಮುಖವಾಡ ಇರುವವ ಬಹು ಕಾಮಿಯಾಗಿದ್ದನೇ ಎನ್ನುವ ಅನುಮಾನಗಳು ದಟ್ಟವಾಗಿವೆ. ಜೊತೆಗೆ ಆತ ಇದೇ ಶವಾಗಾರದಲ್ಲಿರುವ ಪೊಲೀಸ್ ವರದಿ ಕೊಠಡಿಯಲ್ಲೇ ಹಲವು ಮಹಿಳೆಯರು, ಹೆಣ್ಣುಮಕ್ಕಳೊಂದಿಗೆ ಪಲ್ಲಂಗದಾಟ ಆಡಿದ್ದಾನೆ ಎನ್ನುವುದನ್ನು ಆತನೇ ಮಾತನಾಡಿರುವ ಆಡಿಯೋಗಳು ಸಾಬೀತುಪಡಿಸಿವೆ.

ಈ ಕೆಲಸ ಗೊತ್ತಾಗುತ್ತಿದ್ದಂತೆ ಆಡಿಯೋಗಳೊಂದಿಗೆ ಆತನ ವಿರುದ್ಧ ಹಿಂದೂ ಜಾಗರಣಾ ವೇದಿಕೆಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್ ಗೆ ದೂರು ನೀಡಿದ್ದಾರೆ. ಅದೇ ದೂರನ್ನು ಮೆಡಿಕಲ್ ಕಾಲೇಜು ಡೀನ್ ಕಾರಿಯಪ್ಪ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಹೌದು ಆತ ಬೇರೆ ಯಾರು ಅಲ್ಲ ಕೋವಿಡ್ ಸಂದರ್ಭದಲ್ಲಿ ತುಂಬಾ ಶ್ರಮಿಸಿದ್ದಾನೆ ಎಂದೆಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಪ್ರಸಂಶೆಪಡೆದು ಸನ್ಮಾನಿತನಾಗಿದ್ದ ಸೈಯದ್ ಇಂತಹ ಕರ್ಮಕಾಂಡಗಳನ್ನು ಮಾಡಿದ್ದಾನೆ. 2021 ರ ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ಆಧಾರದಲ್ಲಿ ಶವಾಗಾರದ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಸೈಯದ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರನ್ನು ಫೋನ್ ಕರೆಮಾಡಿ ಶವಾಗಾರಕ್ಕೆ ಕರೆದು ಅಲ್ಲಿ ಪಲ್ಲಂಗದಾಟ ನಡೆಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮೂಡಬಿದಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ!

ಆತ ಕರೆ ಮಾಡಿ ಮಾರ್ಚರಿ ಬಳಿಗೆ ಬರುವಂತೆ ಹಲವರೊಂದಿಗೆ ಮಾತನಾಡಿರುವ ಆಡಿಯೋಗಳು ದೊರೆತ್ತಿವೆ. ಅಷ್ಟಕ್ಕೂ ಈ ಆಡಿಯೋಗಳು ದೊರೆತ್ತಿರುವ ವಿಷಯವೇ ಇಂಟ್ರೆಸ್ಟಿಂಗ್ ಆಗಿದೆ. ಪಾಪಿ ಸೈಯದ್ ತಿಂಗಳ ಹಿಂದೆ ಮಡಿಕೇರಿ ನಗರದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದನಂತೆ, ಈ ವೇಳೆ ಜನರಿಗೆ ಸಿಕ್ಕಿಬಿದ್ದಿದ್ದ ಆತನಿಗೆ ಗೂಸಾ ಕೊಟ್ಟಿದ್ದ ಜನರು ಆತನ ಫೋನ್ ಅನ್ನು ಪೊಲೀಸ್ ವಶಕ್ಕೆ ನೀಡಿದ್ದರಂತೆ. ಆತನ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಆತನ ಯಾರೊಂದಿಗೆಲ್ಲಾ, ಏನೆಲ್ಲಾ ಮಾತನಾಡಿದ್ದಾನೆ ಎನ್ನುವುದು ಬಟಾಬಯಲಾಗಿದೆ. ಹೀಗೆ ಸಾಕಷ್ಟು ಹೆಣ್ಣು ಮಕ್ಕಳು, ಮಹಿಳೆಯರನ್ನು ಸಯ್ಯದ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನುವುದು ಗೊತ್ತಾಗಿದೆ. ಯಾರಾದರೂ ಮಹಿಳೆಯರು, ಹೆಣ್ಣುಮಕ್ಕಳು ಸತ್ತು ಅವರ ಮೃತದೇಹಗಳನ್ನು ಶವಾಗಾರಕ್ಕೆ ಹಾಕಿದರೆ, ಪೋಸ್ಟ್ ಮಾರ್ಟಂಗೂ ಮೊದಲೇ ಈ ಕಿರಾತಕ ಆ ಸತ್ತ ಮಹಿಳೆಯರ, ಹೆಣ್ಣುಮಕ್ಕಳ ಬೆತ್ತಲೇ ಮೃತದೇಹಗಳ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದುದಿಟ್ಟುಕೊಳ್ಳುತ್ತಿದ್ದ ಎನ್ನುವ ಘೋರ ವಿಷಯವೂ ಗೊತ್ತಾಗಿದೆ.

ಇದನ್ನೂ ಓದಿ: ಹಾಸನ: ಪತ್ನಿ ಕೊಂದು ಮನೆಗೆ ಬೀಗ ಹಾಕಿ ಪತಿ ಎಸ್ಕೇಪ್

ಇದು ಅತ್ಯಂತ ಗಂಭೀರ ಅಪರಾಧ. ಈ ಕುರಿತು ಮೆಡಿಕಲ್ ಕಾಲೇಜು ಡೀನ್ ಅವರನ್ನು ಕೇಳಿದರೆ, ಈ ವಿಷಯವೇ ನಮಗೆ ಗೊತ್ತಿರಲಿಲ್ಲ. ಆದರೆ ಘಟನೆ ಸಂಬಂಧ ಪೊಲೀಸರು ನಮಗೆ ಕರೆ ಮಾಡಿ ವಿಚಾರಿಸಿದಾಗಲೇ ಗೊತ್ತಾಗಿದ್ದು ಎಂದಿದ್ದಾರೆ. ಈ ವಿಷಯ ಬೆಳಕಿಗೆ ಬರುತ್ತಿದ್ದ ಸೈಯದ್ ಕೆಲಸ ಬಿಟ್ಟಿದ್ದು, ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಈ ಪಾಪಿ ಶವಾಗಾರವನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡಿರುವುದರ ಜೊತೆಗೆ ಸತ್ತ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಹೀನ ದೃಷ್ಟಿಯಿಂದ ನೋಡುತ್ತಿದ್ದ ಎನ್ನುವುದು ನಿಜಕ್ಕೂ ಅಸಹ್ಯ ಅಷ್ಟೇ ಘೋರ ವಿಚಾರವಾಗಿದೆ ಎನ್ನುವುದು ಅಚ್ಚರಿಯ ಸಂಗತಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!